ನವದೆಹಲಿ: ಗುಜರಾತ್ ಗಲಭೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ನಾಟಕ ಮಾಡಿಲ್ಲ ಮತ್ತು ಸತ್ಯಕ್ಕಾಗಿ ಕಾಯುತ್ತಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ (ಜೂನ್ 25) ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ 24 ಗಂಟೆಯಲ್ಲಿ 15,940 ಕೋವಿಡ್ ಪ್ರಕರಣ ದೃಢ; ಸಕ್ರಿಯ ಕೋವಿಡ್ ಹೆಚ್ಚಳ
ಕಳೆದ ವಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿಯನ್ನು ವಿಚಾರಣೆಗೊಳಪಡಿಸಿದಾಗ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಇ.ಡಿ ಕಚೇರಿ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.
ಎಸ್ ಐಟಿ ಮುಂದ ಮೋದಿಜೀಯವರು ಹಾಜರಾಗುವ ಮೊದಲು ನಾಟಕವಾಡಲಿಲ್ಲ. ಒಂದು ವೇಳೆ ಎಸ್ ಐಟಿ ಮುಖ್ಯಮಂತ್ರಿಯನ್ನು ಪ್ರಶ್ನಿಸಲು ಬಯಸಿದರೆ, ಅವರೇ ಖುದ್ದಾಗಿ ಸಹಕರಿಸಲು ಸಿದ್ಧ, ಪ್ರತಿಭಟನೆ ಯಾಕೆ ಎಂದು ಶಾ ಎಎನ್ ಐ ಜೊತೆ ಮಾತನಾಡುತ್ತ ಪ್ರಶ್ನಿಸಿದ್ದಾರೆ.
Related Articles
“ಸಂವಿಧಾನವನ್ನು ಹೇಗೆ ಗೌರವಿಸಬಹುದು ಎಂಬುದಕ್ಕೆ ಮೋದಿಜೀಯವರು ಒಂದು ಉದಾಹರಣೆಯಾಗಿದ್ದಾರೆ. ಅವರನ್ನು ಎಸ್ ಐಟಿ ವಿಚಾರಣೆಗೊಳಪಡಿಸಿದಾಗ ಯಾರೂ ಧರಣಿ ನಡೆಸಲಿಲ್ಲ. ಕಾರ್ಯಕರ್ತರೂ ಕೂಡಾ ಅವರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಬರಲಿಲ್ಲ. ಒಂದು ವೇಳೆ ಆರೋಪ ಮಾಡಿದವರಿಗೆ ಆತ್ಮಸಾಕ್ಷಿ ಇದ್ದರೆ ಕ್ಷಮೆ ಕೇಳಬೇಕು” ಎಂದು ಅಮಿತ್ ಶಾ ರಾಹುಲ್ ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಗೋಧ್ರೋತ್ತರ ಗಲಭೆಗಳ ಪೈಕಿ ಪ್ರಧಾನವಾಗಿರುವ ಗುಲ್ಬರ್ಗ್ ಸೊಸೈಟಿ ಹಿಂಸಾಚಾರ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದ ನಂತರ ಶಾ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.