Advertisement

ರಾಜ್ಯದ ಮೊದಲ ಕೋವಿಡ್ ಸಂಚಾರಿ ಲಸಿಕಾ ಸಾರಿಗೆ ಬಸ್ ಗೆ ಚಾಲನೆ

07:05 PM Jun 16, 2021 | Team Udayavani |

ಕಲಬುರಗಿ: ಗ್ರಾಮೀಣ ಭಾಗದ ಜನರಿಗೆ ಕೋವಿಡ್ ಲಸಿಕೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಕೋರಿಕೆ ಮೇರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಿದ್ಧಪಡಿಸಿದ ರಾಜ್ಯದಲ್ಲಿಯೇ ಪ್ರಪ್ರಥಮ ಕೋವಿಡ್ ಸಂಚಾರಿ ಲಸಿಕಾ ಬಸ್‌ಗಳಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕರಾಗಿರುವ ರಾಜಕುಮಾರ ಪಾಟೀಲ್ ತೇಲ್ಕೂರ ಚಾಲನೆ ನೀಡಿದರು.

Advertisement

ಬುಧವಾರ ಜಿಲ್ಲಾಧಿಕಾರಿ ಆವರಣದಲ್ಲಿ ಹಳ್ಳಿ ಸಂಚರಿಸಿ ಜನರಿಗೆ ಕೊವಿಡ್- 19 ಲಸಿಕೆ ಹಾಕುವ ವೈದ್ಯಕೀಯ ಮಾದರಿಯಲ್ಲಿ ಸಿದ್ದಗೊಂಡ ಸಂಚಾರಿ ಲಸಿಕಾ ಬಸ್ ಗಳೆರಡಕ್ಕೆ ಹಸಿರು ನಿಶಾನೆ ತೋರಿಸಿ ಕೊವಿಡ್ 19 ಲಸಿಕಾ ಬಸ್ ವಾಹನಗಳ ಅಭಿಯಾನಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗ ಹಾಗೂ ತಾಂಡಾಗಳಲ್ಲಿ ವಾಸಿಸುವ ಜನರಿಗಾಗಿಯೇ ಈ ಬಸ್ ಗಳನ್ನು ಸಿದ್ದಪಡಿಸಲಾಗಿದೆ. ಇದು ರಾಜ್ಯದಲ್ಲಿಯೆ ಪ್ರಥಮ ಮಾದರಿ ಕಾರ್ಯವಾಗಿದೆ. ಸಂಚಾರಿ ವಾಹನವು ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕಲಿದೆ. ಜನರು ಸದುಪಯೋಗ ಪಡೆದು ಕೊರೊನಾ ಹೊಡೆದೊಡಿಸಬೇಕೆಂದರು.

ಜಿಲ್ಲಾಡಳಿತದ ಹಾಗೂ ಅರೋಗ್ಯ ಇಲಾಖೆಯ ಕೋರಿಕೆಯಂತೆ ಈಗಾಗಲೇ 2 ಬಸ್ ಗಳನ್ನು ತಕ್ಷಣ ತಯಾರಿಸಲಾಗಿದೆ. ಇನ್ನು ಅಗತ್ಯ ಬಿದ್ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ಲಸಿಕಾ ವಾಹನಗಳನ್ನು ತಯಾರಿಸಲಾಗುವುದು ಎಂದರು.

ಇದನ್ನೂ ಓದಿ :ಒಡಿಶಾದಲ್ಲಿ ಜುಲೈ 1ರವರೆಗೆ ಲಾಕ್ ಡೌನ್ ವಿಸ್ತರಣೆ, ವಾರಾಂತ್ಯದ ಲಾಕ್ ಡೌನ್ ಮುಂದುವರಿಕೆ

Advertisement

ಕೋವಿಡ್ ಸಂಚಾರಿ ಲಸಿಕಾ ವಾಹನವು ಒಟ್ಟು ಮೂರು ವಿಭಾಗಗಳನ್ನು ಹೊಂದಿದ್ದು, ಮೊದಲನೇ ವಿಭಾಗದಲ್ಲಿ ನೋಂದಣಿ ಪ್ರಕ್ರಿಯೆ ನಡೆಯಲ್ಲಿದೆ. ಎರಡನೇ ವಿಭಾಗದಲ್ಲಿ ಲಸಿಕಾಕರಣ ನೀಡಲಾಗುವುದು ಹಾಗೂ ಕೊನೆಯ ವಿಭಾಗದಲ್ಲಿ ಲಸಿಕೆ ಪಡೆದ ನಂತರ ವಿಶ್ರಾಂತಿಗೆ ವ್ಯವಸ್ಥೆ ಮಾಡಿದೆ. ಕುಡಿಯುವ ನೀರು ಸೇರಿದಂತೆ ಇತರ ವ್ಯವಸ್ಥೆ ಬಸ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ರಾಜಕುನಾರ ಪಾಟೀಲ ತೆಲ್ಕೂರ ಬಸ್‌ ವಿನ್ಯಾಸದ ಕುರಿತು ವಿವರಿಸಿದರು.

ಲಸಿಕೆ ಭಯ ಹಾಗೂ ಲಸಿಕೆ ಹಾಕುವ ಕೇಂದ್ರ ದೂರ ಇರುವ ಕಾರಣದಿಂದ ಹೆಚ್ಚಿನ ಜನರು ಲಸಿಕೆ ಹಾಕಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಿರಲಿಲ್ಲ. ಆದರೆ ಈಗ ಜಾಗೃತಿ ಯಾಗಿದ್ದರಿಂದ ಜನರು ನಿರೀಕ್ಷೆ ಮೀರಿ ಲಸಿಕೆ ಆಗಮಿಸುತ್ತಿದ್ದು, ಗ್ರಾಮೀಣ ಭಾಗದ ಜನರಿಗೆ ಇದು ಹೆಚ್ಚಿನ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ವಿ.ವಿ.‌ಜೋತ್ಸ್ನಾ ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಂ.ವೈ ಪಾಟೀಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮಾರಾವ್, ಮುಖ್ಯ ಸಂಚಾರ ವ್ಯವಸ್ಥಾಪಕ ಡಿ. ಕೊಟ್ರಪ್ಪ, ಮುಖ್ಯ ತಾಂತ್ರಿಕ ಶಿಲ್ಪಿ ಗಜೇಂದ್ರಕುಮಾರ, ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಕುಮಾರ್, ವಿಭಾಗೀಯ ತಾಂತ್ರಿಕ ಶಿಲ್ಪಿ ನಾಗರಾಜ ಹಾಗೂ ಈರಣ್ಣ ದುಧನಿ ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next