Advertisement

ಮೋದಿ ಮಹದಾಯಿ ರಾಜಕೀಯ: ಪಾಟೀಲ

12:16 PM May 07, 2018 | |

ವಿಜಯಪುರ: ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪದೇ ಪದೇ ಭೇಟಿ ಮಾಡಿ ಮನವಿ ಮಾಡಿದರೂ ಬಾಯಿ ಬಿಡದ ಪ್ರಧಾನಿ ಮೋದಿ, ಇದೀಗ ಚುನಾವಣೆ ರಾಜಕೀಯಕ್ಕಾಗಿ ಮಹದಾಯಿ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಅಧಿಕಾರದಲ್ಲಿರುವ ಅವರು ಇಂದಿರಾ ಅವರಂತೆ ತಕ್ಷಣ ಮಧ್ಯ ಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ಡಾ.ಎಂ.ಬಿ. ಪಾಟೀಲ ಆಗ್ರಹಿಸಿದರು.

Advertisement

ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಮುನ್ನ ರಾಜ್ಯ ಸರ್ಕಾರ ಹಲವು ಬಾರಿ ಪ್ರಧಾನಿ
ಅವರ ಬಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹದಾಯಿ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿ, ಪರಿಹಾರ ಕಂಡುಕೊಡಬೇಕು. ಈ ಹಿಂದೆ ಇಂದಿರಾ ಗಾಂಧಿ ಅವರು ಪ್ರಧಾನಿ ಆಗಿದ್ದ ವೇಳೆ ಚೆನ್ನೈಗೆ ಕೃಷ್ಣಾ ಕಣಿವೆಯಿಂದ ನೀರು ಕೊಟ್ಟಿದ್ದಾರೆ. ಗುಜರಾತ ರಾಜ್ಯದ ಮನವೊಲಿಸಿ ರಾಜಸ್ಥಾನಕ್ಕೆ ನರ್ಮದಾ ನದಿ ನೀರು ಹರಿಸಿರುವ ದಾಖಲೆ ನೀಡಿ, ಮನವರಿಕೆ ಮಾಡಿಕೊಟ್ಟರೂ
ಪ್ರಧಾನಿ ಮೌನಕ್ಕೆ ಶರಣಾಗಿದ್ದರು ಎಂದರು.

ಅಂದು ಮೌನ ವಹಿಸಿದ್ದ ಪ್ರಧಾನಿ ಮೋದಿ ಅವರಿಗೆ ಕರ್ನಾಟಕದಲ್ಲಿ ಚುನಾವಣೆ ಬಂದಾಗ ಮಹದಾಯಿ ನೆನಪಾಗಿದೆ. ತಮ್ಮ ಬಳಿ ಅಧಿಕಾರ ಇದ್ದರೂ ಅನಗತ್ಯವಾಗಿ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರತ್ತ ಬೆರಳು ಮಾಡುತ್ತಾರೆ. ಚುನಾವಣೆಗಾಗಿ ಮಹದಾಯಿ ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ಬಿಡಬೇಕು. ಇನ್ನೂ ಕಾಲ ಮಿಂಚಿಲ್ಲ, ಪ್ರಧಾನಿ ಮಹದಾಯಿ ಸಮಸ್ಯೆ
ಇತ್ಯರ್ಥಕ್ಕೆ ತಕ್ಷಣ ಮಧ್ಯ ಪ್ರವೇಶ ಮಾಡುವಂತೆ ಆಗ್ರಹಿಸಿದರು.

ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮೋದಿ, ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದರೂ ಸುಳ್ಳುಗಳಲ್ಲೇ ದೇಶದ ಜನರನ್ನು ಇನ್ನೂ ವಂಚಿಸುತ್ತಿದ್ದಾರೆ. ಹೀಗಾಗಿ ಮೋದಿ ಹವಾ ಠುಸ್‌ ಆಗಿದ್ದು, ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಸುಳ್ಳಿನ ಮಾತಿಗೆ ಬೆಲೆ ನೀಡಲು ರಾಜ್ಯದ ಜನರು ಸಿದ್ಧರಿಲ್ಲ. ಬೇಟಿ ಬಚಾವೋ-ಬೇಟಿ ಪಡಾವೋ ಎಂಬ ಘೋಷಿಸುವ ಪ್ರಧಾನಿ ಮೋದಿ ಅವರಿಗೆ, ತಮ್ಮದೇ ಬಿಜೆಪಿ ನಾಯಕರು ಅಬಲೆಯರ ಮೇಲೆ ಅತ್ಯಾಚಾರದಂಥ ದೌರ್ಜನ್ಯ ಎಸಗುತ್ತಿರುವುದು ಮಹಿಳೆಯರ ಬಗ್ಗೆ ಬದ್ಧತೆ ಏನು ಎಂಬುದನ್ನು ಹೇಳುತ್ತದೆ. ಮತ್ತೂಂದೆಡೆ ಉದ್ಯಮಿಗಳ ಬಾಂಬೇ ಕ್ಲಬ್‌ ತಮ್ಮ ಬೆನ್ನಿಗೆ ನಿಂತು ನೂರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಇಂಥದ್ದನ್ನೆಲ್ಲ ಮುಚ್ಚಿಕೊಳ್ಳಲು ಕಾಂಗ್ರೆಸ್‌ ನಾಯಕರ ಮೇಲೆ ಭ್ರಷ್ಟಾಚಾರ, ಕೋಟಿ ಕೋಟಿ ರೂ. ಅಕ್ರಮ ಹಣ ಎಂದೆಲ್ಲ ದೂರುವ ಮೂಲಕ ತಮ್ಮ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ ಎಂದರು.

ಎಐಸಿಸಿ ಕಾರ್ಯದರ್ಶಿ ಮಾಣಿಕ್ಯಂ ಠ್ಯಾಗೋರ, ಪಕ್ಷದ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ, ಮೇಲ್ಮನೆ ಮಾಜಿ ಸದಸ್ಯೆ ಜಲಜಾ ನಾಯಕ, ಕಾಂಗ್ರೆಸ್‌ ಅಭ್ಯರ್ಥಿಗಳಾದ ನಾಗಠಾಣ ಕ್ಷೇತ್ರದ ವಿಠ್ಠಲ ಕಟಕದೊಂಡ, ನಗರ ಕ್ಷೇತ್ರದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ರುಕ್ಸಾನಾ ಉಸ್ತಾದ, ಎಸ್‌.ಎಂ. ಪಾಟೀಲ ಗಣಿಹಾರ, ಆಪ್ತಾಬ್‌ ಖಾದ್ರಿ ಇನಾಮದಾರ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next