Advertisement

ಬಲದಂಡೆ ನಾಲೆ ಆಧುನೀಕರಣ ಕಾಮಗಾರಿ ಕಳಪೆ: ಮುರಾರಿ

06:02 PM Jul 27, 2022 | Team Udayavani |

ಲಿಂಗಸುಗೂರು: ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಆಧುನೀಕರಣ ಕಾಮಗಾರಿ ಕಳಪೆ ಮಟ್ಟದಿಂದ ನಡೆಯುತ್ತಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಚ್‌.ಬಿ. ಮುರಾರಿ ಆರೋಪಿಸಿದರು.

Advertisement

ಗೋರೆಬಾಳ ಗ್ರಾಮದ ಹತ್ತಿರ ಬಲದಂಡೆ ನಾಲೆ ಕಾಮಗಾರಿ ಪರಿಶೀಲಿಸಿದ ಅವರು, ಕೃಷ್ಣಭಾಗ್ಯ ಜಲ ನಿಗಮದ ನಾಲೆ ನಿರ್ವಹಣೆ ಕಾಮಗಾರಿ ಹೆಸರಲ್ಲಿ ಕೋಟ್ಯಂತರ ಹಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ನಾರಾಯಣಪುರ ಮುಖ್ಯನಾಲೆಯ 11ನೇ ಕಿ.ಮೀ ಗೋರೆಬಾಳ ಹತ್ತಿರ ಬಾಕಿ ಉಳಿದ ಕೆಲಸ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿದರು.

ಈಗಾಗಲೇ ಎರಡು ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಸ್ಥಳಕ್ಕೆ ಖುದ್ದಾಗಿ ಊರಿನ ಗ್ರಾಮಸ್ಥರು ಮತ್ತು ರೈತ ಮುಖಂಡರು ಕೂಡಿಕೊಂಡು ಕಾಮಗಾರಿ ಬಂದ್‌ ಮಾಡಿಸಲಾಗಿದೆ. ಇಷ್ಟಾದರೂ ಕಾಮಗಾರಿ ನಡೆದ ಸ್ಥಳಕ್ಕೆ ಇದಕ್ಕೆ ಸಂಬಂಧಪಟ್ಟಂತೆ ಎಇಇ ಹಾಗೂ ಜೆಇ ಆಗಲಿ ಕಾಮಗಾರಿ ಸ್ಥಳದಲ್ಲಿ ಇಲ್ಲ. ಗುತ್ತಿಗೆದಾರರು ಸರ್ಕಾರದ ನಿಯಮ ಗಾಳಿಗೆ ತೂರಿ ಮನಬಂದಂತೆ ತರಾತುರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗುತ್ತೇದಾರರ ಮೇಲೆ ಕಾನೂನು ಕ್ರಮ ಜರುಗಿಸಿ ಲೈಸೆನ್ಸ್‌ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು.

ಈ ವೇಳೆ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲನಗೌಡ ರಾಂಪುರ್‌, ತಾಲೂಕು ಅಧ್ಯಕ್ಷ ಅಂಬರೀಶ ಸರ್ಕಾರ್‌, ಮುಖಂಡರಾದ ಧರ್ಮರಾಜ, ಶಂಕ್ರಪ್ಪ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next