Advertisement

ಜು.29ರಂದು ರಾಸಾಯನಿಕ ವಿಪತ್ತು ಕುರಿತು ಅಣಕು ಪ್ರದರ್ಶನ

06:29 PM Jul 28, 2022 | Team Udayavani |

ಚಿಕ್ಕಬಳ್ಳಾಪುರ: ರಾಸಾಯನಿಕ ವಿಪತ್ತು ನಿರ್ವಹಣೆಯ ಕುರಿತು ಜಿಲ್ಲೆಯಲ್ಲಿ ಜು.29ರಂದು ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಬಳಿ ಇರುವ ಯುಎಸ್‌ಕೆ, ಎಲ್‌ಪಿಜಿ ಪ್ರೈ.ಲಿ. ಆವರಣದಲ್ಲಿ ಅಣಕು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅಪರ ಜಿಲ್ಲಾ ಧಿಕಾರಿ ಎಚ್‌.ಅಮರೇಶ್‌ ತಿಳಿಸಿದರು.

Advertisement

ಆನ್‌ಲೈನ್‌ ಮೂಲಕ ಬೆಂಗಳೂರಿನಿಂದ ನಡೆದ ರಾಜ್ಯ ಮಟ್ಟದ ರಾಸಾಯನಿಕ ವಿಪತ್ತು ನಿರ್ವಹಣೆ ಕುರಿತ ವಿಡಿಯೋ ಸಂವಾದ ಸಭೆಯಲ್ಲಿ ಭಾಗವಹಿಸಿ, ರಾಜ್ಯ ಮಟ್ಟದ ಅ ಧಿಕಾರಿಗಳಿಂದ ನಿರ್ದೇಶನಗಳನ್ನು ಆಲಿಸಿ, ನಂತರ ನಗರ ಹೊರವಲಯದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿ  ಕಾರಿಗಳಿಗೆ ನಿರ್ದೇಶನ ನೀಡುತ್ತಾ ಮಾತನಾಡಿದರು.

ರಾಸಾಯನಿಕ ದುರಂತಗಳು ಜಿಲ್ಲೆಯಲ್ಲಿ ಜರುಗದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ಈ ರೀತಿಯ ಘಟನೆಗಳು ಆಕಸ್ಮಿಕವಾಗಿ ಜರುಗಿದಾಗ ಯಾವ ಇಲಾಖೆಗಳ ಪಾತ್ರ ಏನು? ಸಾರ್ವಜನಿಕರ ಪಾತ್ರ ಏನು? ಎಂಬುದನ್ನು ತಿಳಿದುಕೊಂಡರೆ, ಇಂತಹ ವಿಪತ್ತುಗಳಿಂದಾಗುವ ದೊಡ್ಡ ಅನಾಹುತಗಳನ್ನು ತಡೆಯಬಹುದಾಗಿದೆ ಎಂದು ಹೇಳಿದರು.

ಅಣಕು ಪ್ರದರ್ಶನ: ಈ ವಿಷಯಗಳನ್ನು ತಿಳಿದುಕೊಳ್ಳಲು ಜಿಲ್ಲಾಡಳಿತ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಖಾಸಗಿ ಕಾರ್ಖಾನೆಗಳ ಸಹಯೋಗದಲ್ಲಿ ರಾಸಾಯನಿಕ ವಿಪತ್ತು ನಿರ್ವಹಣೆ ಕುರಿತ ಅಣಕು ಪ್ರದರ್ಶನವನ್ನು ಏರ್ಪಡಿಸಲು ಸರ್ಕಾರ ನಿರ್ದೇಶನ ನೀಡಿದೆ. ಅದರಂತೆ ಜಿಲ್ಲೆಯಲ್ಲಿ ಜು.29ರಂದು ಬೆಳಗ್ಗೆ 9 ಗಂಟೆಗೆ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಬಳಿ ಇರುವ ಯುಎಸ್‌ಕೆ, ಎಲ್‌ ಪಿಜಿ ಪ್ರೈ. ಲಿ. ಆವರಣದಲ್ಲಿ ರಾಸಾಯನಿಕ ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಿಪತ್ತು ನಿರ್ವಹಣೆ ಕುರಿತು ತಿಳಿಸಿ: ಈ ಪ್ರದರ್ಶನದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಇಲಾಖೆಗಳ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ, ತಮ್ಮ ಪಾತ್ರಗಳನ್ನು ಅರಿತುಕೊಂಡು, ತಮ್ಮ ಅಧೀನ ಅಧಿಕಾರಿಗಳು, ಸಿಬ್ಬಂದಿಗೆ ರಾಸಾಯನಿಕ ವಿಪತ್ತು ನಿರ್ವಹಣೆಯ ಕುರಿತು ತಿಳಿಸಿಕೊಡಬೇಕು. ಜೊತೆಗೆ ಇಂತಹ ವಿಪತ್ತು ನಡೆಯದಂತೆ ಕ್ರಮವಹಿಸಬೇಕು. ಈ ರೀತಿಯ ಘಟನೆಗಳು ಆಕಸ್ಮಿಕವಾಗಿ ಸಂಭವಿಸಿದರೆ ಅಂತಹ ಸಂದರ್ಭಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನಿಗಾವಹಿಸಬೇಕು ಎಂದು ಹೇಳಿದರು.

Advertisement

ಈ ವೇಳೆ ಇಂಡಸ್ಟ್ರಿಯಲ್‌ ಸೇಫ್ಟಿ ಆ್ಯಂಡ್‌ ಹೆಲ್ತ್‌ (ಫ್ಯಾಕ್ಟ್ರಿಸ್‌ ಅಂಡ್‌ ಬಾಯ್ಲರ್ಸ್‌) ಇಲಾಖೆಯ ಉಪನಿರ್ದೇಶಕ ಸೋಮಶೇಖರ್‌ ಅವರು ಅಣಕು ಪ್ರದರ್ಶನ ಆಯೋಜಿಸುವ ಸಂಬಂಧ ಕೈಗೊಳ್ಳ ಬೇಕಾದ ಮುನ್ನೆಚ್ಚರಿಕಾ ವಿಧಾನಗಳ (ಪಿಪಿಟಿ ಪ್ರಸಂಟೇಷನ್‌ ಮೂಲಕ )ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿಕೊಟ್ಟರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್‌ ಕುಮಾರ್‌, ಡಿ.ವೈ.ಎಸ್‌.ಪಿ ವಾಸುದೇವ್‌, ಶಿಡ್ಲಘಟ್ಟ ತಾಲೂಕಿನ ತಹಶೀಲ್ದಾರ್‌ ರಾಜೀವ್‌, ಜಿಲ್ಲಾ ಪರಿಸರ ಅಧಿಕಾರಿ ಸಿದ್ದೇಶ್ವರಪ್ಪ ಸೇರಿ ವಿವಿಧ ಇಲಾಖೆ ಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next