Advertisement

ಕೃಷಿ ವಲಯಕ್ಕೆ ಹೆಚ್ಚಿನ ಆಧುನೀಕರಣದ ಅಳವಡಿಕೆ ಅಗತ್ಯ : ಮನ್ ಕಿ ಬಾತ್ ನಲ್ಲಿ ಮೋದಿ  

02:16 PM Mar 28, 2021 | Team Udayavani |

ನವ ದೆಹಲಿ : ಕೃಷಿ ಕ್ಷೇತ್ರದಲ್ಲಿ ಆಧುನೀಕರಣವನ್ನು ಅಳವಡಿಸಿಕೊಳ್ಳುವುದು ಇಂದಿನ ಕಾಲಮಾನಕ್ಕೆ ಬಹಳ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಅವರ ಮಾಸಿಕ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಅವರು, ಕೃಷಿ ವಲಯಗಳ ಭವಿಷ್ಯದ ಬಗ್ಗೆ ಮಾತನಾಡಿದರು.

ಇಂದಿನ ಕಾಲಮಾನಕ್ಕೆ ಕೃಷಿ ವಲಯಕ್ಕೆ ಆಧುನಿಕ ಪದ್ಧತಿಗಳು ಅತ್ಯಗತ್ಯ ಎಂದು ಪ್ರತಿಪಾದಿಸಿದ ಪ್ರಧಾನಿ, ಜೀವನದ ಪ್ರತಿಯೊಂದು ಹಂತದಲ್ಲಿಯೂ ಆಧುನೀಕರಣವನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

ಓದಿ :   ಕನಕಪುರಕ್ಕಾದರೂ ಬರಲಿ ಬೆಂಗಳೂರಿಗಾದರೂ ಬರಲಿ ಬಂದಾಗ ನೋಡೋಣ: ಡಿ ಕೆ ಸುರೇಶ್

ಭಾರತೀಯ ಕೃಷಿ ಪದ್ಧತಿಗೆ ಆಧುನೀಕರಣದ ತುರ್ತು ಅಗತ್ಯತೆ ಇದೆ. ಈಗಾಗಲೇ ನಾವು ಸಮಯ ಮೀರಿದ್ದೇವೆ. ಇಷ್ಟೋತ್ತಿಗಾಗಲೇ ನಮ್ಮ ಕೃಷಿ ಪದ್ಧತಿಯಲ್ಲಿ ಆಧುನೀಕರಣ ದೊಡ್ಡ ಮಟ್ಟದಲ್ಲಿ ಅಳವಡಿಕೆಯಾಗಿರಬೇಕಿತ್ತು ಎಂದು ಅವರು ತಮ್ಮ 75 ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಕೃಷಿ ವಲಯದಲ್ಲಿ ಉದ್ಯೋಗವಕಾಶಗಳನ್ನು ಹೆಚ್ಚಿಸುವ ಸಲುವಾಗಿ, ಕೃಷಿಕರ ಆದಾಯವನ್ನು ಹೆಚ್ಚಿಸಲು,  ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಜೊತೆಗೆ ಆಧುನೀಕರಣ ಪರ್ಯಾಯಗಳನ್ನು, ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದು ಕೂಡ ಮುಖ್ಯ ಎಂದರು.

ಶ್ವೇತ ಕ್ರಾಂತಿಯ ಸಂದರ್ಭದಲ್ಲಿ ದೇಶವು ಇದಕ್ಕೆ ಸಾಕ್ಷಿಯಾಗಿದೆ. ಜೇನುನೊಣ ಸಾಕಾಣಿಕೆ ಅಂತಹ ಒಂದು ಪರ್ಯಾಯವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಇನ್ನು, ದೇಶದ ಕೋವಿಡ್ 19 ಸೋಂಕಿನ ವಿರುದ್ಧವಾಗಿ ವಿಶ್ವದಲ್ಲೇ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಲಸಿಕೆ ಆಂದೋಲನದ ಬಗ್ಗೆ ಅವರು ಒತ್ತಿ ಹೇಳಿದ್ದಾರೆ.

ದೇಶದಲ್ಲಿ ಕೋವಿಡ್ 19 ನ ರೂಪಾಂತರಿ ಅಲೆಯ ಕಾರಣದಿಂದ ದಿನ ನಿತ್ಯ ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳ ಬಗ್ಗೆ ಎಚ್ಚರಿಕೆ ನೀಡಿರುವ ಅವರು, ಔಷಧಿಗಳ ಜೊತೆಜೊತೆಗೆ ಕಟ್ಟು ನಿಟ್ಟಿನ ಕಠಿಣವಾದ ಕ್ರಮಗಳ(ದವಾಯಿ ಭಿ, ಕಡೈ ಭಿ) ಬಗ್ಗೆಯೂ ಮುಖ್ಯ ಎಂದು ಹೇಳಿದ್ದಾರೆ.

ಓದಿ :   ಭಾವನಾತ್ಮಕತೆಯ ಬದುಕನ್ನು ತೇಲಿಸಿದ ‘ಹಿನ್ನೀರ ಅಲೆಗಳು’

Advertisement

Udayavani is now on Telegram. Click here to join our channel and stay updated with the latest news.

Next