Advertisement

Qatar: ಯೋಧರ ಬಿಡುಗಡೆಗೆ ಕತಾರ್‌ಗೆ ಮೋದಿ ಧನ್ಯವಾದ

12:53 AM Feb 16, 2024 | Team Udayavani |

ದೋಹಾ: ಯುಎಇ ಪ್ರವಾಸದ ಬಳಿಕ ಕತಾರ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಗುರು­ವಾರ ಕತಾರ್‌ ದೊರೆ ಶೇಖ್‌ ತಮೀಮ್‌ ಬಿನ್‌ ಹಮದ್‌ ಅಲ್‌-ಥಾನಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಕತಾರ್‌ ಮತ್ತು ಭಾರತದ ನಡುವಿನ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಇಂಧನ ಮತ್ತು ಸಾಂಸ್ಕೃತಿಕ ಕ್ಷೇತ್ರ­ಗಳಲ್ಲಿ ಬಾಂಧವ್ಯ ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿರು­ವುದಾಗಿ ಹೇಳಿದ್ದಾರೆ.

Advertisement

ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನೌಕಾ­ಪಡೆಯ 8 ಯೋಧರನ್ನು ಬಿಡುಗಡೆ­ಗೊಳಿಸಿದ ಬಳಿಕ ಆ ರಾಷ್ಟ್ರಕ್ಕೆ ಪ್ರಧಾನಿ ಮೋದಿ ಅವರ ಮೊದಲನೇ ಭೇಟಿ ಇದಾಗಿದ್ದು, ಯೋಧರ ಬಿಡುಗಡೆ ಬಗ್ಗೆ ಪ್ರಧಾನಿ ಸಂತಸ ವ್ಯಕ್ತಪಡಿಸಿ ತಮೀಮ್‌ ಅವರಿಗೆ ಭಾರತದ ಪರವಾಗಿ ಧನ್ಯವಾದ­ಗಳನ್ನೂ ಅರ್ಪಿ­ಸಿ­ದ್ದಾರೆ. ಅಲ್ಲದೇ, ಕತಾರ್‌ನಲ್ಲಿರುವ ಭಾರತೀಯರ ಕ್ಷೇಮಾಭಿವೃದ್ಧಿಗಾಗಿ ಅಲ್ಲಿನ ಸರಕಾರ ವಹಿಸುತ್ತಿರುವ ಕಾಳಜಿಯನ್ನೂ ಪ್ರಶಂಸಿಸಿದ್ದಾರೆ.

ಇನ್ನು ಭೇಟಿ ಪೂರ್ಣಗೊಂಡ ಬಳಿಕ ಈ ಕುರಿತು ಪಿಎಂ ಟ್ವೀಟ್‌ ಮಾಡಿ, ” ಹಮೀಮ್‌ ಅವರೊಂದಿಗೆ ಅದ್ಭುತವಾದ ಸಭೆ ನಡೆಸಿ, ಉಭಯ ರಾಷ್ಟ್ರಗಳು ಜಗತ್ತಿಗೆ ಉತ್ತಮವಾದ ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ಹಲವು ವಿಚಾರಗಳನ್ನು ಚರ್ಚಿಸಿದೆವು. ಭಾರತ ಮತ್ತು ಕತಾರ್‌ ನಡುವಿನ ಬಾಂಧವ್ಯಕ್ಕೆ ಈ ಭೇಟಿ ಹೊಸ ಚೈತನ್ಯ ಮೂಡಿಸಿದೆ’ ಎಂದಿದ್ದಾರೆ.

ಯುಎಇ ದೇಗುಲಕ್ಕೆ ಅನಿವಾಸಿಗಳ ಶ್ರಮದಾನ
ಯುಇಎಯಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ ಹಿಂದೂ ದೇವಾಲಯಕ್ಕೆ ಬ್ರಿಟನ್‌, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವಾದ್ಯಂತ ಇರುವಂಥ ಅನೇಕ ಅನಿವಾಸಿ ಭಾರತೀಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿ ನಿವಾಸಿ, ಗರ್ಭಿಣಿ ಟೆಕಿ ಶೀನಾ ಪಟೇಲ್‌ ದೇಗುಲ ನಿರ್ಮಾಣದ ವಿಚಾರ ತಿಳಿದು 4 ವಾರ ಸೇವೆ ಸಲ್ಲಿಸಲೆಂದು ಯುಎಇಗೆ ಬಂದವರು ಇಲ್ಲಿಯೇ ಮಗುವಿಗೆ ಜನ್ಮ ನೀಡಿ, ದೇಗುಲ ಉದ್ಘಾಟನೆ ಕಣ್ತುಂಬಿಕೊಂಡಿದ್ದಾರೆ. ಶಿಕ್ಷಕರಾದ ಉಮೇಶ್‌ ರಾಜ್‌ ಬ್ರಿಟನ್‌ನಿಂದ ಮತ್ತು ಅಮೆರಿಕದಿಂದ ಭಾರತೀಯ ದಂಪತಿ ಗಳು ಸೇವೆಗೆಂದು ಬಂದವರು ಅಲ್ಲೇ ನೆಲೆಸಿರುವುದಾಗಿ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next