ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಒಗ್ಗೂಡಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಟೆಂಡರ್ ಗಳಲ್ಲಿ ಶೇ.25ರಷ್ಟು ಕಮಿಷನ್ ದಂಧೆ ನಡೆಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಆರೋಪಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರವನ್ನು ಕಮಿಷನ್ ಸರ್ಕಾರ ಎಂದು ಜರಿಯುವ ಮೊದಲು ತಮ್ಮ ಸರ್ಕಾರ ಭ್ರಷ್ಟಾಚಾರದ ಕುರಿತು ಬಾಯಿ ಬಿಡಲಿ. ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಸೇರಿ ಶೇ.25ರಷ್ಟು ಕಮಿಷನ್ ದಂಧೆ ನಡೆಸಿದ್ದನ್ನು ಹೇಳಲಿ.
ಭ್ರಷ್ಟಾಚಾರ ಆರೋಪದಲ್ಲಿ ಜೈಲಿನ ಅನುಭವ ಇರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಎಡ, ಬಲ ಕುಳ್ಳರಿಸಿಕೊಂಡು ಪ್ರಧಾನಿ ಮೋದಿ ಭ್ರಷ್ಟಾಚಾರ ನಿಯಂತ್ರಣದ ಕುರಿತು ಆಡುವ ಮಾತುಗಳು ನಗೆ ಪಾಟಿಲಿಗೆ ಗುರಿಯಾಗಿದೆ. ಅಲ್ಲದೇ ಮೋದಿ ಮಾತುಗಳು ಪ್ರಧಾನಿ ಹುದ್ದೆಗೆ ತಕ್ಕುಗಾಗಿಲ್ಲ ಎಂದು ರಾಮ ಜೇಠ್ಮಲಾನಿ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರೇ ಆಕ್ಷೇಪ ಎತ್ತಿದ್ದಾರೆ. ಮೋದಿ ಪ್ರಧಾನಿ ಹುದ್ದೆಯ ಗಾಂಭೀರ್ಯ ಹಾಳು ಮಾಡಿದ್ದಾರೆ ಎಂದರು. ಭಾರತಕ್ಕೆ ಸಂವಿಧಾನ ರಚಿಸಿಕೊಟ್ಟಿರುವ ಡಾ.ಬಿ.ಆರ್.ಅಂಬೇಡ್ಕರ ಅವರು ಬಸವಣ್ಣನವರಿಗೆ ಸಮಾನ. ಬಸವ ಆಶಯಗಳನ್ನು ಸಂವಿಧಾನದಲ್ಲಿ ಅಡಕ ಮಾಡುವ ಮೂಲಕ ಭಾರತೀಯ
ಸಂವಿಧಾನಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟಿದ್ದಾರೆ.
ಸಂವಿಧಾನ ಭಾರತದ ಪಾಲಿಗೆ ಹೃದಯದಂತಿದ್ದು, ಈ ಹೃದಯವನ್ನೇ ಅನಂತಕುಮಾರ ಹೆಗಡೆ ಈ ಬದಲಾಯಿಸಲು ಹೊರಟ್ಟಿದ್ದಾರೆ. ಯಡಿಯೂರಪ್ಪ ಮೇ 17ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಹೇಳಿರುವುದು
ಹಗಲುಗನಸು. ಮನುಷ್ಯ ಹತಾಶರಾದಾಗ ಇಂಥ ಹೇಳಿಕೆ ನೀಡುವುದು ಸಹಜ. ಹೀಗಾಗಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು.