Advertisement

ಜಿ7 ಶೃಂಗಕ್ಕೆ ಮೋದಿಗೆ ಆಹ್ವಾನ

01:57 AM Jan 18, 2021 | Team Udayavani |

ಹೊಸದಿಲ್ಲಿ: ಜೂನ್‌ ತಿಂಗಳಲ್ಲಿ ನಡೆ ಯುವ ಜಿ7 ಶೃಂಗದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುನೈಟೆಡ್‌ ಕಿಂಗ್‌ಡಮ್‌(ಯು.ಕೆ.) ಆಹ್ವಾನ ನೀಡಿದೆ. ಜತೆಗೆ  ಈ ಶೃಂಗ ಆರಂಭಕ್ಕೂ ಮುನ್ನ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿಯನ್ನೂ ಬ್ರಿಟಿಷ್‌ ಹೈಕಮಿಷನ್‌ ನೀಡಿದೆ.

Advertisement

ಶೃಂಗದಲ್ಲಿ ಕೊರೊನಾ ಸೋಂಕು, ಹವಾಮಾನ ವೈಪರೀತ್ಯ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಬದಲಾವಣೆಗಳು, ವೈಜ್ಞಾನಿಕ ಸಂಶೋಧನೆಗಳು, ಮುಕ್ತ ವ್ಯಾಪಾರ ಮತ್ತಿತರ ವಿಚಾರಗಳ ಕುರಿತು ಪ್ರಮುಖವಾಗಿ ಚರ್ಚೆಯಾಗಲಿದೆ.

ಜೂನ್‌ 11ರಿಂದ 13ರ ವರೆಗೆ ಯುಕೆಯ ಕಾರ್ನ್ವಾಲ್‌ನಲ್ಲಿ ಜಿ7 ಶೃಂಗ ನಡೆಯಲಿದ್ದು, ಭಾರತದ ಜತೆಗೆ ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾಗೂ “ಅತಿಥಿ ದೇಶ’ಗಳಾಗಿ ಪಾಲ್ಗೊ ಳ್ಳಲು ಆಹ್ವಾನ ನೀಡಲಾಗಿದೆ. ಜಿ7ನಲ್ಲಿ ಜಗತ್ತಿನ 7 ಪ್ರಜಾಸತ್ತಾತ್ಮಕ ರಾಷ್ಟ್ರಗಳಾದ ಯುಕೆ, ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಯುಎಸ್‌ಎ ಮತ್ತು ಐರೋಪ್ಯ ಒಕ್ಕೂಟ ಒಳಗೊಂಡಿದೆ. ಆಹ್ವಾನ ನೀಡುವ ವೇಳೆ ಭಾರತವನ್ನು “ಜಗತ್ತಿನ ಫಾರ್ಮಸಿ’ ಎಂದು ಬಣ್ಣಿಸಿರುವ ಯುಕೆ, ಕೊರೊನಾ ಲಸಿಕೆ ಅಭಿವೃದ್ಧಿಯ ವಿಚಾರಕ್ಕೆ ಸಂಬಂಧಿಸಿ ಭಾರತದ ಪರಿಶ್ರಮವನ್ನು ಶ್ಲಾ ಸಿದೆ.

Advertisement

Udayavani is now on Telegram. Click here to join our channel and stay updated with the latest news.

Next