Advertisement

ಗ್ರಾಪಂ ಮಟ್ಟದಲ್ಲಿ ಮಾದರಿ ಶಾಲೆ ಆರಂಭ : ನಾಗೇಶ್

12:36 PM Oct 29, 2021 | Team Udayavani |

ದಾವಣಗೆರೆ: ಪ್ರತಿ ಗ್ರಾಮ ಪಂಚಾಯತಿಮಟ್ಟದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಮಾದರಿ ಶಾಲೆಗಳ ಪ್ರಾರಂಭಕ್ಕೆಚಿಂತನೆ ನಡೆದಿದೆ ಎಂದು ಪ್ರಾಥಮಿಕಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವಬಿ.ಸಿ. ನಾಗೇಶ್‌ ತಿಳಿಸಿದರು.

Advertisement

ಚನ್ನಗಿರಿತಾಲೂಕು ಬೆಳಲಗೆರೆ ಗ್ರಾಮದಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಆವರಣದಲ್ಲಿ ಶತಮಾನೋತ್ಸವ ಶಾಲಾಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದಅವರು, ಪ್ರತಿ ಗ್ರಾ.ಪಂಚಾಯತ್‌ಮಟ್ಟದಲ್ಲಿ 3-4 ಗ್ರಾಮಗಳಿಗೆ ಅನುಕೂಲವಾಗುವಂತೆ ಒಂದೆಡೆಕರ್ನಾಟಕ ಪಬ್ಲಿಕ್‌ ಶಾಲೆ ಮಾದರಿಯಲ್ಲಿ ಪೂರ್ಣ ಮಟ್ಟದ ಶಾಲೆಯನ್ನುಪ್ರಾರಂಭಿಸಲು ಚಿಂತನೆ ನಡೆದಿದೆ.

ಎರಡು ಕಿಮೀಗೂ ಹೆಚ್ಚು ದೂರವಿದ್ದರೆ ಅಂತಹ ಕಡೆಗಳಲ್ಲಿ ಮಕ್ಕಳಿಗೆ ಸಾರಿಗೆಬಸ್‌ ವ್ಯವಸ್ಥೆ ಕಲ್ಪಿಸಲು ಯೋಜನೆರೂಪಿಸಲಾಗುತ್ತಿದೆ ಎಂದರು.

ಪ್ರತಿಶಾಲೆಯ ತರಗತಿಗಳಿಗೆ ವಿಷಯವಾರುಶಿಕ್ಷಕರನ್ನು ನೇಮಿಸಲಾಗುವುದು.ಆಯಾ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಿಸಭೆಯಲ್ಲಿ ಸರ್ವರೂ ಒಪ್ಪಿಗೆ ಸೂಚಿಸಿಪತ್ರ ನೀಡಿದರೆ ಮುಂದಿನ ಶೈಕ್ಷಣಿಕಸಾಲಿನಲ್ಲಿಯೇ ಶಾಲೆ ಪ್ರಾರಂಭಕ್ಕೆಕ್ರಮ ಕೈಗೊಳ್ಳಲಾಗುವುದು ಎಂದುತಿಳಿಸಿದರು. ರಾಜ್ಯದ 48 ಸಾವಿರಶಾಲೆಗಳ ಪೈಕಿ 29,300 ಶಾಲೆಗಳುಪರಿಪೂರ್ಣ ಉತ್ತಮ ಶಾಲೆಗಳಾಗಿವೆ.
14 ಸಾವಿರ ಶಾಲೆಗಳಲ್ಲಿ ಅಲ್ಪಸ್ವಲ್ಪಕೊರತೆಗಳಿದ್ದರೆ, ಏಳೆಂಟು ಸಾವಿರಶಾಲೆಗಳಲ್ಲಿ ಕೊರತೆಗಳು ಹೆಚ್ಚಿವೆ.ಖಾಸಗಿ ಶಾಲೆಗಳು ಕೇವಲ ಹಣಕ್ಕಾಗಿಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ.ಸರ್ಕಾರಿ ಶಾಲೆಗಳು ಕೇವಲ ಒಬ್ಬವಿದ್ಯಾರ್ಥಿ ಇದ್ದರೂ ಶಾಲೆಗಳನ್ನುನಡೆಸುತ್ತಿವೆ. ಕರ್ನಾಟಕದಲ್ಲಿ ಸುಮಾರುಮೂರು ಸಾವಿರ ಶಾಲೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದರೂ ಸಹ ಶಾಲೆಗಳನ್ನುನಡೆಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next