Advertisement

Modi; ಉಕ್ರೇನ್‌ ಸಂಘರ್ಷಕ್ಕೆ ಮಾತೇ ಮದ್ದು: ಪುತಿನ್‌ಗೆ ಮೋದಿ ಮತ್ತೆ ಮನವರಿಕೆ

11:26 PM Aug 27, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಜತೆಗೆ ಫೋನ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ  ತಮ್ಮ ಉಕ್ರೇನ್‌ ಪ್ರವಾಸದ ಮಾಹಿತಿ ನೀಡಿದ್ದಾರೆ.

Advertisement

ಉಕ್ರೇನ್‌ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಹೋರಾಟ ವನ್ನು ಶಾಂತಿಯುತವಾಗಿ ಮುಕ್ತಾಯ ಗೊಳಿಸಬೇಕು. ಅದಕ್ಕೆ ಭಾರತ ಬೆಂಬಲ ನೀಡಲಿದೆ ಎಂದು ರಷ್ಯಾ ಅಧ್ಯಕ್ಷರಿಗೆ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಭಾರತ ಮತ್ತು ರಷ್ಯಾ ನಡುವಣ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿ ಕೊಳ್ಳುವ ಕುರಿತು ಪುತಿನ್‌ರೊಂದಿಗೆ ಚರ್ಚಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಸೋಮವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜತೆಗೆ ಮಾತನಾಡಿದ್ದ ಪ್ರಧಾನಿ ಮೋದಿಯವರು ಉಕ್ರೇನ್‌ ಪ್ರವಾಸ ಮತ್ತು ಬಾಂಗ್ಲಾದೇಶದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next