Advertisement
ರಾಹುಲ್ “ಇಂಡಿಯಾ’ ಕೂಟದ ಪ್ರಧಾನಿ ಅಭ್ಯರ್ಥಿಯೇ?ಪ್ರಸಕ್ತ ಸಾಲಿನ ಚುನಾವಣೆಗೆ ಸಂಬಂಧಿ ಸಿದಂತೆ ಪ್ರಧಾನಿ ಜತೆಗೆ ರಾಹುಲ್ ಗಾಂಧಿ ಚರ್ಚೆ ನಡೆಸಬಹುದು ಎಂಬ ಸಲಹೆಯನ್ನು ಒಪ್ಪಿಕೊಂಡ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಕೇಂದ್ರ ಸಚಿವೆ ಸ್ಮತಿ ಇರಾನಿ ಟೀಕಿಸಿ ದ್ದಾರೆ. ರಾಹುಲ್ ಗಾಂಧಿಯ ವರೇನು ಇಂಡಿಯಾ ಒಕ್ಕೂ ಟದ ಪ್ರಧಾನಿ ಅಭ್ಯ ರ್ಥಿಯೇ? ಅಮೇಠಿಯಲ್ಲೇ ಸಾಮಾನ್ಯ ಬಿಜೆಪಿ ಕಾರ್ಯಕರ್ತನ ಎದುರು ಸ್ಪರ್ಧಿಸಲೂ ರಾಹುಲ್ ಅಂಜುತ್ತಾರೆ. ಇಷ್ಟು ಮಾತ್ರವಲ್ಲದೆ ವಯನಾಡ್ ಸಂಸದ ರಾಹುಲ್ ಗಾಂಧಿಯವರಿಗೆ ಪ್ರಧಾನಿ ಎದುರಾಗಿ ಮಾತನಾಡುವಷ್ಟು ತಿಳಿವಳಿಕೆ ಇದೆಯೇ ಎಂದು ಸಚಿವೆ ಸ್ಮತಿ ಇರಾನಿ ಪ್ರಶ್ನಿಸಿದ್ದಾರೆ.
ಮುಂಬಯಿ: “ದೇಶದ ಆಡಳಿತವನ್ನು ಮೂರನೇ ಬಾರಿಯೂ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈಗಿಟ್ಟರೆ ಆ ಇಬ್ಬರೂ ಸೇರಿ ಬಡವರು, ದಲಿತರು ಮತ್ತು ಬುಡಕಟ್ಟು ಜನಂಗಾದವರನ್ನು ಸೇವಕರಂತೆ ನಡೆಸಿಕೊಳ್ಳುತ್ತಾರೆ’ ಹೀಗೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಮಹಾರಾಷ್ಟ್ರದ ಧುಲೆಯಲ್ಲಿ ಚುನಾವಣ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, “ಸ್ವಾತಂತ್ರ್ಯಕ್ಕೂ ಮುನ್ನ ದಲಿತರು, ದಮನಿತ ರನ್ನು ಸೇವಕರಂತೆ ನಡೆಸಿಕೊಳ್ಳಲಾಗುತ್ತಿತ್ತು. ನೀವೇ ನಾದರೂ 3ನೇ ಅವಧಿಯ ಅಧಿಕಾರವನ್ನೂ ಕೊಟ್ಟರೆ ಅದೇ ಪರಿಸ್ಥಿತಿ ಮರಳಲಿದೆ. ಅಲ್ಲದೆ ನೀವು ನಿಮ ಗಾಗಿ ನಿಮ್ಮವರಿಗಾಗಿ ಈ ಬಾರಿ ಮತದಾನ ಮಾಡ ಬೇಕಿದೆ. ಸಂವಿಧಾನ ಇಲ್ಲದಿದ್ದರೆ ನಿಮ್ಮನ್ನು ರಕ್ಷಿಸಲೂ ಯಾರೂ ಇರುವುದಿಲ್ಲ ಎಂದು ಹೇಳಿದ್ದಾರೆ.