Advertisement
ಸೆ.24ರಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗ ಮತ್ತು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವತಿಯಿಂದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಖಗೋಳಶಾಸ್ತ್ರ ಮತ್ತು ಗ್ರಹಣ ಕುರಿತಾಗಿ ಜಿಲ್ಲೆಯ ಶಿಕ್ಷಕರಿಗಾಗಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಜಗತ್ತು ಹೀಗೆಯೇ ಇದೆ. ಗ್ರಹಣ ಸೇರಿದಂತೆ ಆಕಾಶ ಕಾಯದಲ್ಲಿ ಇದೇ ರೀತಿ ನಡೆಯುತ್ತದೆ ಎಂದು ಸಾವಿರಾರು ವರ್ಷಗಳ ಹಿಂದೆ ಋಷಿ ಮುನಿಗಳು ತಮ್ಮ ಒಳಗಣ್ಣಿನ ಸಾಮರ್ಥ್ಯದಿಂದ ಕರಾರುವಕ್ಕಾಗಿ ತಿಳಿಸಿದ್ದರು. ಅದನ್ನೇ ಅನುಸರಿಸಿಕೊಂಡು ಬರಲಾಗಿದೆ. ಈಗಿನ ವಿಜ್ಞಾನಿಗಳು ಕೇವಲ ಸೈಂಟಿಸ್ಟ್‌ಗಳು. ಆದರೆ ಋಷಿಮುನಿಗಳು ಸೈಂಟ್(ಸಂತರು) ಮತ್ತು ಸೈಂಟಿಸ್ಟ್‌ಗಳು (ವಿಜ್ಞಾನಿಗಳು) ಆಗಿದ್ದರು ಎಂದು ಅದಮಾರು ಶ್ರೀಗಳು ಹೇಳಿದರು. ಪೂರ್ಣವಾಗಿ ನಂಬಿ
ವಿಜ್ಞಾನಿಗಳಿಗೆ ತಮ್ಮ ಪ್ರಯತ್ನದ ಹೊರತಾಗಿಯೂ ಕೈಚೆಲ್ಲುವ ಹಂತಕ್ಕೆ ಬಂದಾಗ ವೇದಾಂತ, ಭಗವಂತನ ನೆನಪಾಗುತ್ತದೆ. ಸಾಧನೆಯ ಹಿಂದೆ ವಿಜ್ಞಾನಿಗಳಿಗೆ ಭಗವಂತನ ಆಶೀರ್ವಾದವೂ ಇರುತ್ತದೆ. ಆದರೆ ವಿಜ್ಞಾನಿಗಳು ಋಷಿಮುನಿಗಳ ಸಾಮರ್ಥ್ಯ, ಭಗವಂತನನ್ನು ಅರ್ಧ ನಂಬುತ್ತಾರೆಯೇ ಹೊರತು ಪೂರ್ಣವಾಗಿ ನಂಬುವುದಿಲ್ಲ. ಒಂದೋ ಅವರು ಪೂರ್ಣವಾಗಿ ನಂಬಬೇಕು. ಇಲ್ಲವಾದರೆ ಪೂರ್ಣವಾಗಿ ಬಿಟ್ಟುಬಿಡಬೇಕು ಎಂದು ಶ್ರೀಗಳು ಹೇಳಿದರು.
Related Articles
ಕಾಲೇಜು ಪ್ರಾಂಶುಪಾಲ ಡಾ| ರಾಘವೇಂದ್ರ ಎ. ಅಧ್ಯಕ್ಷತೆ ವಹಿಸಿದ್ದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಸಿ. ಆಚಾರ್ಯ ಸ್ವಾಗತಿಸಿದರು.
Advertisement
ಸಂಯೋಜಕ ಅತುಲ್ ಭಟ್ ವಂದಿಸಿದರು. ವಿದ್ಯಾರ್ಥಿನಿ ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು. ಗ್ರಹಣಗಳ ಮಾಹಿತಿಯ ಕುರಿತು ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ಕ್ಯಾಲೆಂಡರ್‌ನ್ನು ಶ್ರೀಗಳು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಗ್ರಹಣ ವೀಕ್ಷಣೆಗೆ 100 ರೂ. ಬೆಲೆಯ ಉಪಕರಣ-ಆಕರ್ಷಣೆಸೂರ್ಯಗ್ರಹಣವನ್ನು ವೀಕ್ಷಿಸಲು ಸಾಲಿಗ್ರಾಮದ ವೆಂಕಟರಮಣ ಉಪಾಧ್ಯ ಅವರು ತಯಾರಿಸಿರುವ ಪಿನ್‌ಹೋಲ್ ಅಪಾರಟಸ್ ಎಂಬ ಸರಳ ಉಪಕರಣ ಶಿಕ್ಷಕರನ್ನು ಆಕರ್ಷಿಸಿತು. ಇದರ ಬೆಲೆ 100 ರೂ. “ಹಳ್ಳಿ ಹಳ್ಳಿಗಳ ಮಕ್ಕಳು ಕೂಡ ಸೂರ್ಯಗ್ರಹಣವನ್ನು ಸುಲಭವಾಗಿ, ಅಪಾಯರಹಿತವಾಗಿ ವೀಕ್ಷಿಸಬೇಕು ಎಂಬ ಉದ್ದೇಶದಿಂದ 275 ಉಪಕರಣಗಳನ್ನು ಸಂಗ್ರಹಿಸಿಟ್ಟು ಅದನ್ನು ರಾಜ್ಯದ ಸುಮಾರು 1,000 ಶಾಲೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಈ ಉಪಕರಣದಿಂದ ಗ್ರಹಣದ ಪ್ರತಿಬಿಂಬಿವನ್ನು ಗೋಡೆಗೆ ಹಾಯಿಸಿ ಸ್ಪಷ್ಟವಾಗಿ ಗ್ರಹಣ ವೀಕ್ಷಿಸಬಹುದು. ಅಲ್ಲದೆ ಸೌರಕಲೆಗಳ ಅಧ್ಯಯನಕ್ಕೂ ಈ ಉಪಕರಣ ಉಪಯುಕ್ತವಾಗಿದೆ. ಡಿ.26ರಂದು ನಡೆಯುವ ಸೂರ್ಯಗ್ರಹಣವನ್ನು ವೀಕ್ಷಿಸಲು ಅನುವಾಗವಂತೆ ಇದನ್ನು ವಿತರಿಸಲಾಗುತ್ತಿದೆ’ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸ್ಥಾಪಕ ಸಂಯೋಜಕ ಡಾ| ಎ.ಪಿ.ಭಟ್ ವಿವರಿಸಿದರು. ಪಿನ್‌ಹೋಲ್ ಉಪಕರಣದ ಜತೆಗೆ ಪಿಪಿಸಿ ವಿದ್ಯಾರ್ಥಿಗಳೇ ಚೆಂಡಿನ ಮಾದರಿಯಲ್ಲಿ ತಯಾರಿಸಿದ ಉಪಕರಣ ಕೂಡ ಶಿಕ್ಷಕರನ್ನು ಆಕರ್ಷಿಸಿತು.