Advertisement

ಏಕರೂಪ ಚಾರ್ಜಿಂಗ್‌: ಸರಕಾರದ ಪ್ರಯತ್ನ

01:16 PM Aug 19, 2022 | Team Udayavani |

ಹೊಸದಿಲ್ಲಿ: ಮೊಬೈಲ್‌ ಫೋನ್‌ಗಳ ಸಹಿತ ವಿವಿಧ ಬಗೆಯ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳಿಗೆ ಏಕರೂಪದ ಚಾರ್ಜಿಂಗ್‌ ದರ್ಜೆಯನ್ನು ಅನುಷ್ಠಾನಗೊಳಿಸುವ ದೃಢ ನಿಲುವನ್ನು ಕೇಂದ್ರ ಸರಕಾರ ತಳೆದಿದೆ. ಆದರೆ ಉದ್ಯಮ ಕ್ಷೇತ್ರದ ಪಾಲುದಾರರ ಜತೆಗೆ ವಿಸ್ತೃತ ಸಮಾಲೋಚನೆ ನಡೆಸಿ ಇದನ್ನು ಕಾರ್ಯರೂಪಕ್ಕೆ ತರಬೇಕಿರುವುದರಿಂದ ಇದಕ್ಕೆ ಸಮಯ ಮಿತಿಯನ್ನು ನಿಗದಿಪಡಿಸಿಲ್ಲ.

Advertisement

ಮೊಬೈಲ್‌ಗ‌ಳು, ಲ್ಯಾಪ್‌ಟಾಟ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ ಸ್ಪೀಕರ್‌ಗಳು, ವೈರ್‌ಲೆಸ್‌ ಇಯರ್‌ಬಡ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳ ಸಹಿತ ಎಲ್ಲ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳಿಗೆ ಏಕರೂಪ ಚಾರ್ಜಿಂಗ್‌ ವ್ಯವಸ್ಥೆ ತರುವ ಸಂಬಂಧ ಪ್ರಾಥಮಿಕ ಸಮಾಲೋಚನೆಯನ್ನು ಸರಕಾರ ಬುಧವಾರ ನಡೆಸಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯ, ಎಲೆಕ್ಟ್ರಾನಿಕ್ಸ್‌ ಉತ್ಪಾದಕರು ಮತ್ತು ಈ ಉದ್ಯಮ ಕ್ಷೇತ್ರದ ಇತರ ಭಾಗೀದಾರರು ಸಭೆಯಲ್ಲಿ ಉಪಸ್ಥಿತರಿದ್ದರು.

ಡೆಲ್‌ ಮತ್ತು ಎಚ್‌ಪಿಯಂತಹ ಐಟಿ ಹಾರ್ಡ್‌ವೇರ್‌ ಉತ್ಪಾದಕ ಕಂಪೆನಿಗಳು ಈ ಪ್ರಸ್ತಾವವನ್ನು ವಿರೋಧಿಸಿದರೆ ಯುಎಸ್‌ಬಿ-ಸಿ ಚಾರ್ಜಿಂಗ್‌ ಪೋರ್ಟ್‌ಗಳನ್ನು ಏಕರೂಪ ದರ್ಜೆಯನ್ನಾಗಿ ಅಳವಡಿಸಿಕೊಳ್ಳುವ ಮೂಲಕ ಈಗಾಗಲೇ ಇದನ್ನು ಸಾಧಿಸಿರುವುದಾಗಿ ಬಹುತೇಕ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ಹೇಳಿವೆ ಎಂದು ಮೂಲಗಳು ತಿಳಿಸಿವೆ. ಸರಕಾರ ತಜ್ಞರ ಮೂರು ಸಮಿತಿಗಳನ್ನು ರಚಿಸಿ ಇದರ ಕಾರ್ಯಾನುಷ್ಠಾನಕ್ಕೆ ಪ್ರಯತ್ನಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next