Advertisement

ಮೋದಿ ಅಮೆರಿಕ ಪ್ರವಾಸ ಆರಂಭ 

12:29 AM Sep 23, 2021 | Team Udayavani |

ಹೊಸದಿಲ್ಲಿ,: ಕೊರೊನಾ ಬಳಿಕ ಮೊದಲ ಬಾರಿಗೆ ಮತ್ತು ಸುಮಾರು 2 ವರ್ಷಗಳ ಅನಂತರ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಜೋ ಬೈಡೆನ್‌, ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‌ ಸೇರಿದಂತೆ ನಾನಾ ನಾಯಕರನ್ನು ಭೇಟಿಯಾಗಲಿದ್ದಾರೆ.

Advertisement

ಈ ಪ್ರವಾಸ ಹಲವಾರು ವಿಶೇಷಗಳಿಗೂ ಕಾರಣವಾಗಿದೆ. 2019ರ ಸೆಪ್ಟಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗಿಯಾಗಿದ್ದ ಮೋದಿ, ಬಳಿಕ ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವುದು ಈಗಲೇ. ಅಷ್ಟೇ ಅಲ್ಲ ಬೈಡೆನ್‌ ಅಧ್ಯಕ್ಷರಾದ ಮೇಲೆಯೂ ಇದೇ ಮೊದಲ ಬಾರಿಗೆ ಮುಖಾಮುಖೀಯಾಗುತ್ತಿರುವುದು. ವಿದೇಶಾಂಗ ಸಚಿವ ಜೈಶಂಕರ್‌ ಮತ್ತು ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಪ್ರಧಾನಿಗೆ ಸಾಥ್‌ ನೀಡಿದ್ದಾರೆ.

ಹೊರಡುವ ಮುನ್ನ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೈಡೆನ್‌ ಜತೆಗಿನ ದ್ವಿಪಕ್ಷೀಯ ಮಾತುಕತೆ, ಬಾಂಧವ್ಯ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next