Advertisement
ಇದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿತ್ವ ಹಾಗೂ ಮಹತ್ವಾಕಾಂಕ್ಷೆಯ ಮಾತು.
Related Articles
Advertisement
ಮೂವರು ಸಿಎಂಗಳು ಗೈರು: ನೀತಿ ಆಯೋಗದ ಸಭೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಹಾಗೂ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಗೈರಾಗಿದ್ದರು. ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಚಂದ್ರಶೇಖರ್ ಗೈರಾಗಿದ್ದರು. ಅಮರಿಂದರ್ ಆರೋಗ್ಯ ಸರಿಯಿಲ್ಲದ ಕಾರಣ ಪ್ರತಿನಿಧಿ ಕಳುಹಿಸಿದ್ದರು. ಮಮತಾ ಅವರು ನೀತಿ ಆಯೋಗಕ್ಕೆ ಅಧಿಕಾರ ತೆಗೆದುಕೊಳ್ಳುವ ಶಕ್ತಿಯೇ ಇಲ್ಲ ಎಂದು ಹೇಳಿ ಗೈರಾಗಿದ್ದರು.
ಜಿಲ್ಲಾಮಟ್ಟದಿಂದಲೇ ಜಿಡಿಪಿ ಹೆಚ್ಚಳ
ಜಿಲ್ಲಾ ಮಟ್ಟದಲ್ಲಿ ವಾರ್ಷಿಕ ಜಿಡಿಪಿ ಗುರಿಯನ್ನು ನಿಗದಿ ಮಾಡಿ, ಅದನ್ನು ಸಾಧಿಸಿ ತೋರುವತ್ತ ರಾಜ್ಯಗಳ ನಡುವೆ ಆರೋಗ್ಯಕರ ಪೈಪೋಟಿ ಸೃಷ್ಟಿಯಾಗಬೇಕು.
ರಫ್ತು ಪ್ರಮಾಣ ವೃದ್ಧಿಗೊಳ್ಳಲಿ
ರಫ್ತು ಪ್ರಮಾಣ ಹೆಚ್ಚಳವಾದಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅದೊಂದು ವರದಾನವಿದ್ದಂತೆ. ದೇಶದ ತಲಾ ಆದಾಯ ಹೆಚ್ಚಳಕ್ಕೆ ಇದು ಸಹಕಾರಿ. ರಾಜ್ಯಗಳೂ ರಫ್ತಿಗೆ ಹೆಚ್ಚು ಉತ್ತೇಜನ ನೀಡಬೇಕು.
ಜಲಸಂಪನ್ಮೂಲಗಳ ಸದ್ಬಳಕೆಯಾಗಲಿ
2024ರೊಳಗೆ ದೇಶದ ಗ್ರಾಮೀಣ ಪ್ರದೇಶಗಳ ಎಲ್ಲಾ ಮನೆಗಳಿಗೆ ಪೈಪುಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲು ಎಲ್ಲರೂ ಸಂಕಲ್ಪ ಕೈಗೊಳ್ಳಬೇಕು.
ಹನಿ ಹನಿಗೂ ಸಮೃದ್ಧ ಬೆಳೆ
ಕೃಷಿಯಲ್ಲಿ ವೈಜ್ಞಾನಿಕವಾಗಿ ನೀರನ್ನು ಬಳಕೆ ಮಾಡಬೇಕು. ಹನಿ ಹನಿಗೂ ಸಮೃದ್ಧ ಬೆಳೆ ತತ್ವ ಅಳವಡಿಸಿಕೊಳ್ಳಬೇಕು. ಇದಕ್ಕೆ ಜಲ ಶಕ್ತಿ ಇಲಾಖೆಯು ಎಲ್ಲಾ ರೀತಿಯ ಸಹಕಾರ ನೀಡಲಿದೆ.
ಕ್ಷಯ ನಿರ್ಮೂಲನೆ
ದೇಶವನ್ನು ಕಾಡುತ್ತಿರುವ ಕ್ಷಯ ರೋಗವನ್ನು 2025ರೊಳಗೆ ನಿರ್ಮೂಲನೆ ಮಾಡಬೇಕು. ಕೇಂದ್ರದ ವಿವಿಧ ವೈದ್ಯಕೀಯ ಸೌಲಭ್ಯಗಳನ್ನು ರಾಜ್ಯಗಳು ತಮ್ಮಲ್ಲಿ ಅನುಷ್ಠಾನಗೊಳಿಸಬೇಕು.
ರೈತರ ಆದಾಯ ದ್ವಿಗುಣ
2022ಕ್ಕೆ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರಗಳು, ಮೀನುಗಾರಿಕೆ, ಪಶು ಸಂಗೋಪನೆ, ತೋಟಗಾರಿಕೆ ಹಾಗೂ ಹಣ್ಣು-ತರಕಾರಿ ಬೆಳೆಗಾರರಿಗೆ ಉತ್ತೇಜನ ನೀಡಬೇಕು.
ವಾಣಿಜ್ಯ ವಲಯ ಬಲವರ್ಧನೆ
ರಾಜ್ಯಗಳು ಬಂಡವಾಳ ಹೂಡಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ಸರಕು ಸಾಗಣೆ ವ್ಯವಸ್ಥೆಯನ್ನು ಉನ್ನತ ದರ್ಜೆಗೇರಿಸಿಕೊಳ್ಳಬೇಕು. ಜತೆಗೆ, ಅತ್ಯುತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಬೇಕು.
ಜಿಎಸ್‌ಟಿ ಪರಿಹಾರ ಅವಧಿ ವಿಸ್ತರಿಸಿ
ಕೇಂದ್ರ ಸರ್ಕಾರ ನೀಡುತ್ತಿರುವ ಜಿಎಸ್‌ಟಿ ಪರಿಹಾರವನ್ನು 2022ರ ನಂತರವೂ ವಿಸ್ತರಣೆ ಮಾಡಬೇಕು ಎಂದು ಕರ್ನಾಟಕ ಸಿಎಂ ಕುಮಾರಸ್ವಾಮಿ, ನೀತಿ ಆಯೋಗದ ಸಭೆಯಲ್ಲಿ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರವು ಜಿಎಸ್‌ಟಿ ಜಾರಿ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳಿಗೆ ಆಗುವ ನಷ್ಟ ಸರಿದೂಗಿಸಲು 2022ರವರೆಗೆ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿತ್ತು. ಆದರೆ, ನಂತರ ನಮ್ಮ ರಾಜ್ಯಕ್ಕೆ ಹೆಚ್ಚುವರಿಯಾಗಿ ಸಂಪನ್ಮೂಲ ಕ್ರೋಡೀಕರಿಸಲು ಹೆಚ್ಚು ಅವಕಾಶಗಳಿಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿಗೆ ಪಿಣರಾಯಿ ಮನವಿ
ತಿರುವನಂತಪುರದ ವಿಮಾನ ನಿಲ್ದಾಣವನ್ನು ಖಾಸಗಿಗೆ ಒಪ್ಪಿಸುವ ಪ್ರಸ್ತಾವನೆ ಕೈಬಿಡುವಂತೆ ಪ್ರಧಾನಿ ಮೋದಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಪ್ರಧಾನಿ ನಿವಾಸಕ್ಕೆ ತೆರಳಿ, ಈ ಕುರಿತಂತೆ ಚರ್ಚಿಸಿದರು.
ಮನಮೋಹನ್ ಸಿಂಗ್ ಪ್ರತ್ಯೇಕ ಸಭೆ
ನೀತಿ ಆಯೋಗದ ಸಭೆಗೂ ಮುನ್ನ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ಕಾಂಗ್ರೆಸ್ ಆಡಳಿತವಿರುವ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕರ್ನಾಟಕದ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಸಭೆ ನಡೆಸಿ, ನೀತಿ ಆಯೋಗದ ಸಭೆಯಲ್ಲಿ ಪ್ರಸ್ತಾಪಿಸಬೇಕಿರುವ ಅಂಶಗಳ ಬಗ್ಗೆ ಸಲಹೆ ನೀಡಿದರು.