Advertisement

ಸುಳ್ಳನ್ನೇ ಸತ್ಯವಾಗಿಸಲು ಮೋದಿ ಪ್ರಯತ್ನ : ಸ್ವಾಮಿ ಅಗ್ನಿವೇಶ್‌

01:14 AM Mar 09, 2020 | Sriram |

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಗಳನ್ನೇ ಹೇಳುತ್ತಾರೆ. ಒಂದು ಸುಳ್ಳನ್ನು ಹಲವು ಬಾರಿ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದಾಗಿ ಅವರು ನಂಬಿದ್ದಾರೆ ಎಂದು ಪ್ರಗತಿಪರ ಚಿಂತಕ ಸ್ವಾಮಿ ಅಗ್ನಿವೇಶ್‌ ಹೇಳಿದ್ದಾರೆ.

Advertisement

ಕೇಂದ್ರ ಸರಕಾರವು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಾಗೂ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ದ.ಕ. ಜಿಲ್ಲಾ ಪೌರ ಸಮನ್ವಯ ಸಮಿತಿಯ ಆಶ್ರಯದಲ್ಲಿ ರವಿವಾರದಂದು ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ಬಳಿ ಜರಗಿದ ಪೌರತ್ವ ಸಂರಕ್ಷಣಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಗುಜರಾತ್‌ ಮಾದರಿ ಗಲಭೆ
ಮೋದಿಯವರು ಮುಖ್ಯಮಂತ್ರಿ ಯಾಗಿದ್ದ ವೇಳೆ ಗುಜರಾತ್‌ನಲ್ಲಿ ನಡೆದಿದ್ದ ಗಲಭೆಯಂತೆಯೇ ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಗಲಭೆ ನಡೆದಿದೆ. ಹೊಸದಿಲ್ಲಿಯ ಗಲಭೆಯಲ್ಲಿ ಹಿಂದೂ, ಮುಸ್ಲಿಮರು ಸಾವನ್ನಪ್ಪಿರುವುದು ಮಾತ್ರವಲ್ಲದೆ ಮನುಷ್ಯತ್ವವೇ ಸತ್ತು ಹೋಯಿತು ಎಂದರು.

ಪ್ರಜ್ಞಾ ದೇಶದ್ರೋಹಿ
ಪಾಕಿಸ್ಥಾನ ಪರ ಘೋಷಣೆ ಕೂಗಿದವರನ್ನು, ಸಿಎಎ ವಿರುದ್ಧ ನಾಟಕ ಮಾಡಿಸಿದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವ ಬದಲು ನಾಥೂರಾಮ್‌ ಗೋಡ್ಸೆಯನ್ನು ಹೊಗಳಿದ ಪ್ರಜ್ಞಾಸಿಂಗ್‌ ಠಾಕೂರ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕಿತ್ತು. ಸಂವಿಧಾನದ ರಕ್ಷಣೆ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರಿಂದ ಸಾಧ್ಯವಿಲ್ಲ. ಈ ದೇಶದ ಜನರೇ ದೇಶದ ಸಂವಿಧಾನ ರಕ್ಷಿಸುತ್ತಾರೆ ಎಂದು ಅಗ್ನಿವೇಶ್‌ ಹೇಳಿದರು.

ಮದ್ಯಪಾನ ನಿಷೇಧಿಸಿ
ನೋಟು ಅಮಾನ್ಯ ಮಾಡುವ ಬದಲು ದೇಶದಾದ್ಯಂತ ಮದ್ಯಪಾನ ನಿಷೇಧ ಮಾಡಿದ್ದರೆ ಅದನ್ನು ನಾನು ಕೂಡ ಬೆಂಬಲಿಸುತ್ತಿದ್ದೆ ಎಂದು ಅಗ್ನಿವೇಶ್‌ ಹೇಳಿದರು.
ಮಾಜಿ ಸ್ವೀಕರ್‌ ರಮೇಶ್‌ ಕುಮಾರ್‌, ಶಾಸಕರಾದ ಯು.ಟಿ. ಖಾದರ್‌, ಐವನ್‌ ಡಿ’ಸೋಜಾ, ವಿಧಾನಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌, ಐಯುಎಂಎಲ್‌-ವೈ.ವಿಂಗ್‌ ಅಧ್ಯಕ್ಷ ಮುನವ್ವರಲಿ ಶಿಹಾಬ್‌ ತಂಞಳ್‌ ಪಾಣಕ್ಕಾಡ್‌, ಮಾಜಿ ಶಾಸಕ ಮೊದಿನ್‌ ಬಾವಾ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next