Advertisement

ಮೋದಿ ಶಲೋಮ್‌ಗೆ ಇಸ್ರೇಲ್ ಫುಲ್ ಫಿದಾ

03:45 AM Jul 05, 2017 | Team Udayavani |

ಟೆಲ್‌ ಅವಿವ್‌: ಭಾರತ- ಇಸ್ರೇಲ್‌ ಸಂಬಂಧದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಯಾಗಿದೆ. ಇದೇ ಮೊದಲ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹೊಸ ಇತಿಹಾಸ ಬರೆದಿದ್ದಾರೆ.

Advertisement

ನನ್ನ ಇಂದಿನ ಭೇಟಿಯು ಎರಡು ಸಮಾಜಗಳ ಶಕ್ತಿ ಮತ್ತು ಬಲಿಷ್ಠ ಪಾಲುದಾರಿಕೆಗೆ ಸಾಕ್ಷಿ ಎಂದು ಮೋದಿ ಹೇಳಿದರೆ, ಎರಡೂ ದೇಶಗಳ ನಡುವಿನ ಸಹಕಾರದಲ್ಲಿ “ಗಗನಕ್ಕೂ ಮಿತಿ ಇಲ್ಲ’ ಎಂದು ಹೇಳುವ ಮೂಲಕ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು ಅವರುಮೋದಿ ಭೇಟಿಯ ಮೊದಲ ಹೆಜ್ಜೆಯಲ್ಲೇ ದ್ವಿಪಕ್ಷೀಯ ಸಹಕಾರವನ್ನು ಎತ್ತರಕ್ಕೇರಿ ಸುವ ಮಾತುಗಳ ನ್ನಾಡಿದ್ದಾರೆ.

ವಿಶೇಷವೆಂದರೆ ಈ ವರೆಗೆ ಅಮೆರಿಕದ ಅಧ್ಯಕ್ಷರು ಮತ್ತು ಪೋಪ್‌ಗ್ಷ್ಟೇ ನೀಡುತ್ತಿದ್ದಂತಹ ಸ್ವಾಗತವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್‌ ಪ್ರಧಾನಿ ನೆತಾನ್ಯಾಹು ನೀಡಿದರು. ಇಸ್ರೇಲ್‌ಗೆ ಮೊದಲ ಬಾರಿ ಭೇಟಿ ನೀಡುತ್ತಿರುವ ಭಾರತದ ಪ್ರಧಾನಿ ಯನ್ನು ಸ್ವಾಗತಿಸಲು ನೆತಾನ್ಯಾಹು ಅವರ ಇಡೀ ಸಂಪುಟವೇ ಬೆನ್‌ ಗುರಿಯನ್‌ ವಿಮಾನ ನಿಲ್ದಾಣದಲ್ಲಿ ನೆರೆದಿತ್ತು. ಎಲ್ಲ ಶಿಷ್ಟಾಚಾರಗಳನ್ನು ಬದಿಗೊತ್ತಿ ಸ್ವತಃ ನೆತಾನ್ಯಾಹು ಅವರೇ ಮೋದಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅಷ್ಟೇ ಅಲ್ಲ, “ಆಪಾR ಸ್ವಾಗತ್‌ ಹೇ, ಮೇರೇ ದೋಸ್ತ್’ (ಗೆಳೆಯನೇ, ನಿಮಗೆ ಸ್ವಾಗತ) ಎಂದು ನೇತಾನ್ಯಾಹು ಅವರು ಹಿಂದಿಯಲ್ಲಿ ನುಡಿದಿದ್ದು ಪ್ರಧಾನಿ ಮೋದಿ ಅವರ ಮೊಗದಲ್ಲಿ ಸಂತಸದ ನಗೆ ತರಿಸಿತು. 

ವೀ ಲವ್‌ ಇಂಡಿಯಾ: ವಿಮಾನ ನಿಲ್ದಾಣದಲ್ಲೇ ಮೋದಿ ಅವರಿಗೆಂದು ಅದ್ದೂರಿ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು. ಇಲ್ಲಿ ಮಾತ ನಾಡಿದ ನೇತಾನ್ಯಾಹು ಅವರು, ಮೋದಿ ಅವರ ಭೇಟಿಯನ್ನು ಐತಿ ಹಾಸಿಕ ಎಂದು ಬಣ್ಣಿಸಿದರು. 

ಜತೆಗೆ ನಾವು ಭಾರತವನ್ನು ಪ್ರೀತಿಸುತ್ತೇವೆ ಎಂದೂ ಹೇಳಿದರು. “ಮೋದಿ ಭಾರತದ ಮತ್ತು ಜಗತ್ತಿನ ಶ್ರೇಷ್ಠ ನಾಯಕ. ಭಾರತದ ಪ್ರಧಾನಿ ಇಲ್ಲಿಗೆ ಭೇಟಿ ನೀಡಲಿ ಎಂದು ನಾವು 70 ವರ್ಷಗಳಿಂದಲೂ ಕಾಯುತ್ತಿದ್ದೆವು. ನಾವು ಮೊದಲ ಬಾರಿಗೆ ಭೇಟಿಯಾಗಿದ್ದಾಗ ನೀವು (ಮೋದಿ) ಹೇಳಿದ್ದು ನನಗಿನ್ನೂ ನೆನಪಿದೆ. ನೀವಾಗ “ಭಾರತ ಮತ್ತು ಇಸ್ರೇಲ್‌ ಸಂಬಂಧದ ವಿಚಾರಕ್ಕೆ ಬಂದಾಗ ಗಗನವೇ ಮಿತಿ’ ಎಂದು ಹೇಳಿದ್ದಿರಿ. ಆದರೆ ನಾನು ಈಗ ಹೇಳುತ್ತಿದ್ದೇನೆ- ನಮ್ಮ ಸಂಬಂಧದ ವಿಚಾರದಲ್ಲಿ ಗಗನಕ್ಕೂ ಮಿತಿ ಇಲ್ಲ. ಏಕೆಂದರೆ ನಾವು ಬಾಹ್ಯಾಕಾಶದಲ್ಲೂ ಸಹಕಾರ ಹೊಂದಿದ್ದೇವೆ’ ಎಂದು ನೇತಾನ್ಯಾಹು ಹೇಳುತ್ತಿದ್ದಂತೆ ಪ್ರಧಾನಿ ಮೋದಿ ಅವರ ಮೊಗ ಅರಳಿತು. ಇದೇ ವೇಳೆ ಭಯೋತ್ಪಾದನೆ ಸಹಿತ ಎಲ್ಲ ಸವಾಲುಗಳನ್ನೂ ನಾವು ಒಂದಾಗಿ ಎದುರಿಸಲಿ ದ್ದೇವೆ ಎಂದೂ ಹೇಳಲು ನೇತಾನ್ಯಾಹು ಮರೆಯಲಿಲ್ಲ.

Advertisement

ಶಲೋಮ್‌ ಎಂದ ಮೋದಿ: ತದನಂತರ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ ಅವರು, “ಶಲೋಮ್‌(ಹಲೋ), ಇಲ್ಲಿಗೆ ಬಂದಿರುವುದು ನನಗೆ ಬಹಳ ಸಂತಸ ತಂದಿದೆ. ಇಸ್ರೇಲ್‌ಗೆ ಈ ಐತಿಹಾಸಿಕ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ನನಗೆ ಸಂದಿರುವುದಕ್ಕೆ ಖುಷಿಯಾಗಿದೆ. ಇಸ್ರೇಲ್‌ನೊಂದಿಗೆ ಬಲಿಷ್ಠ ಸಂಬಂಧ ನನ್ನ ಗುರಿ. ಭಯೋತ್ಪಾದನೆಯಂಥ ಅಪಾಯದಿಂದ ಎರಡೂ ಸಮಾಜವನ್ನು ರಕ್ಷಿಸು ವುದು ನಮ್ಮ ಹೊಣೆ. ನಾವು ಕೈಜೋಡಿಸಿದರೆ, ಎಂಥದ್ದನ್ನೂ ಸಾಧಿಸಲು ಸಾಧ್ಯ’ ಎಂದರು.

ಇದಕ್ಕೂ ಮುನ್ನ, ಇಸ್ರೇಲ್‌ ಸೇನೆಯು ಎರಡೂ ದೇಶಗಳ ರಾಷ್ಟ್ರಗೀತೆಯನ್ನು ಹಾಡಿತಲ್ಲದೆ, ಮೋದಿ ಅವರಿಗೆ ಗೌರವ ವಂದನೆ ಸಲ್ಲಿಸಿತು. ಆಲಿಂಗನವನ್ನು ಇಲ್ಲೂ ಮೋದಿ ಪ್ರದರ್ಶಿಸಿದ್ದು ಕಂಡುಬಂತು. ತಮ್ಮ ಸಚಿವ ಸಂಪುಟದ ಎಲ್ಲ ಸದಸ್ಯರನ್ನೂ ಸ್ವತಃ ನೇತಾನ್ಯಾಹು ಅವರೇ ಪ್ರಧಾನಿ ಮೋದಿ ಅವರಿಗೆ ಪರಿಚಯಿಸಿದರು. ಪದೇ ಪದೆ ಇಬ್ಬರು ನಾಯಕರೂ ಪರಸ್ಪರರನ್ನು “ಮೈ ಫ್ರೆಂಡ್‌'(ನನ್ನ ಗೆಳೆಯ) ಎಂದು ಹೇಳುತ್ತಿದ್ದುದು ವಿಶೇಷವಾಗಿತ್ತು. 

ಇಸ್ರೇಲ್‌ನಿಂದ ನಾವು ಕಲಿಯಬೇಕಾಗಿರುವುದು
ಸಹಕಾರ:
ಎರಡೂ ದೇಶಗಳಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ಇರುವುದರಿಂದ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇರುವ ಸಹಕಾರ ವೃದ್ಧಿಗೆ ಅವಕಾಶವಿದೆ.

ದುಬಾರಿ ಬೆಲೆಯ ಉತ್ಪನ್ನಗಳು: ಆ ದೇಶದಲ್ಲಿ ನೀರಿನ ಕೊರತೆಯ ಹೊರತಾಗಿಯೂ ಉತ್ತಮ ತಳಿಯ ಬೆಳೆ ಬೆಳೆದು ಇತರ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅದನ್ನು ನಾವೂ ಕಲಿತುಕೊಳ್ಳಬಹುದು.

ನೀರಿನ ಬಳಕೆ: ಅಲ್ಲಿ ನೀರಿನ ಕೊರತೆ ಇರುವುದರಿಂದ ಅದರ ಉಳಿತಾ ಯಕ್ಕೆ ಹೊಸ ತಂತ್ರಜ್ಞಾನವಿದೆ. ಅವುಗಳನ್ನು ಇಲ್ಲಿಯೂ ಅನುಷ್ಠಾನಿಸಬಹುದು. 
 
ಡ್ರಿಪ್‌ ಮತ್ತು ಸ್ಪ್ರಿಂಕ್ಲರ್‌ ನೀರಾವರಿ: ದೇಶದ 9 ಮಿಲಿಯ ಹೆಕ್ಟೇರ್‌ಗಳಲ್ಲಿ ಡ್ರಿಪ್‌, ಸ್ಪ್ರಿಂಕ್ಲರ್‌ ನೀರಾವರಿ ಜಾರಿಯಲ್ಲಿದೆ. ಇದರ ಹೊರತಾಗಿಯೂ ಮತ್ತಷ್ಟು ಕೃಷಿ ಪ್ರದೇಶಗಳಿಗೆ ಈ ವ್ಯವಸ್ಥೆ ವಿಸ್ತರಣೆಯಾಗುತ್ತಿದೆ. 

ನೀರಿನ ನಿರ್ವಹಣೆ: ಇಸ್ರೇಲ್‌ನಲ್ಲಿ ಬಿಂದು ನೀರಿಗೂ ಲೆಕ್ಕವಿದೆ. ಆ ದೇಶದ ಶೇ.62ರಷ್ಟು ಪ್ರದೇಶಕ್ಕೆ ಪುನರ್ಬಳಕೆ ಮತ್ತು ಉಪ್ಪುಪ್ಪಾಗಿರುವ ನೀರು ಬಳಕೆ ಮಾಡುತ್ತಾರೆ (ಸಮುದ್ರದ ನೀರಲ್ಲ). 

ನೀರಿನ ರಫ್ತು: ಇದು ನಿಜಕ್ಕೂ ಅಚ್ಚರಿಯೇ ಸರಿ. ನೀರಿನ ಕೊರತೆ ಇರುವ ದೇಶ ಸಂಸ್ಕರಣೆ ಮಾಡಿ ತನಗೆ ಬಳಕೆ ಮಾಡಿಕೊಂಡು, ಉಳಿದುದನ್ನು ಜೋರ್ಡಾನ್‌ಗೆ ರಫ್ತು ಮಾಡುತ್ತದೆ. 

ಸಮುದ್ರದ ನೀರು ಬಳಕೆ: ಸಮುದ್ರದ ನೀರು ಬಳಕೆ ಮಾಡುವಲ್ಲಿ ಇಸ್ರೇಲ್‌ ಪ್ರಮುಖವಾಗಿದೆ. ಅದಕ್ಕೆ ಸಂಬಂಧಿಸಿದ ಅತ್ಯುತ್ಕೃಷ್ಟ ತಂತ್ರಜ್ಞಾನವನ್ನೂ ಹೊಂದಿದೆ. ಇದು ನಮಗೂ ಅನುಸರಣೀಯವೇ. ದೇಶದ ಮಲಿನಗೊಂಡ ನದಿಗಳ ಶುಚಿತ್ವದಲ್ಲೂ ಆ ದೇಶ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next