Advertisement

ಪ್ರಧಾನಿ ಮೋದಿ ಚೀತಾಗಿಂತ ಚುರುಕು…. : ಓವೈಸಿ ಹೇಳಿದ್ದೇನು?

07:23 PM Sep 14, 2022 | Team Udayavani |

ಜೈಪುರ: ”ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವ ವಿಚಾರದಲ್ಲಿ ಚೀತಾಗಿಂತ ಚುರುಕಾಗಿದ್ದಾರೆ” ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬುಧವಾರ ವ್ಯಂಗ್ಯವಾಡಿದ್ದಾರೆ.

Advertisement

ಸೆ 17 ರಂದು ತಮ್ಮ ಜನ್ಮದಿನದಂದು ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗುತ್ತಿರುವ ಎಂಟು ಚೀತಾಗಳನ್ನು ಬಿಡುಗಡೆ ಮಾಡಲು ಪ್ರಧಾನಿ ಮೋದಿ ಸಜ್ಜಾಗಿರುವ ವೇಳೆ ಓವೈಸಿ ಹಗುರವಾದ ಧಾಟಿಯಲ್ಲಿ ಈ ಟೀಕೆ ಮಾಡಿದ್ದಾರೆ.

”ಹಣದುಬ್ಬರ ಅಥವಾ ನಿರುದ್ಯೋಗದಂತಹ ಸಮಸ್ಯೆಗಳು ಉದ್ಭವಿಸಿದಾಗ ಪ್ರಧಾನಿ ಚೀತಾಗಿಂತ ವೇಗವಾಗಿ ಚಲಿಸುತ್ತಾರೆ. ನಾವು ನಿರುದ್ಯೋಗದ ಬಗ್ಗೆ ಮಾತನಾಡುವಾಗ, ಮೋದಿ ಅವರು ಚಿರತೆಯನ್ನು ಸಹ ಮೀರಿಸುತ್ತಾರೆ. ಚೀನಾ ನಮ್ಮ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಬಗ್ಗೆ ನಾವು ಕೇಳಿದಾಗ, ಮೋದಿ ಜಿ ಚೀತಾಗಿಂತ ವೇಗವಾಗಿರುತ್ತಾರೆ ”ಎಂದರು.

ಎರಡು ದಿನಗಳ ರಾಜಸ್ಥಾನ ಪ್ರವಾಸದಲ್ಲಿರುವ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕ, ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ಪ್ರಕರಣದಲ್ಲಿ ಇತ್ತೀಚೆಗೆ ವಾರಣಾಸಿ ನ್ಯಾಯಾಲಯದ ಆದೇಶವನ್ನು ಹಿನ್ನಡೆ ಎಂದು ಕರೆದರು ಮತ್ತು ಇದು ಪೂಜಾ ಸ್ಥಳಗಳ ಕಾಯಿದೆ, 1991 ಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆ ನಡೆಸಲು ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಟೀಕಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next