Advertisement

PM Modi: ರೈತರ ಪ್ರತಿಭಟನೆ ನಡುವೆ ಕಬ್ಬು ಖರೀದಿ ದರ ಏರಿಕೆಗೆ ಕೇಂದ್ರದ ಸಮ್ಮತಿ

12:08 PM Feb 22, 2024 | Team Udayavani |

ನವದೆಹಲಿ: ತಾವು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಬೇಕೆಂದು ರೈತ ಸಂಘಟನೆಗಳು ತೀವ್ರ ಹೋರಾಟ ನಡೆಸುತ್ತಿರುವ ನಡುವೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (FRP) ಕ್ವಿಂಟಾಲ್‌ ಗೆ 340 ರೂಪಾಯಿ ಏರಿಕೆ ಮಾಡಲು ಅನುಮತಿ ನೀಡಿರುವುದಾಗಿ ಎಎನ್‌ ಐ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Bihar; ವಿಧಾನಸಭೆ ವಿಸರ್ಜಿಸಿ ಲೋಕಸಭೆಯ ಜತೆಗೆ ಚುನಾವಣೆಗೆ ಹೋಗಲು ನಿತೀಶ್ ಯೋಜನೆ?

ಪ್ರಧಾನಿ ಮೋದಿ ಅವರ ನೇತೃತ್ವದ ಸಮಿತಿಯು 2024-25ನೇ ಸಾಲಿಗೆ ಅನ್ವಯವಾಗುವಂತೆ ಕಬ್ಬಿನ ಪ್ರತಿ ಕ್ವಿಂಟಾಲ್‌ ಬೆಲೆಯಲ್ಲಿ 340 ರೂಪಾಯಿ ಹೆಚ್ಚಳ ಮಾಡಲು ಶಿಫಾರಸು ಮಾಡಿರುವುದಾಗಿ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದರು.

ಕಳೆದ ವರ್ಷ ಕ್ವಿಂಟಾಲ್‌ ಕಬ್ಬಿನ ಬೆಲೆ 315 ರೂಪಾಯಿ ಇದ್ದು, ಈ ವರ್ಷ 340 ರೂಪಾಯಿಗೆ ಏರಿಕೆ ಮಾಡಲಾಗಿದೆ. 2024ರ ಅಕ್ಟೋಬರ್‌ 1ರಿಂದ 2025ರ ಸೆಪ್ಟೆಂಬರ್‌ 30ರವರೆಗೆ ಏರಿಕೆ ದರ ಅನ್ವಯವಾಗಲಿದೆ ಎಂದು ಠಾಕೂರ್‌ ಹೇಳಿದರು.

ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಡಿ ಕೇಂದ್ರ ಸರ್ಕಾರ ಸುಮಾರು 12 ಕೋಟಿ ರೈತರಿಗೆ 2.81 ಲಕ್ಷ ಕೋಟಿ ರೂಪಾಯಿ ಹಣ ಪಾವತಿಸಲಾಗಿದೆ. ಆದರೆ ಕಾಂಗ್ರೆಸ್‌ ಪಕ್ಷ ರೈತರ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದಾಗಿ ವಾಗ್ದಾಳಿ ನಡೆಸಿದರು.

Advertisement

ಅಷ್ಟೇ ಅಲ್ಲ ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಲ್ಲಿ ಕೇಂದ್ರ ಸರ್ಕಾರ ಪ್ರತಿ ವರ್ಷ ಮೂರು ಕಂತುಗಳಲ್ಲಿ ಆರು ಸಾವಿರ ರೂಪಾಯಿಯನ್ನು ಅರ್ಹ ರೈತರ ಖಾತೆಗೆ ಜಮೆ ಮಾಡುತ್ತಿದೆ. ಇದು ನಮ್ಮ ಸರ್ಕಾರದ ಬದ್ಧತೆಯಾಗಿದೆ ಎಂದು ಠಾಕೂರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next