Advertisement

ಮೋದಿ ಸರ್ಕಾರ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ: ಪೇಜಾವರ ಶ್ರೀ 

11:40 AM Jun 01, 2018 | Team Udayavani |

ಉಡುಪಿ: ‘ನರೇಂದ್ರ ಮೋದಿ ನೇತೃತ್ವ ಸರ್ಕಾರದ ಮೇಲೆ ಬಹಳ ನಿರೀಕ್ಷೆ ಇರಿಸಿದ್ದೆವು, ಆದರೆ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ’ ಎಂದು ಪೇಜಾವರ ಶ್ರೀಗಳಾವ ವಿಶ್ವೇಶ ತೀರ್ಥ ಶ್ರೀಪಾದರು ಅಭಿಪ್ರಾಯ ಹೊರಹಾಕಿದ್ದಾರೆ. 

Advertisement

ಶುಕ್ರವಾರ ಸುದ್ದಿಗರರೊಂದಿಗೆ ಮಾತನಾಡಿದ ಶ್ರೀಗಳು ಈ ಹೇಳಿಕೆ ನೀಡಿದ್ದಾರೆ.’ನರೇಂದ್ರ ಮೋದಿ ಹಲವು ಸಾಧನೆಗಳನ್ನು ಮಾಡಿದ್ದಾರೆ, ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅವರು ವಿದೇಶದಿಂದ ಕಪ್ಪು ಹಣ ತರುವ ಕೆಲಸ ಮಾಡಬೇಕು’ ಎಂದರು. 

 ರಾಜ್ಯದ ನೂತನ ಸಮ್ಮಿಶ್ರ ಸರ್ಕಾರದ ಬಗ್ಗೆ  ಅಭಿಪ್ರಾಯ ಕೇಳಿದಾಗ ‘ಕುಮಾರಸ್ವಾಮಿ ಅವರು ಅನುಭವಿ ರಾಜಕಾರಣಿ. ಈ ಸರ್ಕಾರ ಪೂರ್ಣಾವಧಿ ಪೂರೈಸಲಿ’ ಎಂದರು. 

‘ನಾನು ಯಾವ ಪಕ್ಷದ ಪರವೂ ಇಲ್ಲ. ಒಳ್ಳೆಯ ಕೆಲಸ ಮಾಡಿದವರನ್ನು ಬೆಂಬಲಿಸುತ್ತೇನೆ. ಈಗ ಪ್ರಜಾಪ್ರಭುತ್ವದ ವಿಕೃತಿ ಮಾಡಲಾಗುತ್ತಿದೆ. ಎಲ್ಲಾ ಪಕ್ಷಗಳು ಈ ಕೆಲಸ ಮಾಡುತ್ತಿದ್ದು, ರೆಸಾರ್ಟ್‌ನಲ್ಲಿ ಶಾಸಕರನ್ನು ಬಂಧನದಲ್ಲಿಡುವುದು, ಹಣದ ಆಮಿಷ ಕೊಡುವುದು ಸರಿಯಲ್ಲ. ಇದಕ್ಕೆಲ್ಲಾ ಕಡಿವಾಣ ಹಾಕಲು ರಾಜ್ಯದಲ್ಲಿ ಸರ್ವಪಕ್ಷ ಸರ್ಕಾರ ಬರಬೇಕು. ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎನ್ನುವುದು ನನಗೆ ಗೊತ್ತಿಲ್ಲ’ಎಂದರು. 

ಕಾಂಗ್ರೆಸ್‌ ಮುಕ್ತ ಭಾರತದ ಕುರಿತು ಪ್ರಶ್ನಿಸಿದಾಗ ‘ಸರ್ಕಾರ ಇದ್ದ ಮೇಲೆ  ವಿಪಕ್ಷವೂ ಇರಬೇಕಲ್ಲ’ ಎಂದರು. 

Advertisement

‘ರಾಮ ಮಂದಿರಕ್ಕಿಂತ ಮೊದಲು ದೇಶದ ಆರ್ಥಿಕ ಪರಿಸ್ಥಿತಿ, ರೈತರ ಹಿತ ಸುಧಾರಣೆಯಾಗಬೇಕು’ ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು. 

‘ಈ ಬಾರಿಯೂ ಕೃಷ್ಣ ಮಠದಲ್ಲಿ  ಇಫ್ತಾರ್‌ ಕೂಟ ಮಾಡಬೇಕೆಂದಿದ್ದೇನೆ.ಆದರೆ ಮುಸ್ಲಿಮರು ಉತ್ಸಾಹ ತೋರುತ್ತಿಲ್ಲ. ಮೂರ್ತಿ ಇದ್ದಲ್ಲಿ ಪ್ರಾರ್ಥನೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಬಾರಿ ಭಾರೀ ಟೀಕೆ ಮಾಡಿರುವ ಕಾರಣ ಮುಸ್ಲಿಮರು ಹಿಂದೆ ಮುಂದೆ ನೋಡುತ್ತಿದ್ದಾರೆ. ಅವರಿಗೆ ಆ ಬಗ್ಗೆ ಬೇಸರವಿದೆ. ನಮಗೆ ಯಾವುದೇ ಬೇಸರ ಇಲ್ಲ. ನಮ್ಮ ಧೋರಣೆ ಒಂದೇ ಹಿಂದೂಗಳಿಗೆ ಅನ್ಯಾಯ ಆಗಬಾರದು, ಅನ್ಯ ಮತದ ಯಾರಿಗೂ ಅನ್ಯಾಯ ವಾಗಬಾರದು. ಹಿಂದೂಗಳ ನ್ಯಾಯವಾದ ಬೇಡಿಕೆ ಪೂರೈಸಬೇಕು’ ಎಂದರು.  

‘ದೇಶದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಸಂವಿಧಾನ ಬದಲಿಸಿ ಎಂದು ನಾನು ಹೇಳುವುದಿಲ್ಲ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next