Advertisement

ಈ ಹಳ್ಳಿಯಲ್ಲಿ ಒಂದೂವರೆ ಗಂಟೆ ಮೊಬೈಲ್‌ಗ‌ಳು ಸ್ವಿಚ್‌ಆಫ್!

12:21 PM Sep 26, 2022 | Team Udayavani |

ನವದೆಹಲಿ: ಇಡೀ ಜಗತ್ತನ್ನು ಈಗ ಅಂತರ್ಜಾಲ ಆವರಿಸಿಕೊಂಡಿದೆ. ಮಕ್ಕಳು, ಹಿರಿಯರೆನ್ನದೇ ಎಲ್ಲರೂ ಸ್ಮಾರ್ಟ್‌ ಫೋನ್‌, ಟ್ಯಾಬ್‌, ಲ್ಯಾಪ್‌ಟಾಪ್‌ ಗಳಿಗೆ ಅಂಟಿಕೊಂಡಿದ್ದಾರೆ.

Advertisement

ಅದೊಂದು ಬಿಡಿಸಿಕೊಳ್ಳಲಾಗದ ವ್ಯಸನವೇ ಆಗಿದೆ. ಇಂತಹ ಹೊತ್ತಿನಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ದಿನಕ್ಕೆ ಕಡ್ಡಾಯವಾಗಿ 1.30 ಗಂಟೆ ಈ ಎಲ್ಲ ಸಾಧನಗಳಿಂದ ಸಂಪೂರ್ಣ ದೂರವಿರಲಾಗುತ್ತದೆ!

ಇದಕ್ಕೆ ಕಾರಣ ಅಲ್ಲಿನ ಮಕ್ಕಳು ಮೊಬೈಲ್‌ಗ‌ಳಿಗೆ ಅಂಟಿಕೊಂಡಿರುವುದು, ಇದು ಶಿಕ್ಷಕರಿಗೆ ತಲೆಬಿಸಿಯಾಗಿ ಪರಿಣಮಿಸಿತು. ಗ್ರಾಮದ ಮುಖ್ಯಸ್ಥ ಇದಕ್ಕಾಗಿ ಒಂದು ದಾರಿ ಕಂಡುಹಿಡಿದರು.

ರಾತ್ರಿ 7ಕ್ಕೆ ಸರಿಯಾಗಿ ಸೈರನ್‌ ಬಾರಿಸಲಾಗುತ್ತದೆ. ಆಗ ಎಲ್ಲ ಮನೆಗಳಲ್ಲೂ ಈ ಸಾಧನಗಳು ಸ್ವಿಚ್‌ ಆಫ್ ಮಾಡಬೇಕೆಂದು ಸೂಚಿಸಿದರು. ಇದನ್ನು ಪರಸ್ಪರ ಮಾತುಕತೆ ನಡೆಸಲು, ಓದಲು ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಅಲ್ಲಿನ ಸಂಬಂಧಗಳೂ ಸುಧಾರಿಸಲು ಆರಂಭವಾಗಿದೆಯಂತೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next