Advertisement

ವಿಶ್ವವೇ ನೋಡುವಂತಾಗಿದೆ ಮೋದಿ ಆಡಳಿತ: ಪಾಟೀಲ್‌

01:17 PM Jun 13, 2022 | Team Udayavani |

ಮಸ್ಕಿ: 8 ವರ್ಷಗಳ ಕಾಲ ಸ್ವತ್ಛ, ಮುಕ್ತ ಮತ್ತು ಜನಪರ ಆಡಳಿತ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆಡಳಿತ ಇಡೀ ವಿಶ್ವವೇ ನೋಡುವಂತಾಗಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹೇಳಿದರು.

Advertisement

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಏಂಟು ವರ್ಷಗಳ ಕಾಲ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಜನಪರ ಎನ್ನುವುದನ್ನು ಸಾಭೀತು ಮಾಡಿದೆ. ನರೇಂದ್ರ ಮೋದಿ ಅವರಿಂದ ಮಾತ್ರ ದೇಶದ ಪ್ರಗತಿ ಎಂಬುದು ಈಗ ಜನರಿಗೂ ಗೊತ್ತಾಗಿದೆ. ರೈತರ ಪರವಾಗಿ ಮೋದಿ ಸರಕಾರ ವಿಶೇಷ ಕಾಳಜಿ ತೋರಿದ್ದು, ಕಿಸಾನ್‌ ಸಮ್ಮಾನ್‌ ಯೋಜನೆ ಮೂಲಕ ರೈತರಿಗೆ ಬೆಂಬಲ, 125 ಮಾರ್ಗಗಳಲ್ಲಿ ರೈತರು ಬೆಳೆದ ಬೆಳೆ ಸಾಗಿಸಲು ರೈಲ್ವೆ ಯೋಜನೆ ಸೇರಿ ಅಗತ್ಯ ಸಾರಿಗೆ ವ್ಯವಸ್ಥೆ, ಆಯುಷ್ಯ ಮಾನ್‌ ಭಾರತ, ಉಜ್ವಲ ಯೋಜನೆ, ಜನಧನ್‌ ಖಾತೆ, ಕಿಸಾನ್‌ ಸಮ್ಮಾನ ಯೋಜನೆ, ಪ್ರಧಾನ ಮಂತ್ರಿ ಸುರಕ್ಷತಾ ವಿಮಾ ಯೋಜನೆ ಸೇರಿ ಹಲವು ಜನಪರವಾದ ಯೋಜನೆಗಳು ಜಾರಿಗೆ ತಂದು ಸೈ ಎನಿಸಿಕೊಂಡಿದೆ ಎಂದರು.

2028 ರೊಳಗಾಗಿ ದೇಶದ ಪ್ರತಿಯೊಬ್ಬರಿಗೆ ಮನೆ ಒದಗಿಸುವ ಸಂಕಲ್ಪದಂತೆ ಲಕ್ಷ-ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಸ್ವತ್ಛ ಭಾರತ ಯೋಜನೆ, ಮುದ್ರಾ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೊರೊನಾ ನಿಯಂತ್ರಣಕ್ಕೆ ವಿಶ್ವದಲ್ಲೇ ಪ್ರಥಮ ಬಾರಿಗೆ ಲಸಿಕೆ ಕಂಡು ಹಿಡಿದ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ. ದೇಶದ ಬಡತನ ನಿರ್ಮೂಲನೆಗಾಗಿ ಹಾಗೂ ಭ್ರಷ್ಟಾಚಾರ ಮುಕ್ತ ರಾಷ್ಟ್ರವನ್ನಾಗಿಸಲು ಮೋದಿ ಅವರು ದಿಟ್ಟ ಕ್ರಮ ಕೈಗೊಂಡಿದ್ದಾರೆ. ರಕ್ಷಣಾ ವ್ಯವಸ್ಥೆಯಲ್ಲಿ ದೇಶ ಸಾಕಷ್ಟು ಸಾಧನೆ ಮಾಡಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಎಸ್ಸಿ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸವ ವಕೀಲ, ಮಂಡಲ ಕಾರ್ಯದರ್ಶಿ ಮಲ್ಲು ಯಾದವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next