ಮಂಗಳೂರು: ಸಿಟಿಬಸ್‌ನಲ್ಲಿ ಮೊಬೈಲ್‌ಫೋನ್ ಕಳವಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement
ಅಡ್ಯಾರು ಕಣ್ಣೂರಿನ ನಿವಾಸಿ, ಟಿಪ್ಪರ್ ಚಾಲಕ ಮೊಹಮ್ಮದ್ ಸರ್ಫರಾಜ್ ಕಳೆದ ಶುಕ್ರವಾರ ಸಂಜೆ 5.30ಕ್ಕೆ ಪಂಪ್‌ವೆಲ್ ಜಂಕ್ಷನ್‌ನಲ್ಲಿ ಉಳ್ಳಾಲ ಕಡೆಗೆ ಹೋಗುವ ಖಾಸಗಿ ಸಿಟಿ ಬಸ್ ಹತ್ತಿದ್ದರು. ಸ್ವಲ್ಪ ಮುಂದೆ ಹೋಗಿ ನೋಡಿದಾಗ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಇರಲಿಲ್ಲ.
ಬಸ್ ಹತ್ತುವ ವೇಳೆ ಯಾರೋ ಮೊಬೈಲ್ ಕಳವು ಮಾಡಿದ್ದಾರೆ ಎಂದು ಸರ್ಫರಾಜ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಉಡುಪಿ: ಗಿಫ್ಟ್ ನೆಪದಲ್ಲಿ ವ್ಯಕ್ತಿಗೆ 33,998 ರೂ. ವಂಚನೆ