Advertisement

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

01:36 AM Apr 28, 2024 | Team Udayavani |

ಗಾಂಧಿನಗರ: “ಪ್ರಧಾನಿ ಮೋದಿಯವರು ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ. ಈ ಮಾವ ಮೂಲೆಯಲ್ಲಿ ಕುಳಿತು ಏನೇನೋ ಹೇಳುತ್ತಿರುತ್ತಾರೆ. ಅದೇ ರೀತಿ, ಮೋದಿ ಕೂಡ ಸುಳ್ಳುಗಳನ್ನು ಹೇಳುತ್ತಾ ತಿರುಗಾಡುತ್ತಿದ್ದಾರೆ. ಅವರನ್ನು ಯಾರೂ ನಂಬುವುದಿಲ್ಲ’. ಹೀಗೆಂದು ಹೇಳಿರುವುದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ.

Advertisement

ಶನಿವಾರ ಗುಜರಾತ್‌ನಲ್ಲಿ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, “ಪಿತ್ರಾರ್ಜಿತ ತೆರಿಗೆ ಕಾನೂನು, ಸಂಪತ್ತು ಹಂಚಿಕೆಯಂಥ ಲಾಜಿಕ್‌ ಇಲ್ಲದ ಸುಳ್ಳುಗಳನ್ನು ಮೋದಿ ಹೇಳುತ್ತಾರೆ. ಮದುವೆ ಮನೆಯಲ್ಲಿರುವ ಮಾವ ಬಂದು ನಿಮ್ಮ ಬಳಿ, “ಒಂದು ರಾಜಕೀಯ ಪಕ್ಷವು ಎಕ್ಸ್‌ ರೇ ಯಂತ್ರವನ್ನು ನಿಮ್ಮ ಮನೆಗೆ ತಂದು ಎಲ್ಲ ಉಳಿತಾಯದ ಹಣವನ್ನು, ಮಂಗಳಸೂತ್ರ, ಬಂಗಾರವನ್ನು ಸ್ಕ್ಯಾನ್‌ ಮಾಡಿ, ಕಸಿದುಕೊಂಡು ಬೇರೆಯವರಿಗೆ ನೀಡಲಿದೆ’ ಎಂದು ಹೇಳಿದರೆ ನೀವು ನಂಬುತ್ತೀರಾ? ಮೋದಿಯವರೂ ಅದನ್ನೇ ಮಾಡುತ್ತಿದ್ದಾರೆ’ ಎಂದಿದ್ದಾರೆ. ಇದೇ ವೇಳೆ, ಸಂವಿಧಾನವನ್ನು ಬದಲಿಸುವುದಿಲ್ಲ ಎಂದು ಬಿಜೆಪಿ ನಾಯಕರು ತಾತ್ಕಾಲಿಕವಾಗಿ ನಟನೆ ಮಾಡುತ್ತಿರಬಹುದು. ಆದರೆ ಅಧಿಕಾರಕ್ಕೆ ಮರಳಿದ ಬಳಿಕ ಸಂವಿಧಾನವನ್ನು ಬದಲಿಸಲಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next