Advertisement

ಮೋದಿ ಮಂತ್ರ ಈಗ ವಿಶ್ವದಾದ್ಯಂತ ಅನುರಣಿಸುತ್ತಿದೆ,ಅದಕ್ಕೆ ಪುರಾವೆ…: ಯೋಗಿ

10:13 PM Jan 22, 2023 | Team Udayavani |

ಲಕ್ನೋ: ‘ಮೋದಿ ಹೆ ತೋ ಮಮ್ಕಿನ್ ಹೈ’ ಘೋಷಣೆಯ ಅನುರಣನ ಭಾರತಕ್ಕೆ ಸೀಮಿತವಾಗಿಲ್ಲ, ಜಾಗತಿಕವಾಗಿ ಹರಡಿದೆ, ಅದಕ್ಕೆ ಪುರಾವೆ ಜಿ20 ಗುಂಪಿನ ಭಾರತದ ಅಧ್ಯಕ್ಷ ಸ್ಥಾನ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.

Advertisement

ಅವರು ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆಯ ದಿನದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ “ಜಗತ್ತಿನಲ್ಲಿ ಬಿಕ್ಕಟ್ಟು ಎಲ್ಲೇ ಇದ್ದರೂ, ಪ್ರತಿಯೊಬ್ಬರೂ ಪ್ರಧಾನಿ ನರೇಂದ್ರ ಮೋದಿಯತ್ತ ಭರವಸೆಯಿಂದ ನೋಡುತ್ತಾರೆ. 2019 ರಲ್ಲಿ ಎದ್ದ ಘೋಷಣೆ – ‘ಮೋದಿ ಹೈ ತೋ ಮಮ್ಕಿನ್ ಹೈ’ – ಇಂದು ಕೇವಲ ಭಾರತದ ಘೋಷಣೆಯಾಗಿಲ್ಲ, ಅದು ಜಾಗತಿಕ ಮಂತ್ರವಾಗಿ ಮಾರ್ಪಟ್ಟಿದೆ ಮತ್ತು ಭಾರತವು ಜಿ -20 ನ ಅಧ್ಯಕ್ಷ ಸ್ಥಾನವನ್ನು ಪಡೆಯುತ್ತಿರುವುದು ಅದಕ್ಕೆ ಉದಾಹರಣೆಯಾಗಿದೆ ಎಂದು ಆದಿತ್ಯನಾಥ್ ಹೇಳಿದರು.

“ಪ್ರತಿಯೊಬ್ಬ ಭಾರತೀಯನನ್ನು ಜಿ 20 ನೊಂದಿಗೆ ಸಂಪರ್ಕಿಸುವ ಕೆಲಸವನ್ನು ಮೋದಿ ಜಿ ಮಾಡಿದ್ದಾರೆ. ಆಗ್ರಾ, ಲಕ್ನೋ, ವಾರಾಣಸಿ ಮತ್ತು ಗೌತಮಬುದ್ಧ ನಗರದಲ್ಲಿ ಜಿ 20 ಗೆ ಸಂಬಂಧಿಸಿದ 11 ಸಮ್ಮೇಳನಗಳು ನಡೆಯಲಿವೆ ”ಎಂದರು.

ಜಿ20, ಒಂದು ಅಂತರ್ ಸರ್ಕಾರಿ ಗುಂಪು, ಯುರೋಪಿಯನ್ ಯೂನಿಯನ್ ಜೊತೆಗೆ 19 ಸದಸ್ಯರನ್ನು ಹೊಂದಿದೆ ಮತ್ತು ಪ್ರತಿ ಸದಸ್ಯ ರಾಷ್ಟ್ರವು ಒಂದು ವರ್ಷದವರೆಗೆ ಸರದಿಯಂತೆ ಅಧ್ಯಕ್ಷರಾಗಿರುತ್ತಾರೆ. ಬ್ರೆಜಿಲ್ 2023 ರಲ್ಲಿ ಗುಂಪಿನ ಅಧ್ಯಕ್ಷನಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next