Advertisement

ಫೋಟೋಶೂಟ್‌ ಗೆ ಸೋಫಾ ಬೇಡ, ಕುರ್ಚಿ ಸಾಕು ಎಂದ ಮೋದಿ; ವಿಡಿಯೋ ವೈರಲ್‌

10:06 AM Sep 07, 2019 | keerthan |

ಮಾಸ್ಕೋ: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದಲ್ಲಿ ತನ್ನ ಸರಳತೆಯಿಂದ ಗಮನ ಸೆಳೆದಿದ್ದಾರೆ. ಫೋಟೋಶೂಟ್‌  ನಲ್ಲಿ ತನಗಾಗಿ ಇರಿಸಲಾಗಿದ್ದ ವಿಶೇಷ ಸೋಫಾವನ್ನು ನಿರಾಕರಿಸಿ ಮಾಮೂಲಿ ಕುರ್ಚಿಯಲ್ಲಿ ಕುಳಿತುಕೊಂಡ ಮೋದಿಯವರ ಈ ವಿಡಿಯೋ ಈಗ ವೈರಲ್‌ ಆಗಿದೆ.

Advertisement

ರಷ್ಯಾ ಪ್ರವಾಸದಲ್ಲಿ ವ್ಲಾಡಿವೋಸ್ಟಕ್‌ ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಅಧಿಕಾರಿಗಳ ಜೊತೆ ಫೋಟೋಶೂಟ್‌ ನಲ್ಲಿ ಪಾಲ್ಗೊಂಡರು. ಆದರೆ ಅಲ್ಲಿ ನರೇಂದ್ರ ಮೋದಿಯವರಿಗೆ ವಿಶೇಷ ಸೋಫಾದ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ಕಂಡ ಮೋದಿಯವರು ತನಗೆ ಈ ಸೋಫಾ ಬೇಡ, ಇತರರೊಂದಿಗೆ ಮಾಮೂಲಿ ಕುರ್ಚಿಯಲ್ಲೇ  ಕುಳಿತುಕೊಳ್ಳುತ್ತೇನೆಂದು ಆ ಸೋಫಾ ತೆಗೆಸಿ ಬೇರೆ ಕುರ್ಚಿ ತರಿಸಿದರು. ರೈಲ್ವೇ ಖಾತೆ ಸಚಿವ ಪೀಯೂಶ್‌ ಗೋಯಲ್‌ ಈ ವಿಡಿಯೋವನ್ನು ತನ್ನ ಟ್ವೀಟರ್‌ ನಲ್ಲಿ ಪ್ರಕಟಿಸಿದ್ದು, ಇದು ಈಗ ಜನಪ್ರಿಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಈಗ ಭಾರಿ ಪ್ರಚಾರ ಪಡೆಯುತ್ತಿದ್ದು, ಪ್ರಧಾನಿ ಮೋದಿಯವರ ಸರಳತೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next