Advertisement

ಸೋಂಕು ತಡೆಗೆ ಮೊಬೈಲ್‌ ಕೋವಿಡ್ ಲ್ಯಾಬ್‌ಗ ಚಾಲನೆ

10:37 AM Aug 06, 2020 | mahesh |

ಬೆಂಗಳೂರು: ಪ್ರಯೋಗಾಲಯಗಳಲ್ಲಿ ಸೋಂಕು ಪರೀಕ್ಷೆ ತಡವಾಗುತ್ತಿರುವ ಹಿನ್ನೆಲೆ ನಾಲ್ಕು ಗಂಟೆಯಲ್ಲಿಯೇ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸುವ ಮೊಬೈಲ್‌ ಕೊರೊನಾ ಪರೀಕ್ಷಾ ಲ್ಯಾಬ್‌ ಯನ್ನು ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್ಸಿ) ಸಿದ್ಧಪಡಿಸಿದೆ.

Advertisement

ದೇಶದ ಪ್ರಪ್ರಥಮ ಮತ್ತು ಏಕೈಕ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಅನು ಮೋದಿತ ಮೊಬೈಲ್‌ ಆರ್‌ಟಿ-ಪಿಸಿಆರ್‌ ಕೊರೊನಾ ಪರೀಕ್ಷಾ ಲ್ಯಾಬ್‌ ಇದಾಗಿದೆ. ಮೊದಲ ಮೊಬೈಲ್‌ ಲ್ಯಾಬ್‌ ಅನ್ನು ಐಐಎಸ್ಸಿ ರಾಜೀವ್‌ ಗಾಂಧಿ ಆರೋಗ್ಯ ವಿವಿಗೆ ಹಸ್ತಾಂತರಿಸಿದೆ. ಬುಧವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಲ್ಯಾಬ್‌ಗ ಚಾಲನೆ ನೀಡಿದರು. ಸದ್ಯ ಬೆಂಗಳೂರು ವೈದ್ಯಕೀಯ ಕಾಲೇಜು ವ್ಯಾಪ್ತಿಯ ವಿಕ್ಟೋರಿಯಾ ಆಸ್ಪತ್ರೆ ವ್ಯಾಪ್ತಿಗೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಸುತ್ತಮುತ್ತ ಕಾರ್ಯಚಟುವಟಿಕೆ ಆರಂಭಿಸಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಏನಿದು ಮೊಬೈಲ್‌ ಲ್ಯಾಬ್‌?: ಮೊಬೈಲ್‌ ಲ್ಯಾಬ್‌ ಎಂಬುದು ಪ್ರಯೋಗಾಲಯಗಳ ಸಲಕರಣೆಗಳನ್ನು ಒಳಗೊಂಡ ಮೂರು ವಾಹನಗಳ (ವ್ಯಾನ್‌) ಯೂನಿಟ್‌ ಆಗಿದೆ. ಒಂದರಲ್ಲಿ ಶಂಕಿತ ವ್ಯಕ್ತಿ ಮಾದರಿ ಸಂಗ್ರಹ, ಎರಡನೇ ವಾಹನದಲ್ಲಿ ಬಿಎಸ್‌ ಎಲ್‌-2 ಲ್ಯಾಬ್‌ ಇದ್ದು, ಮಾದರಿಗಳ ಸಂಸ್ಕರಣೆ, ಪರೀಕ್ಷಾ ಪ್ರಕ್ರಿಯೆ ಆಗಲಿದೆ. ಮೂರನೇ ವಾಹನ  ದಲ್ಲಿ ಮಾಲಿಕ್ಯೂಲರ್‌ ಟೆಸ್ಟಿಂಗ್‌, ಮಾದರಿ ವಿಶ್ಲೇಷಣೆ, ವರದಿ ತಯಾರಿ ಕಾರ್ಯ ನಡೆಯಲಿವೆ. ಮೊದಲ ವಾಹನವು ನಗರದ ವಿವಿಧ ಪ್ರದೇಶಕ್ಕೆ ತೆರಳಿ ಮಾದರಿ ಸಂಗ್ರಹಿಸಿದರೆ, ಉಳಿದ ಎರಡು ವಾಹನ ಗಳು ಒಂದು ಸ್ಥಳದಲ್ಲೇ ನಿಂತು ಕಾರ್ಯ ಚಟುವಟಿಕೆ ನಡೆಸಲಿವೆ ಎಂದು ಐಐಎಸ್ಸಿ ಪ್ರಾಧ್ಯಾ  ಪಕರು ಮಾಹಿತಿ ನೀಡಿದರು.

ವಿಶೇಷತೆ ಏನು?
 ಒಮ್ಮೆ 100 ಮಾದರಿಗಳನ್ನು, ದಿನಕ್ಕೆ ಒಟ್ಟು 400 ಮಾದರಿಗಳ ಪರೀಕ್ಷೆ ನಡೆಸುವ ಸಾಮರ್ಥ್ಯ
 ಕೊರೊನಾ ಸೋಂಕಿನ ಜತೆಗೆ ಎಚ್‌1 ಎನ್‌ , ಎಚ್‌ಐವಿ, ಎಚ್‌ಬಿಬಿ, ಎಚ್‌ಸಿವಿ, ಟಿಬಿ ಪರೀಕ್ಷೆ ಸೌಲಭ್ಯ
 ಕಂಟೈನ್ಮೆಂಟ್‌ ಝೋನ್‌ಗಳು, ಗ್ರಾಮೀಣ ಪ್ರದೇಶಗಳಿಗೆ ತೆರಳಿ ಶೀಘ್ರ ಪರೀಕ್ಷೆ ಅವಕಾಶ

Advertisement

Udayavani is now on Telegram. Click here to join our channel and stay updated with the latest news.

Next