Advertisement

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

01:06 AM Nov 09, 2024 | Team Udayavani |

ಹೊಸದಿಲ್ಲಿ: “ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಅಂಬೇಡ್ಕರ್‌ ಅವರ ಸಂವಿಧಾನವನ್ನು ಕಿತ್ತೂಗೆದು ಆ ಜಾಗದ ಲ್ಲಿ ಮನುಸ್ಮತಿ ಸಿದ್ಧಾಂತ ಆಧಾರಿತ ತಣ್ತೀವನ್ನು ಮರು ಸ್ಥಾಪಿಸಬೇಕಾಗಿದೆ. ಇದಕ್ಕಾಗಿಯೇ ಪ್ರಧಾನಿ ಮೋದಿ ಅವರು ಜಾತಿ ಗಣತಿಯನ್ನು ವಿರೋಧಿಸುತ್ತಾ ಅದಕ್ಕೆ ದೇಶ ವಿಭಜಿಸುವ ಕ್ರಿಯೆ ಎಂಬ ಹಣೆಪಟ್ಟಿ ನೀಡುತ್ತಿದ್ದಾರೆ’. ಹೀಗೆಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಆರೋಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮಾತನಾಡಿದ್ದ ಪ್ರಧಾನಿ, ಕಾಂಗ್ರೆಸ್‌ ಜಾತಿಗಳನ್ನು ವಿಭಜಿಸುವಂಥ ಅಪಾಯಕಾರಿ ಆಟ ಆಡುತ್ತಿದೆ. ಎಸ್ಸಿ, ಎಸ್ಟಿ, ಒಬಿಸಿ ಒಂದಾದರೆ ಕಾಂಗ್ರೆಸ್‌ನ ಆಟಕ್ಕೆ ತೆರೆ ಬೀಳುತ್ತದೆ ಎಂದಿದ್ದರು. ಇದಕ್ಕೆ ರಮೇಶ್‌ ತಿರುಗೇಟು ನೀಡಿ, ಬಿಜೆಪಿ ಆರ್‌ಎಸ್‌ಎಸ್‌ಗೆ ಸಂವಿ ಧಾನ, ದಲಿತ ಮೀಸಲಾತಿ, ಆದಿವಾಸಿ, ಒಬಿಸಿ ಸಹಿತ ಎಲ್ಲ ವಿಚಾರಗಳ ಬಗ್ಗೆಯೂ ಕ್ಯಾತೆ ಇದ್ದೇ ಇದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next