ನವದೆಹಲಿ: ರಷ್ಯಾ-ಉಕ್ರೇನ್ ನಡುವೆ ಯುದ್ಧ ಮುಂದುವರಿದಿರುವ ನಡುವೆಯೇ ರಷ್ಯಾದಿಂದ ಇಂಧನ ಖರೀದಿಸುತ್ತಿರುವ ಬಗ್ಗೆ ಭಾರತದ ವಿರುದ್ಧ ಆಕ್ಷೇಪ ವ್ಯಕ್ತವಾಗುತ್ತಿರುವ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ, ಈ ವಿಚಾರದಲ್ಲಿ ಯಾವುದೇ ನೈತಿಕ ಸಂಘರ್ಷವಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಎಚ್ಚರ: ರಸ್ತೆ ದಾಟುವ ಭರದಲ್ಲಿ ಈ ತಪ್ಪನ್ನು ಎಂದೂ ಮಾಡದಿರಿ… ಬೆಚ್ಚಿಬೀಳಿಸುತ್ತೇ ಈ ವಿಡಿಯೋ
ಅಬುಧಾಬಿಯಲ್ಲಿ ಸಿಎನ್ ಎನ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಾವು ನಮ್ಮ ಗ್ರಾಹಕರಿಗಾಗಿ ನೈತಿಕ ಕರ್ತವ್ಯ ನಿರ್ವಹಿಸಬೇಕಾಗಿದೆ. ಭಾರತ 130 ಕೋಟಿ ಜನಸಂಖ್ಯೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ನಮ್ಮ ಮೇಲೆ ಒತ್ತಡ ಇದೆ ಎಂಬ ಭಾವನೆ ಇಲ್ಲ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಯಾವುದೇ ಒತ್ತಡ ಇಲ್ಲ. ನಮ್ಮದು ಜಗತ್ತಿನ ಐದನೇ ಅತೀ ದೊಡ್ಡ ಆರ್ಥಿಕ ದೇಶವಾಗಿದೆ. ಭಾರತ ರಾಷ್ಟ್ರೀಯ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುತ್ತಿದೆ ಎಂದು ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.
ಒಂದು ವೇಳೆ ರಷ್ಯಾದಿಂದ ಇಂಧನ ಖರೀದಿಸುವ ಬಗ್ಗೆ ಯಾವುದಾದರು ನೈತಿಕ ಸಂಘರ್ಷ ಎದುರಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತವಾಗಿಯೂ ಇಲ್ಲ. ಯಾವುದೇ ನೈತಿಕ ಸಂಘರ್ಷ ಇಲ್ಲ. ನಾವು ಯಾವುದೇ ಎಕ್ಸ್ ಅಥವಾ ವೈ ಬಳಿ ಖರೀದಿಸಿಲ್ಲ. ನಮಗೆ ಏನು ಬೇಕಾಗಿದೆಯೋ ಅದನ್ನು ಖರೀದಿಸಿದ್ದೇವೆ ಎಂದು ಪ್ರತ್ಯುತ್ತರ ನೀಡಿರುವುದಾಗಿ ವರದಿ ತಿಳಿಸಿದೆ.