Advertisement

ಮಾದರಿ ಕೇಂದ್ರವಾದ ಎಸ್‌ಎಲ್‌ಆರ್‌ಎಂ  ಘಟಕ

01:30 AM Jan 17, 2019 | Team Udayavani |

ಕೊಲ್ಲೂರು: ರಾಜ್ಯದಲ್ಲೇ ಪ್ರಥಮ ಬಾರಿಗೆ ಪ್ರಾಯೋಗಿಕ ಯೋಜನೆಯಾಗಿ ವಂಡ್ಸೆ ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನಗೊಂಡ ಎಸ್‌.ಎಲ್‌.ಆರ್‌.ಎಂ. ಯೋಜನೆ ಯಶಸ್ಸು ಕಂಡಿದ್ದು, ಅಧ್ಯಯನಾಸಕ್ತರನ್ನು ಸೆಳೆಯುತ್ತಿದೆ.

Advertisement

ಗ್ರಾಮದ ಪ್ರತಿ ಮನೆಯ ಕಸವನ್ನು ಸಂಗ್ರಹಿಸಿ, ಅದನ್ನು ಸಂಪನ್ಮೂಲವಾಗಿ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನಾಗಿ, ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಯೋಜನೆ ಇದಾಗಿದೆ. ತ್ಯಾಜ್ಯ ವಿಲೇವಾರಿ ತಲೆನೋವಾಗಿರುವ ದಿನಗಳಲ್ಲಿ ಕಸ ನಿವಾರಣೆ ಜತೆಗೆ ನಿರ್ವಹಣೆ, ಹತ್ತಾರು ಜನರಿಗೆ ಉದ್ಯೋಗಾವಕಾಶ ನೀಡುತ್ತಿರುವುದು ಅಧ್ಯಯನಾಸ್ತಕರ ಗಮನ ಸಳೆಯುತ್ತಿದೆ.

ಪರಿಸರ ಸ್ನೇಹಿ ವ್ಯವಸ್ಥೆ 
ಹಸಿ ಹಾಗೂ ಒಣ ಕಸವನ್ನು ಅತ್ಯಂತ ಸರಳವಾಗಿ ಪುನರ್ಬಳಕೆ ಮಾಡುವ ವಿಧಾನ,  ಪಶು ಆಹಾರಕ್ಕೆ ಯೋಗ್ಯವಾದ ಹಸಿ ಕಸವನ್ನು ಶುಚಿಗೊಳಿಸಿ ದನ ಕರುಗಳಿಗೆ ನೀಡುವುದು, ಘಟಕದ ಒಳಗಡೆ ಇರುವ ಗೋಶಾಲೆ, ಕಸವನ್ನು ತೊಳೆದ ನೀರು ಹರಿದು ಹೋಗುವಲ್ಲಿ ಯಥೇತ್ಛವಾಗಿ ಬೆಳೆಸಿದ ಬಾಳೆ ತೋಟ ಹೀಗೆ  ಪರಿಸರ ಸ್ನೇಹಿ ವ್ಯವಸ್ಥೆಗಳನ್ನು ನಾವಿಲ್ಲಿ ಕಾಣಬಹುದಾಗಿದೆ.  

ವಿದೇಶೀಯರಿಂದಲೂ ಭೇಟಿ
ಸಮೀಪದ ಕಾಲೇಜು ವಿದ್ಯಾರ್ಥಿಗಳಿಂದ ತೊಡಗಿಸಿ, ಸ್ಥಳೀಯ    ಕಾಲೇಜಿನ ವಿದ್ಯಾರ್ಥಿಗಳ ವರೆಗೆ ಇಲ್ಲಿಗೆ ಅಧ್ಯಯನಾಕಾಂಕ್ಷಿಗಳು ಆಗಮಿಸಿದ್ದಾರೆ. 

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದವರು, ಪರಿಸರ ಇಲಾಖೆ ಪ್ರಮುಖ ಅಧಿಕಾರಿಗಳು, ಕೃಷಿ ಸಚಿವ ಕೃಷ್ಣಬೈರೇಗೌಡ ಆಗಮಿಸಿ, ಇಲ್ಲಿನ ಮಾದರಿ ಅನುಸರಿಸಲು ಕರೆ ನೀಡಿದ್ದಾರೆ. 

Advertisement

ಸಚಿತ್ರ ಮಾಹಿತಿ
ಅಧ್ಯಯನಕ್ಕೆ ಬಂದವರಿಗೆ ಪಂ. ಅಧ್ಯಕ್ಷರು, ಪಿಡಿಒ, ಕಾರ್ಯದರ್ಶಿ, ಎಸ್‌.ಎಲ್‌.ಆರ್‌.ಎಂ ಮೇಲ್ವಿಚಾರಕರು ಮಾಹಿತಿ ನೀಡಲು ಸಿದ್ಧರಿರುತ್ತಾರೆ.  ಅರ್ಧ ತಾಸು ಪಂ. ಅವರಣದಲ್ಲಿ ಮಾಹಿತಿ ನೀಡಿ, ಅನಂತರ ಘಟಕವನ್ನು ತೋರಿಸಲಾಗುತ್ತದೆ. ಈ ಯೋಜನೆ ಬಗ್ಗೆ ಪಂಚಾಯತ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ  ಮಾರ್ಗದರ್ಶಿ ಕೈಪಿಡಿಯನ್ನೂ ಬರೆದಿದ್ದಾರೆ.  

ಚಿತ್ತೂರು ಗ್ರಾಮದ ಕಸವೂ ಇಲ್ಲಿಗೇ
ಬೆಳಗ್ಗೆ 7.30ರಿಂದ ಸಂಜೆ 5.30ರ ತನಕ ಎಸ್‌.ಎಲ್‌.ಆರ್‌.ಎಂ. ಘಟಕ ಕಾರ್ಯ ನಿರ್ವಹಿಸುತ್ತದೆ. 
ಜ.1ರಿಂದ ಆರಂಭಿಸಿ ಚಿತ್ತೂರು ಗ್ರಾ.ಪಂ. ವ್ಯಾಪ್ತಿಯ ಕಸವೂ ಈ ಘಟಕದಲ್ಲಿಯೇ ವಿಲೇವಾರಿಯಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next