Advertisement

ಪಾಠ ಮಾಡಲು ಬರದ ಮೋದಿ “ವಚನಭ್ರಷ್ಟ ‘

12:29 PM Mar 05, 2017 | Team Udayavani |

ತಿ.ನರಸೀಪುರ: ದೇಶದಲ್ಲಿ ಆರ್ಥಿಕ ಬದಲಾವಣೆ ತರುತ್ತೇನೆಂದು ಅಧಿಕ ಮೌಲ್ಯದ ನೋಟುಗಳ ಅಪನಗದೀಕರಣ ಗೊಳಿಸಿದ ವೇಳೆ ಗ್ರಾಮೀಣ ಪ್ರದೇಶಕ್ಕೆ ಬಂದು ಆರ್ಥಿಕತೆಯ ಪಾಠ ಮಾಡುತ್ತೇ ನೆಂದು ಹೇಳಿದ್ದ ಪ್ರಧಾನಿ ಮೋದಿಯವರು ಈವರೆಗೂ ಬಂದು ಪಾಠ ಮಾಡದೆ ವಚನಭ್ರಷ್ಟರಾಗಿದ್ದಾರೆ ಎಂದು ಅಖೀಲ ಭಾರತ ಕಾಂಗ್ರೆಸ್‌ ಸಮಿತಿ ವಕ್ತಾರ ಜೆಟ್ಟಿ ಕುಸುಮ ಕುಮಾರ್‌ ಆರೋಪಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿ ರಸ್ತೆಯಲ್ಲಿ ಶನಿವಾರ ಕಾಂಗ್ರೆಸ್‌ ಪಕ್ಷವು ಆಯೋಜಿಸಿದ್ದ ಕೇಂದ್ರ ಸರ್ಕಾರದ ನೋಟು ಅಪನಗದೀಕರಣ ವಿರುದ್ಧದ ಜನವೇದನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ನೋಟುಗಳನ್ನು ರದ್ದುಗೊಳಿಸಿದ 50 ಕಾಲ ದಿನಗಳ ಕಾಲ ಮಿತಿಯಲ್ಲಿ ದೇಶದಲ್ಲಾಗುವ ಆರ್ಥಿಕ ಮಹತ್ವದ ಬದಲಾವಣೆ ಬಗ್ಗೆ ತಿಳಿಸಲು ಹಳ್ಳಿಗೆ ಬಾರದಿರುವ ಪ್ರಧಾನಿ ಅವರ ವಿರುದ್ಧ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದಲೂ ಅಂಚೆ ಚಳವಳಿ ನಡೆಸಲಾಗುವುದು ಎಂದರು.

ದೇಶದಲ್ಲಿ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿ ಚಲಾವಣೆಗೆ ನೀಡಿದ 2000 ರೂ. ಮುಖಬೆಲೆ ನೋಟಿಗೆ ಚಿಲ್ಲರೆ ಸಮಸ್ಯೆ ಎದುರಾಗಿದೆ. ಹಣಕಾಸಿನ ವಹಿವಾಟಿಗೆ ಕಾರ್ಡುಗಳನ್ನು ಬಳಸಿ ಎಂದು ಹೇಳುತ್ತಾರೆ. ಕಾರ್ಡುಗಳನ್ನು ಬಳಕೆ ಮಾಡಿದ್ದಕ್ಕೆ ದೇಶದ ಜನರು ಅಮೆರಿಕಾ ಹಾಗೂ ಚೀನಾ ದೇಶಗಳ ಕಂಪನಿಗಳಿಗೆ 2.50 ರೂ. ಶುಲ್ಕವನ್ನು ಕೊಡಬೇಕಾಗಿದೆ. ಇದು ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ಭಾಗ್ಯವೆಂದು ಟೀಕಿಸಿದರು. 

ವಿಧಾನ ಪರಿಷತ್‌ ಸದಸ್ಯ ಆರ್‌. ಧರ್ಮಸೇನಾ ಮಾತನಾಡಿ, ಬಂಡವಾಳ ಶಾಹಿಗಳ ಪರವಿರುವ ಕೇಂದ್ರ ಸರ್ಕಾರ ನೋಟುಗಳ ಅಪನಗದೀಕರಣಗೊಳಿಸುವ ಮೂಲಕ ಬಡವರ ಮೇಲೆ ಬ್ರಹ್ಮಾಸ್ತ್ರ ಬಳಸಿದರು. ನೋಟು ರದ್ಧತಿಯಿಂದ ಯಾವೊಬ್ಬ ಶ್ರೀಮಂತನಿಗೂ ತೊಂದರೆ ಯಾಗಲಿಲ್ಲ. ದುಡಿಮೆ ಮಾಡುತ್ತಿದ್ದ ಬಡವರು ಕೂಡಿಟ್ಟಿದ್ದ ಹಣವನ್ನು ಉಳಿಸಿಕೊಳ್ಳಲು ಕೂಲಿ ಕೆಲಸವನ್ನೂ ಬಿಟ್ಟು ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿ ನಿಂತರು.

ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಆಡಳಿತದಿಂದ ಬೇಸತ್ತಿದ್ದ ಜನರು ಕಳೆದ ವಿಧಾನಸಭಾ ಚುನಾವಣೆಯ 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದರು. ಇಂದಿಗೂ ದೇಶದಲ್ಲಿ ಬಡವರ ಮತ್ತು ರೈತಪರವಾದ ಸರ್ಕಾರವನ್ನು ನೀಡಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವೆಂದು ತಿಳಿಸಿದರು.

Advertisement

ಜಿಪಂ ಸದಸ್ಯ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿ.ಹೆಚ್‌.ಮಂಜು ನಾಥನ್‌ ಮಾತನಾಡಿ, ನೋಟು ಅಪನಗದೀ ಕರಣದಿಂದ ದೇಶದ ಬಹುಪಾಲು ಬಡವರು ಹಣವನ್ನು ಬದಲಾವಣೆ ಮಾಡಿ ಕೊಳ್ಳಲಿಕ್ಕೆ ಹೆಣಗಾಡಿದರು. ಯಾವೊಬ್ಬ ಶ್ರೀಮಂತನೂ ಬ್ಯಾಂಕಿನ ಮುಂದೆ ಕ್ಯೂ ನಿಲ್ಲಲಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅವೈಜಾnನಿಕ ಕ್ರಮದಿಂದ ದುಡಿಯುವ ವರ್ಗ ಮತ್ತು ಕಾರ್ಮಿಕರು ಪರಿತಪಿಸಿದರು. ಇಂತಹ ಬೇಜವಾಬ್ದಾರಿ ಕೇಂದ್ರ ಸರ್ಕಾರಕ್ಕೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠವನ್ನು ಕಲಿಸಬೇಕೆಂದು ಕರೆ ನೀಡಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ಉಪಾಧ್ಯಕ್ಷರಾದ ಪಿ.ಗುರುಪಾದಸ್ವಾಮಿ, ಆರ್‌.ಪ್ರಕಾಶ್‌ಕುಮಾರ್‌, ಕಾರ್ಯದರ್ಶಿ ದೀಪಕ್‌, ಎಸ್ಟಿಗಳ ವಿಭಾಗದ ಅಧ್ಯಕ್ಷ ಹಸ್ತಿಕೇರಿ ನಾಗರಾಜು, ಉಪಾಧ್ಯಕ್ಷ ಹೊನ್ನನಾಯಕ, ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಕೆ.ವಜ್ರೆàಗೌಡ, ಪುರಸಭಾ ಅಧ್ಯಕ್ಷೆ ಸುಧಾ ಗುರುಮಲ್ಲಪ್ಪ, ಸ್ಪಟಿಕ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಂ.ಕುಮಾರ್‌, ತಾಪಂ ಸದಸ್ಯರಾದ ಆರ್‌.ಚಲುವರಾಜು, ರಾಮಲಿಂಗಯ್ಯ,

ಕೆ.ಎಸ್‌.ಗಣೇಶ್‌, ಕುಮುದ, ಬನ್ನೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರವೀಂದ್ರಕುಮಾರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಕೊಡಗಳ್ಳಿ ಧನಂಜಯ, ಎಪಿಎಂಸಿ ಮಾಜಿ ಸದಸ್ಯ ಉಕ್ಕಲಗೆರೆ ಬಸವಣ್ಣ, ಗ್ರಾ.ಪಂ ಸದಸ್ಯ ಎಂ.ರಾಜು, ಮಾಜಿ ಅಧ್ಯಕ್ಷ ಅಕ್ಕೂರು ಮಹೇಶ, ವಕ್ಫ್ ಬೋರ್ಡ್‌ ನಿರ್ದೇಶಕ ಬಿ.ಮನ್ಸೂರ್‌ ಆಲಿ, ಮುಖಂಡರಾದ ಸೋಸಲೆ ಮಹದೇವಸ್ವಾಮಿ, ಡಾ.ಕೆ.ಎನ್‌.ಬಸವರಾಜು, ಹುಣಸೂರು ಬಸವಣ್ಣ, ಸಂತೃಪ್ತಿಕುಮಾರ್‌, ಕನಕಪಾಪು, ಕೇತಳ್ಳಿ ಸಿದ್ಧಶೆಟ್ಟಿ, ಮಲ್ಲಾಜಮ್ಮ, ಚಿದರವಳ್ಳಿ ಚಂದ್ರಶೇಖರ್‌, ಕೊಳತ್ತೂರು ಕುಮಾರ, ಕನ್ನಹಳ್ಳಿ ಲಕ್ಷ್ಮಣ ಹಾಗೂ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next