Advertisement

BJP: ಬೆಂಗಳೂರಿನಲ್ಲಿ ಮೋದಿ 5 ಕಿ.ಮೀ. ರೋಡ್‌ ಶೋ?

12:25 AM Jan 17, 2024 | Team Udayavani |

ಬೆಂಗಳೂರು/ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಜ. 19ರಂದು ಬೆಂಗಳೂರಿಗೆ ಭೇಟಿ ನೀಡುವ ವೇಳೆ ಐದು ಕಿ.ಮೀ. ರೋಡ್‌ ಶೋ ನಡೆಸುವ ಸಾಧ್ಯತೆ ಇದೆ. ದೇವನಹಳ್ಳಿ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರೋಸ್ಪೇಸ್‌ ಪಾರ್ಕ್‌ನಬೋಯಿಂಗ್‌ ಇಂಡಿಯಾ ಇಂಜಿ ನಿಯರಿಂಗ್‌ ಟೆಕ್ನಾಲಜಿ ಸೆಂಟರ್‌ (ಬಿಐಇಟಿಸಿ)ವರೆಗೆ ಇರುವ ಮಾರ್ಗದ ನೀಲ ನಕ್ಷೆಯನ್ನು ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ರಾಜ್ಯ ಬಿಜೆಪಿ ಘಟಕ ಕಳುಹಿಸಿ ಕೊಟ್ಟಿದೆ.

Advertisement

ಜ. 19ರಂದು ಹೊಸದಿಲ್ಲಿಯಿಂದ ವಿಶೇಷ ವಿಮಾನದ ಮೂಲಕ ಕಲಬುರಗಿಯ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 9.30ಕ್ಕೆ ಆಗಮಿಸುವ ಅವರು ಬಳಿಕ ಹೆಲಿಕಾಪ್ಟರ್‌ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳುವರು. ಅಲ್ಲಿ ಸಹಸ್ರಾರು ಮನೆಗಳ ಹಕ್ಕುಪತ್ರ ವಿತರಣೆ ನೆರವೇರಿಸಿ ಕಲಬುರಗಿಗೆ ಮಧ್ಯಾಹ್ನ 12.30ಕ್ಕೆ ಮರಳುವರು. ಅದೇ ದಿನ ಬೆಂಗಳೂರಿಗೂ ಆಗಮಿಸಲಿರುವ ಹಿನ್ನೆಲೆಯಲ್ಲಿ ಕಡಿಮೆ ಅವಧಿಯಲ್ಲಿ ರೋಡ್‌ ಶೋ ಆಯೋಜಿಸಬೇಕಾದ ಅನಿವಾರ್ಯ ರಾಜ್ಯ ಘಟಕಕ್ಕೆ ಎದುರಾಗಿದೆ.

ಹೀಗಾಗಿ ಐದು ಕಿ.ಮೀ. ರೋಡ್‌ ಶೋ ನಡೆಸ ಲಾಗುವುದು ಎಂದು ದಿಲ್ಲಿಗೆ ಮಾಹಿತಿ ಕಳುಹಿಸ ಲಾಗಿದೆ. ಆದರೆ ಪಿಎಂಒದಿಂದ ಪ್ರವಾಸ ವಿವರವನ್ನು ಕಳುಹಿಸದೆ ಇರುವುದರಿಂದ ಸಣ್ಣಮಟ್ಟಿಗಿನ ಗೊಂದಲ ಇದೆ. ಮೋದಿ ಮೈಸೂರಿಗೂ ಭೇಟಿ ನೀಡುವ ಸಾಧ್ಯತೆ ಇದ್ದು, ಖಚಿತವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next