Advertisement

2024ರಲ್ಲಿ ಮೋದಿ ಸರ್ಕಾರಕ್ಕೆ ಬಹುಮತ ಪಡೆಯುವುದೂ ಕಷ್ಟವಾಗಬಹುದು: ಶಶಿ ತರೂರ್

01:08 PM Jan 14, 2023 | Team Udayavani |

ಕೋಯಿಕ್ಕೋಡ್: 2019ರ ಲೋಕಸಭಾ ಚುನಾವಣೆಯಲ್ಲಿನ ವಿಜಯವನ್ನು 2024 ರಲ್ಲಿ ಪುನರಾವರ್ತಿಸಲು ಬಿಜೆಪಿಗೆ ಅಸಾಧ್ಯ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. ಲೋಕಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿಯು 50 ಸ್ಥಾನಗಳನ್ನು ಕಳೆದುಕೊಳ್ಳಬಹುದು ಎಂದು ಹೇಳಿದ್ದಾರೆ.

Advertisement

ಶುಕ್ರವಾರ ಇಲ್ಲಿ ನಡೆದ ಕೇರಳ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ತಿರುವನಂತಪುರಂ ಸಂಸದರು, ಬಿಜೆಪಿಯ ಪ್ರಾಬಲ್ಯದ ಬಗ್ಗೆ ಮಾತನಾಡುವ ವೇಳೆ ಅವರು ಅನೇಕ ರಾಜ್ಯಗಳನ್ನು ಕಳೆದುಕೊಂಡಿರುವುದು ಸಹ ಸತ್ಯ. ಕೇಂದ್ರದಲ್ಲಿ ಅಧಿಕಾರವನ್ನು ಕಳೆದುಕೊಳ್ಳುವುದು ಅಸಾಧ್ಯವೇನಲ್ಲ ಎಂದರು.

2019 ರಲ್ಲಿ ಬಿಜೆಪಿಯವರು ಎಷ್ಟು ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂಬುದನ್ನು ನೀವು ನೋಡಿದರೆ, ಮುಖ್ಯವಾಗಿ ಹರಿಯಾಣ, ಗುಜರಾತ್, ರಾಜಸ್ಥಾನದಲ್ಲಿ ಪ್ರತಿ ಸ್ಥಾನವನ್ನುಗೆದ್ದಿದ್ದರು, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಒಂದು ಸ್ಥಾನವನ್ನು ಹೊರತುಪಡಿಸಿ ಮತ್ತು ಬಂಗಾಳದಲ್ಲಿ ಉತ್ತಮ ಸಾಧನೆ ಮಾಡಿದ್ದರು. ಈಗ ಆ ಎಲ್ಲಾ ಫಲಿತಾಂಶಗಳನ್ನು ಪುನರಾವರ್ತಿಸಲು ಅಸಾಧ್ಯ. ಮತ್ತು 2024 ರಲ್ಲಿ ಬಿಜೆಪಿ ಬಹುಮತಕ್ಕಿಂತ ಕೆಳಗಿಳಿಯ ಬಹುದು” ಎಂದು ತರೂರ್ ಹೇಳಿದರು.

ಇದನ್ನೂ ಓದಿ:ಸ್ಟಾರ್‌ ಸುವರ್ಣದಲ್ಲಿ ರವಿವಾರ ‘ಕಾಂತಾರ’ ವರ್ಲ್ಡ್ ಪ್ರೀಮಿಯರ್‌

2019ರಲ್ಲಿ ಪುಲ್ವಾಮಾ ದಾಳಿ ಮತ್ತು ಬಾಲಾಕೋಟ್ ಸ್ಟ್ರೈಕ್ ಗಳು ಕೊನೆಯ ಕ್ಷಣದಲ್ಲಿ ಬಿಜೆಪಿ ಪರವಾದ ಅಲೆಯನ್ನು ಹುಟ್ಟುಹಾಕಲು ಸಹಾಯ ಮಾಡಿದ್ದವು. ಇದು 2024ರಲ್ಲಿ ಸಾಧ್ಯವಿಲ್ಲ. 2024ರಲ್ಲಿ ಬಿಜೆಪಿ ಕನಿಷ್ಠ 50 ಸ್ಥಾನಗಳನ್ನಾದರೂ ಕಳೆದುಕೊಳ್ಳಬಹುದು ಎಂದಿದ್ದಾರೆ.

Advertisement

2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 543 ರಲ್ಲಿ 303 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಗಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next