Advertisement

ಬೈಂದೂರು ಕ್ಷೇತ್ರ: 24 ಟವರ್‌ ಮಂಜೂರು

11:06 PM Jan 07, 2023 | Team Udayavani |

ಕುಂದಾಪುರ: ಅತೀ ಹೆಚ್ಚು ನೆಟ್‌ವರ್ಕ್‌ ಸಮಸ್ಯೆಯಿಂದ ತೊಂದರೆ ಅನು ಭವಿಸುತ್ತಿರುವ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಬಾರಿ 5 ಸೇರಿದಂತೆ ಹೊಸದಾಗಿ 19 ಒಟ್ಟು 24 ಬಿಎಸ್‌ಎನ್‌ಎಲ್‌ ಟವರ್‌ಗಳು ಮಂಜೂರಾಗಿವೆ. ಗ್ರಾಮೀಣ ಭಾಗಗಳ, ಕಾಡಂಚಿನ ಹತ್ತಾರು ಊರುಗಳ ನೆಟ್‌ವರ್ಕ್‌ ವಂಚಿತ ಜನರಿಗೆ ಇದು ಸಿಹಿ ಸುದ್ದಿಯಾಗಿದೆ.

Advertisement

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನೆಟ್‌ವರ್ಕ್‌ ಸಮಸ್ಯೆ ಗಂಭೀರವಾಗಿದ್ದು, ಕನಿಷ್ಠ ಕರೆ ಮಾಡಲು ಸಹ ಇಲ್ಲಿನ ಕೆಲವು ಊರುಗಳ ಜನ ಕಿ.ಮೀ.ಗಟ್ಟಲೆ ಕ್ರಮಿಸಬೇಕಾದ ಸ್ಥಿತಿಯಿದೆ. ಇತ್ತೀಚಿನ ದಿನಗಳಲ್ಲಿ ನೆಟ್‌ವರ್ಕ್‌ ಸಹ ಪ್ರಮುಖ ಅಗತ್ಯತೆಗಳಲ್ಲಿ ಒಂದಾಗಿರುವುದರಿಂದ ಇದನ್ನು ಮನಗಂಡು ಸಂಸದ ಬಿ.ವೈ. ರಾಘವೇಂದ್ರ ಅವರು, ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟರ ಮನವಿಯಂತೆ ಕೇಂದ್ರ ಸರಕಾರದಿಂದ ಒಟ್ಟು 24 ಟವರ್‌ ಮಂಜೂರು ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಲ್ಲಿಗೆಲ್ಲ ಟವರ್‌ ?
ಬೈಂದೂರು ಕ್ಷೇತ್ರದ ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮದ ಕಲ್ಸಂಕ, ಕಬ್ಬಿನಾಲೆ, ಕೊಲ್ಲೂರು ಗ್ರಾಮದ ದಳಿ, ಜಡ್ಕಲ್‌ ಗ್ರಾಮದ ಬಸ್ರಿàಬೇರು, ಗೋಳಿಹೊಳೆ ಗ್ರಾಮದ ಚುಚ್ಚಿ, ಮೂಡಣಗದ್ದೆ, ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ಊರಬೈಲು, ನಂದೊÅಳ್ಳಿ, ಮಚ್ಚಟ್ಟು ಗ್ರಾಮದ ಹಂಚಿನಕಟ್ಟೆ, ಹೊಸೂರು ಗ್ರಾಮದ ಮರದಕಲ್ಲು, ಸಿದ್ದಾಪುರ ಗ್ರಾಮದ ಅರಬೈಲು-ಕೊಳಕೆಬೈಲು, ಸೋಣಿ- ಮಾನಂಜೆ, ಹೊಸಂಗಡಿ ಗ್ರಾಮದ ಬೆಚ್ಚಳ್ಳಿ, ಹೆಗ್ಗೊಡ್ಲು, ತೆಂಕೂರು, ಉಳ್ಳೂರು-74 ಗ್ರಾಮದ ಅಂಸಾಡಿ, ಕಮಲಶಿಲೆ ಗ್ರಾಮದ ಯಳಬೇರು, ಅರಗೋಡಿನಲ್ಲಿ ಟವರ್‌ ನಿರ್ಮಾಣವಾಗಲಿದೆ. ಇದರೊಂದಿಗೆ ಈ ಹಿಂದೆ ಮಂಜೂರಾಗಿರುವ ಯಡ್ತರೆ ಗ್ರಾಮದ ನಾಗರಮಕ್ಕಿ, ಹಳ್ಳಿಹೊಳೆ ಗ್ರಾಮದ ಕುಂದಬೈಲು- ಇರಿಗೆ, ಕಾಲೊ¤àಡು ಗ್ರಾಮದ ಬೊಳಂಬಳ್ಳಿ, ಹೊಸೂರು ಗ್ರಾಮದ ಕುಕ್ಕಡ, ಬೈಂದೂರು (ಪ.ಪಂ.) ಗ್ರಾಮದ ಗಂಗನಾಡಿನಲ್ಲಿ ಟವರ್‌ ಆಗಲಿದೆ.

ಜಾಗ ಗುರುತಿಸುವಿಕೆ
ಸ್ಥಳೀಯ ಗ್ರಾ.ಪಂ. ಸಹಾಯದೊಂದಿಗೆ ಆದಷ್ಟು ಬೇಗ ಜಾಗ ಗುರುತಿಸಿ, ಸಲ್ಲಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದ್ದಾರೆ. ಈ 24 ಕಡೆಗಳ ಪೈಕಿ ಈಗಾಗಲೇ ಕೆಲವೊಂದು ಕಡೆಗಳಲ್ಲಿ ಜಾಗ ಅಂತಿಮಗೊಂಡಿದೆ. ಇನ್ನು ಕೆಲವು ಕಡೆಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಡೀಮ್ಡ್ ಫಾರೆಸ್ಟ್‌ ಮತ್ತಿತರ ಕೆಲವು ಅಡೆತಡೆಗಳಿರುವುದರಿಂದ ವಿಳಂಬವಾಗುತ್ತಿದೆ. ಜಾಗದ ಪ್ರಕ್ರಿಯೆ ಅಂತಿಮಗೊಂಡ ಬಳಿಕ ಟವರ್‌ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಗಲಿದೆ.

ನೆಟ್‌ವರ್ಕ್‌ ಸಮಸ್ಯೆಗೆ ಮುಕ್ತಿ
ಹೊಸ ಟವರ್‌ ಆಗುತ್ತಿರುವುದರಿಂದ ಗ್ರಾಮೀಣ ಭಾಗಗಳನ್ನೇ ಹೊಂದಿರುವ ಬೈಂದೂರು ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಇಲ್ಲಿನ ಜನರು ತುರ್ತು ಅಗತ್ಯಕ್ಕಾಗಿ ಕರೆ ಮಾಡಲು, ಯಾರಿಗಾದರೂ ಅನಾರೋಗ್ಯ ಉಂಟಾದಾಗ ವಾಹನ ಕರೆಸಲು, ಪಡಿತರಕ್ಕಾಗಿ ಥಂಬ್‌ ಕೊಡಲು ನೆಟ್‌ವರ್ಕ್‌ ಇಲ್ಲದೆ ಗಂಟೆಗಟ್ಟಲೆ ಕಾಯುವ ತಾಪತ್ರಯ ತಪ್ಪಲಿದೆ. ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ, ವರ್ಕ್‌ಫ್ರಂ ಹೋಮ್‌ನವರಿಗೂ ಅನುಕೂಲವಾಗಲಿದೆ.

Advertisement

ಆದಷ್ಟು ಬೇಗ ಆರಂಭ
ಬೈಂದೂರು ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ, ಪಡಿತರ ಥಂಬ್‌ಗಳಿಗೆಲ್ಲ ಜನ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು, ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದೆ. ಈಗ ಒಟ್ಟು 24 ಟವರ್‌ ಮಂಜೂರಾಗಿದೆ. ಇನ್ನು ಕೆಲವೊಂದು ಕಡೆಗಳಿಗೆ ಬೇಡಿಕೆಯಿದ್ದು, ಮುಂದಿನ ದಿನಗಳಲ್ಲಿ ಅಲ್ಲಿಗೂ ಪ್ರಯತ್ನಿಸಲಾಗುವುದು. ಜಾಗ ಗುರುತಿಸುವಿಕೆ ಪ್ರಕ್ರಿಯೆ ಮುಗಿದ ತತ್‌ಕ್ಷಣ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.
-ಬಿ.ವೈ. ರಾಘವೇಂದ್ರ, ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next