Advertisement
ಹಾವೇರಿಯಲ್ಲಿ ಶನಿವಾರ ಮಧ್ಯಾಹ್ನ ನಡೆದ ಕಾಂಗ್ರೆಸ್ ಜನ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಅಧಿಕಾರದಲ್ಲಿ ಇಂದು ದೇಶ ಎರಡಾಗಿದೆ. ಒಂದು ಅಂಬಾನಿ, ಅದಾನಿ, ಚೋಕ್ಸಿಯವರಂತಹ ಭಾರತ. ಬ್ಯಾಂಕ್ ನ ಹಣ ಕೇವಲ 15-20 ಜನರ ಕೈಯಲ್ಲಿದೆ. ಮತ್ತೊಂದು ನಿರುದ್ಯೋಗದ ಭಾರತ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.
Related Articles
Advertisement
ಮಸೂದ್ ಅಜರ್ ನನ್ನು ಬಿಟ್ಟವರ‍್ಯಾರು?: ಇತ್ತೀಚೆಗೆ ನಡೆದ ಪುಲ್ವಾಮಾ ದಾಳಿಯ ಬಗ್ಗೆ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು, ನಾನು ದೇಶದ ಪ್ರಧಾನಿಯವರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಪುಲ್ವಾಮಾದಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಯೋಧರನ್ನು ಕೊಂದವರು ಯಾರು? ಜೈಶ್ ಎ ಮೊಹಮ್ಮದ್ ಮುಖಂಡನ ಹೆಸರೇನು? ಭಾರತದಿಂದ ಪಾಕಿಸ್ಥಾನಕ್ಕೆ ಅಜರ್ ಮಸೂದ್ ನನ್ನು ಕಳುಹಿಸಿದವರು ಬಿಜೆಪಿ ಸರಕಾರದವರಲ್ಲವೇ? ಎಂದು ಪ್ರಶ್ನಿಸಿದರು.
ಬಡ ಜನರ ಪರ ಮೈತ್ರಿ ಸರಕಾರ: ಕರ್ನಾಟಕದ ಮೈತ್ರಿ ಸರಕಾರದ ಬಗ್ಗೆ ಮಾತನಾಡಿದ ರಾಹುಲ್, ನಾವು ಕರ್ನಾಟಕದಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ನಮ್ಮದು ರೈತರ,ಬಡ ಜನರ, ದುರ್ಬಲ ವರ್ಗದ ಪರವಾದ ಸರಕಾರ ಎಂದರು.