ಈ ಸಮಯದಲ್ಲಿ ಕಚೇರಿ ಕೆಲಸಗಳಿಗೆ ಇಂಟರ್‌ನೆಟ್ ಅವಶ್ಯವಾಗಿ ಬೇಕಾಗಿದೆ. ಮನೆಯಲ್ಲಿ ಬ್ರಾಡ್ ಬ್ಯಾಂಡ್ ಇಂಟರ್‌ನೆಟ್ ಸೌಲಭ್ಯ ಇರಬಹುದು, ಪೋರ್ಟೆಬಲ್ ವೈಫೈ ಇರಬಹುದು. ಇದು ಹೈಸ್ಪೀಡ್ ಇಂಟರ್‌ನೆಟ್ ಒದಗಿಸುತ್ತದೆ. ಇನ್ನು ಮೊಬೈಲ್ ಹಾಟ್‌ಸ್ಪಾಟ್ ಅನ್ನು ಕೂಡಾ ಕಚೇರಿ ಕೆಲಸಗಳಿಗೆ ಬಳ ಸಿಕೊಳ್ಳಬಹುದು. ಇಂದು ಮೊಬೈಲ್ ಡಾಟಾ ಪ್ಲ್ಯಾನುಗಳು ಭರ್ಜರಿ ಡಾಟಾ ಒದಗಿಸುವುದರಿಂದ, ಮೊಬೈಲನ್ನೂ ಲ್ಯಾಪ್‌ಟಾಪಿಗೆ ಅಥವಾ ಡೆಸ್ಕ್ ಟಾಪಿಗೆ ಕನೆಕ್ಟ್ ಮಾಡಿ ಇಂಟರ್‌ನೆಟ್ ಸೇವೆ ಹೊಂದಬಹುದಾಗಿದೆ. ಮೊಬೈಲ್ ಹಾಟ್‌ಸ್ಪಾಟ್ ಬಳಸಿ ಕೆಲಸ ಮಾಡುವಾಗ, ಕೆಲ ಸೂಚನೆಗಳನ್ನು ಅನುಸರಿಸಿದ್ದರೆ, ಹಾಟ್‌ಸ್ಪಾಟ್ ಸವಲತ್ತಿನ ಅಧಿಕ ಉಪಯೋಗ ಪಡೆದುಕೊಳ್ಳಬಹುದು.
ಮೊಬೈಲನ್ನು ಕಂಪ್ಯೂಟರ್ ಸನಿಹವೇ ಇರಿಸಿ. ಜೊತೆಗೆ ಅವೆರಡರ ನಡುವೆ ಹೆಚ್ಚಿನ ಅಡೆತಡೆಗಳಿಲ್ಲದಂತೆ ಎಚ್ಚರಿಕೆ ವಹಿಸಿ. ಇದರಿಂದ ಕಂಪ್ಯೂಟರ್ ಸದಾ ಮೊಬೈಲ್ ಹಾಟ್‌ಸ್ಪಾಟ್ ವ್ಯಾಪ್ತಿಯೊಳಗೇ ಬರುತ್ತದೆ. ಅಲ್ಲದೆ, ಅದರ ಸಿಗ್ನಲ್‌ಗಳು ಸರಾಗವಾಗಿ ಕಂಪ್ಯೂಟರನ್ನು ತಲುಪುವುದು ಸಾಧ್ಯವಾಗುತ್ತದೆ.
ಕೆಲ ಮೊಬೈಲುಗಳಲ್ಲಿ ಹಾಟ್ ಸ್ಪಾಟ್ ರೇಂಜನ್ನು ನಿಯಂತ್ರಿಸುವ ಸವಲತ್ತನ್ನು ನೀಡಲಾಗಿರುತ್ತದೆ. ಮೊಬೈಲನ್ನು ಕಂ ಪ್ಯೂಟರ್ ಸನಿಹವೇ ಇರಿಸುವುದರಿಂದ, ಹೆಚ್ಚಿನ ವ್ಯಾಪ್ತಿಯನ್ನು ಹಾಟ್‌ಸ್ಪಾಟ್ ಇಂಟರ್‌ನೆಟ್ ಕವರ್ ಮಾಡುವ ಅಗತ್ಯ ಇರುವುದಿಲ್ಲ. ಹೀಗಾಗಿ, ಅದರ ರೇಂಜನ್ನು ಕಡಿಮೆ ಮಾಡುವುದರಿಂದಲೂ ಉತ್ತಮ ಇಂಟರ್‌ನೆಟ್ ಸಂಪರ್ಕ ಹೊಂದಬಹುದು. ಇದರ ಉಪಯೋಗವೆಂದರೆ ಮೊಬೈಲಿನ ಬ್ಯಾಟರಿ ದೀರ್ಘ ಕಾಲ ಬರುತ್ತದೆ.
ನೀವು ಯಾವ ಸ್ಥಳದಲ್ಲಿ ಮೊಬೈಲನ್ನು ಇರಿಸುತ್ತೀರೋ ಅಲ್ಲಿ ಎಲ್.ಟಿ.ಇ. ಕವರೇಜ್ ಇದೆಯಾ ಎಂಬುದನ್ನು ಚೆಕ್ ಮಾಡಿಕೊಂಡರೆ ಚೆನ್ನ. ಮೊಬೈಲ್ ಪರದೆ ಮೇಲೆ ಮೇಲ್ಗಡೆ ಸಿಗ್ನಲ್ ಸೂಚಕದ ಬಳಿ 4ಜಿ/ ಎಲ್.ಟಿ.ಇ. ಎಂಬ ಸಂಕೇತ ಕಂಡು ಬಂದರೆ ಆ ಜಾಗದಲ್ಲಿ 4ಜಿ ಕವರೇಜ್ ಇದೆ ಎಂದರ್ಥ. ಆಗ ಹೈ ಸ್ಪೀಡ್ ಇಂಟರ್‌ನೆಟ್ ಪಡೆಯಬಹುದು.
ಮೊಬೈಲಿನಲ್ಲಿ ಕೆಲ ಆ್ಯಪ್ ಗಳು ಬ್ಯಾಕ್ ಗ್ರೌಂಡ್‌ನಲ್ಲಿ ಕಾರ್ಯಾಚರಿಸುತ್ತಿರುತ್ತವೆ. ಲೊಕೇಷನ್ ಬೇಸ್ಡ್ ಆ್ಯಪ್‌ಗಳು, ಸೋಷಿಯಲ್ ಮೀಡಿಯಾ ಆ್ಯಪ್‌ಗ್ಳು, ಇಮೇಲ್ ಮುಂತಾದ ಆ್ಯಪ್‌ಗಳು ನಮಗೆ ಗೊತ್ತಿಲ್ಲದಂತೆಯೇ ಇಂಟರ್‌ನೆಟ್ ಅನ್ನು ಬಳಸುತ್ತಿರುತ್ತವೆ. ಹೀಗಾಗಿ ಆ ಆ್ಯಪ್‌ಗಳು ಕಡಿಮೆ ಇಂಟರ್‌ನೆಟ್ ಬಳಸುವಂತೆ ಸೆಟ್ಟಿಂಗ್ಸ್ ನಲ್ಲಿ ನಿಯಂತ್ರಿಸ ಬಹುದು. ಇಲ್ಲದೇ ಹೋದಲ್ಲಿ, ಆಯಾ ಬ್ಯಾಕ್ ಗ್ರೌಂಡ್ ಆ್ಯಪ್‌ಗ್ಳನ್ನು ತಾತ್ಕಾಲಿಕವಾಗಿ ಡಿಸೇಬಲ್ ಮಾಡಬಹುದು. ಇದರಿಂದ ಅವು ಬ್ಯಾಕ್‌ಗ್ರೌಂಡಿನಲ್ಲಿ ಕಾರ್ಯಾಚರಿಸುವುದಿಲ್ಲ. ಆ ಮೂಲಕ ಇಂಟರ್‌ನೆಟ್ ಸ್ಪೀಡ್ ಹೆಚ್ಚುತ್ತದೆ.