Advertisement

ಮಾದರಿ ಶಾಲೆಯೇ ಗುರಿ: ಪ್ರತೀ ಐವರು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ನೀಡುವ ಗುರಿ

01:42 AM Jul 20, 2022 | Team Udayavani |

ಬೆಂಗಳೂರು: ರಾಜ್ಯ ಸರಕಾರ ತನ್ನ ಮಹತ್ವಾಕಾಂಕ್ಷಿ “ಮಾದರಿ ಶಾಲೆ’ಗಳ ನಿರ್ಮಾಣಕ್ಕಾಗಿ ಈಗಿರುವ ಶಾಲೆಗಳ ಸಂಖ್ಯೆಗಳನ್ನು ಕಡಿಮೆ ಮಾಡಲು ಚಿಂತನೆ ನಡೆಸಿದೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಈ ಸುಳಿವು ನೀಡಿದ್ದಾರೆ.

Advertisement

ಬೆಂಗಳೂರು ಪ್ರಸ್‌ ಕ್ಲಬ್‌ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು ಈ ಮಾಹಿತಿ ನೀಡಿದ್ದಾರೆ. ಮಾದರಿ ಶಾಲೆ ರೂಪಿಸ ಬೇಕು ಎನ್ನುವುದು ಸರಕಾರದ ಗುರಿ. ಅದರಲ್ಲಿ ತರಗತಿಗೊಬ್ಬ ಶಿಕ್ಷಕ ಮತ್ತು ಪ್ರತೀ ವಿಭಾಗಕ್ಕೆ ಶಿಕ್ಷಕರು ಇರಬೇಕು. ತರಗತಿ ಕೊಠಡಿಗಳು ಅಚ್ಚುಕಟ್ಟಾಗಿ ಇರಬೇಕು. ಪ್ರತೀ ಮಗುವಿನ ಬಗ್ಗೆ ಗಮನಹರಿಸಬೇಕು. ಇದು ಇನ್ನೂ “ಟೇಕ್‌ ಆಫ್’ ಹಂತದಲ್ಲಿದೆ. ಇಲಾಖೆ ಹೋಬಳಿ ಮಟ್ಟದಲ್ಲಿ ಇದನ್ನು ಪರಿಚಯಿಸಲಿದೆ. ಆದರೆ ಈಗಿರುವ ಶಿಕ್ಷಕರ ಸಂಖ್ಯೆಯಲ್ಲಿ ಇದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಏಕ ಹಳ್ಳಿ ಗ್ರಾಮ ಪಂಚಾಯತ್‌ಗಳಲ್ಲಿ ಇರುವ ಹಲವು ಶಾಲೆಗಳ ಸಂಖ್ಯೆಯನ್ನು 2 ಅಥವಾ 3ಕ್ಕೆ ಇಳಿಸಲಾಗುವುದು ಎಂದಿದ್ದಾರೆ.

ಕಡಿಮೆ ಮಕ್ಕಳು ರಾಜ್ಯದಲ್ಲಿ 48 ಸಾವಿರ ಶಾಲೆಗಳಿವೆ. ಈ ಪೈಕಿ 13,800 ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. 1,800ಕ್ಕೂ ಅಧಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಕಡಿಮೆ ಇದೆ. 709 ಏಕ ಹಳ್ಳಿ ಗ್ರಾ.ಪಂ.ಗಳಿದ್ದು, ಅಲ್ಲೆಲ್ಲ ಹಲವು ಶಾಲೆಗಳಿವೆ. ಆಯಾ ಪಂಚಾಯತ್‌ಗಳ ಎಲ್ಲ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಯೇ 200 ಇರುತ್ತದೆ. ಅಂತಹ ಕಡೆ ಶಾಲೆಗಳ ಸಂಖ್ಯೆಯನ್ನು 2ರಿಂದ 3ಕ್ಕೆ ತಗ್ಗಿಸಲಾಗುವುದು ಎಂದರು.

ನಮ್ಮಲ್ಲಿ 23 ವಿದ್ಯಾರ್ಥಿಗಳಿಗೊಬ್ಬರಂತೆ ಶಿಕ್ಷಕರಿದ್ದಾರೆ. ಹತ್ತು ಮಕ್ಕಳಿರುವ ಶಾಲೆಗೆ ಒಬ್ಬ ಶಿಕ್ಷಕರನ್ನು ನೀಡುತ್ತೇವೆ. ಒಂದು ವೇಳೆ 11 ಮಕ್ಕ ಳಿ ದ್ದರೆ ಅಂತಹ ಶಾಲೆಗೆ ಇಬ್ಬರು ಶಿಕ್ಷಕರನ್ನು ನೀಡ ಲಾಗುತ್ತದೆ. ಪ್ರತೀ ಐದು ಮಕ್ಕಳಿಗೆ ಒಬ್ಬ ರಂತೆ ಶಿಕ್ಷಕರು ಇರಬೇಕು ಎಂಬುದು ಗುರಿ ಎಂದರು.

ಶಾಲೆ ಮುಚ್ಚುವುದಿಲ್ಲ
ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚು ತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾವುದೇ ಶಾಲೆಗಳನ್ನು ನಾವು ಮುಚ್ಚುವುದಿಲ್ಲ. ಮುಚ್ಚಿಸುವ ಯಾವುದೇ ನಿರ್ಣಯವನ್ನು ಸರಕಾರ ಕೈಗೊಳ್ಳುವುದಿಲ್ಲ; ಅಂತಹ ಪ್ರಸ್ತಾ ವನೆಯೂ ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿ ಸಿದರು. ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿ ಸಲ್ಲಿಸಿದ ವರದಿಯಲ್ಲಿ 27 ವಿಷಯ ಪತ್ರಿಕೆಗಳಿವೆ. ಅವುಗಳನ್ನು ಸಾರ್ವಜನಿಕರ ಅಧ್ಯಯನಕ್ಕೆ ಮುಕ್ತಗೊಳಿಸಲಾಗುವುದು. ಅಲ್ಲಿ ಬರುವ ಸಲಹೆ- ಸೂಚನೆಗಳು, ಅಭಿಪ್ರಾಯಗಳನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನ ಮಂಡಳಿ ಮತ್ತು ತರಬೇತಿ ಸಂಸ್ಥೆ(ಎನ್‌ಸಿಇಆರ್‌ಟಿ)ಗೆ ಕಳುಹಿಸಲಾಗುವುದು. ಅದು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

ಶಾಲೆಗಳ ದತ್ತು ಸಹಿತ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಅನುಕೂಲವಾಗುವಂತೆ ಪ್ರತ್ಯೇಕ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಜತೆಗೆ ಇಲಾಖೆಯ ಡ್ಯಾಶ್‌ಬೋರ್ಡ್‌ ಕೂಡ ರೂಪಿಸಲಾಗುತ್ತಿದೆ. ಇದರಲ್ಲಿ ರಾಜ್ಯದ ಎಲ್ಲ ಶಾಲೆಗಳ ಮಾಹಿತಿ ಲಭ್ಯ ಇರಲಿದೆ ಎಂದರು.

ಪ್ರತೀ ವರ್ಷ ಶಿಕ್ಷಕರ ನೇಮಕ
ಇನ್ನು ಮುಂದೆ ಶಿಕ್ಷಕರ ನೇಮಕಾತಿ ಪ್ರತೀ ವರ್ಷ ನಡೆಯಲಿದೆ. ಇದರೊಂದಿಗೆ ಭವಿಷ್ಯದಲ್ಲಿ ಶಿಕ್ಷಕರ ಕೊರತೆ ಶಾಶ್ವತವಾಗಿ ನೀಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

ಪ್ರಸ್ತುತ 15 ಸಾವಿರ ಶಿಕ್ಷಕರ ನೇಮಕಕ್ಕೆ ಸರಕಾರ ನಿರ್ಧರಿಸಿದ್ದು, ಪ್ರಕ್ರಿಯೆ ಆರಂಭಿಸಲಾಗುವುದು. ಒಂದು ವೇಳೆ ಈ ಪೈಕಿ ಕೇವಲ 10 ಸಾವಿರ ಶಿಕ್ಷಕರ ನೇಮಕಾತಿಯಾದರೆ, ಪುನಃ ಜನವರಿ ಅಥವಾ ಫೆಬ್ರವರಿಯಲ್ಲಿ ಉಳಿದ ಐದು ಸಾವಿರ ಶಿಕ್ಷಕರ ನೇಮಕಕ್ಕೆ ಮತ್ತೆ ಸಿಇಟಿ ನಡೆಸಲಾಗುವುದು ಎಂದ ಅವರು, ಇದರ ಜತೆಗೆ ಪ್ರತೀ ವರ್ಷ ಅಗತ್ಯವಿರುವ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಪ್ರತೀ ವರ್ಷ ನೂರಾರು ಶಿಕ್ಷಕರು ನಿವೃತ್ತ ರಾಗುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಶಿಕ್ಷಕರಿಗೆ ಬೇಡಿಕೆ ಹೆಚ್ಚುತ್ತದೆ. ಅದಕ್ಕೆ ತಕ್ಕಂತೆ ನೇಮಕ ಮಾಡಿಕೊಳ್ಳಲಾಗುವುದು. ಅಲ್ಲದೆ ಇದಕ್ಕಾಗಿ ಪ್ರತೀ ಬಾರಿ ಹಣಕಾಸು ಇಲಾಖೆಯ ಅನುಮತಿ ಪಡೆಯುವ ಜಂಜಾಟ ದಿಂದಲೂ ಮುಕ್ತಿ ಪಡೆಯಲು ಉದ್ದೇಶಿಸಲಾಗಿದೆ. ಈ ಸಂಬಂಧ ಗಂಭೀರ ಚಿಂತನೆ ನಡೆದಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next