Advertisement

ಮೊಬೈಲ್ ಸಂಪರ್ಕ ಕಡಿತ: ಸರಿಪಡಿಸಲು ಮನವಿ

01:35 AM Jun 13, 2019 | sudhir |

ಸೋಮವಾರಪೇಟೆ: ಸಮೀಪದ ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಾರೆಕೊಪ್ಪ, ಬಸವನಳ್ಳಿ ಗ್ರಾಮಗಳಲ್ಲಿ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

Advertisement

ಗ್ರಾಮಸ್ಥರಾದ ಮಂಜು ಮಾತನಾಡಿ, ಕಳೆದ ಎಂಟು ದಿನಗಳಿಂದ ಈ ಭಾಗದಲ್ಲಿ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಟವರ್‌ನ ನಿರ್ವಹಣಾ ಕಚೇರಿಗೆ ಬೀಗ ಜಡಿಯಲಾಗಿದೆ. ಇದರಿಂದ ಈ ಭಾಗದಲ್ಲಿ ಸಾಕಷ್ಟು ತೊಂದರೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮರಬಿದ್ದು ಸಂಪರ್ಕ ಕಡಿತಗೊಂಡಿದೆ ಇನ್ನಿತರ ಉತ್ತರ ನೀಡುತ್ತಿದಾರೆ. ಐವರ್‌ ನಿರ್ವಹಣೆಯನ್ನು ಖಾಸಗಿ ಯವರಿಗೆ ವಹಿಸಲಾಗಿದೆ. ಇವರ ಸಂಬಳ ಪಾವತಿಸುತ್ತಿಲ್ಲ, ಡಿಸೆಲ್ಗೆ ಹಣ ನೀಡುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಆದುದ್ದರಿಂದ ಸಂಬಂಧಿಸಿದವರು ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಲಾಗಿದೆ.

ದೂರವಾಣಿ ಇಲಾಖೆಯ ಎಂಜಿನಿಯರ್‌ರಿಗೆ ಸೋಮವಾರ ಮನವಿ ಸಲ್ಲಿಸಿ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ವಿನಂತಿಸಿದರು.

ಮನವಿ ಸ್ವೀಕರಿಸಿದ ಬಿಎಸ್‌ಎನ್‌ಎಲ್ ಗ್ರಾಮೀಣ ವಿಭಾಗದ ಕಿರಿಯ ಎಂಜಿನಿಯರ್‌ ಶ್ರೀನಿವಾಸ್‌ ಅವರು ಅನಂತರ ಮಾತನಾಡಿ, ಈಗಾಗಲೇ ಕಾರೆಕೊಪ್ಪ ಬಸವನಳ್ಳಿ ಮೊಬೈಲ್ ಟವರ್‌ ಜಿಎಸ್‌ಟಿ ಕಂಪೆನಿಗೆ ವಹಿಸಲಾಗಿದೆ ಎಂದು ತಿಳಿಸದರು.

Advertisement

ಬಿಎಸ್‌ಎನ್‌ಎಲ್ ನಿಂದ ನಿರ್ವಹಣಗೆ ಹಣ ಪಾವತಿಯಾಗಿಲ್ಲ ಎಂದು ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ. ಹಣ ಪಾವತಿಯಾದ ತಕ್ಷಣ ಕೆಲಸ ಪ್ರಾರಂಭಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಮನವಿ ನೀಡಿದ ಸಂದರ್ಭ ಗ್ರಾಮಸ್ಥರಾದ ಕೆ.ಎನ್‌. ಶರತ್‌ಕುಮಾರ್‌ ಮಂಜುನಾಥ್‌, ಕೆ.ಎ. ಪೂವಯ್ಯ, ಕೆ.ಈ. ರಾಜು, ನವೀನ, ನಾಗೇಶ್‌, ರವಿ, ಶ್ರೀ ನಿವಾಸ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next