Advertisement

ಮೊಬೈಲ್‌ ಆಧಾರಿತ ಇ-ವಾಣಿಜ್ಯ ಅಪ್ಲಿಕೇಶನ್‌

11:47 PM Jun 19, 2019 | Team Udayavani |

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಎಂಜಿನಿಯರಿಂಗ್‌ ಕಾಲೇಜಿನ ಸಿವಿಲ್‌ ವಿಭಾಗದ ವಿದ್ಯಾರ್ಥಿಗಳು ಬಿಲ್ಡ್‌ಪಾಲ್‌ ಎನ್ನುವ ಹೊಸ ಮೊಬೈಲ್‌ ಆಧಾರಿತ ಇ-ವಾಣಿಜ್ಯ ಅಪ್ಲಿಕೇಶನ್‌ ಆವಿಷ್ಕರಿಸಿದ್ದಾರೆ.

Advertisement

ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಉಪನ್ಯಾಸಕ ಭರತ್‌ ನಿಶಾನ್‌ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಸಚಿನ್‌ ಪಟೇಲ್‌, ದಿವಿನ್‌ ಗೌಡ, ಮಂತೇಶ ಪ್ರಕಾಶ ಮತ್ತು ಮಹಾದೇವ ದೊಡ್ಮನಿ ಅವರು ಅಪ್ಲಿಕೇಶನ್‌ ತಯಾರಿಸಿದ್ದಾರೆ.
ಪ್ರಯೋಜನ ಇದು ಬಳಕೆದಾರರಿಗೆ ಉತ್ತಮ ಗುಣಮಟ್ಟದ ಕಚ್ಚಾವಸ್ತುಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ. ಗ್ರಾಹಕರಿಗೆ ವಿನ್ಯಾಸಗೊಳಿಸಲಾದ ಸರಕುಗಳನ್ನು ಮಾರಾಟ ಮಾಡುವ ಯಾವುದೇ ವ್ಯವಹಾರವನ್ನು ಪ್ರತಿನಿಧಿಸುತ್ತದೆ. ಕಚ್ಚಾವಸ್ತುಗಳನ್ನು ಪರೀಕ್ಷಿಸಿದ ಅನಂತರ ಅದರ ಫಲಿತಾಂಶಗಳ ಎಲ್ಲ ಡೇಟಾ ಬೇಸ್‌ಗಳನ್ನು ಒದಗಿಸುವ ಮೂಲಕ ಕಚ್ಚಾವಸ್ತುಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಅಪ್ಲಿಕೇಶನ್‌ನ ಮೊದಲ ಆವೃತ್ತಿಯನ್ನು ಸಮರ್ಪಿಸಲಾಗಿದೆ. ಮರಳು ಜಲ್ಲಿಕಲ್ಲು, ಮತ್ತು ಲ್ಯಾಟರೈಡ್‌ ಕಲ್ಲು ಮೊದಲ ಆವೃತ್ತಿಯಲ್ಲಿ ಬರುತ್ತದೆ. ಅನಂತರದ ಆವೃತ್ತಿಯನ್ನು ಮಾನವ ಸಹಾಯ ಮತ್ತು ಇತರ ಕ್ಷೇತ್ರಗಳಿಗೆ ನವೀಕರಿಸಲಾಗುತ್ತದೆ.

ಕಳೆದ ಬಾರಿಯ ಡಬಲ್‌ ಡೆಕ್‌ ಸ್ಲಾಬ್‌ ಪ್ರಾಜೆಕ್ಟ್ ಚೆನ್ನೈಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ 2ನೇ ಬಹುಮಾನವಾಗಿ 50 ಸಾವಿರ ರೂ. ಬಹುಮಾನವನ್ನು ಸಿವಿಲ್‌ ವಿದ್ಯಾರ್ಥಿಗಳು ಪಡೆದಿದ್ದರು.

ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಡಾ| ಕಾಮಯ್ಯ ಜಿ.ಎಸ್‌., ಸಿವಿಲ್‌ ವಿಭಾಗದ ಮುಖ್ಯಸ್ಥೆ ಶಶಿಕಲಾ, ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದಾರ್ಥ ಜೆ. ಶೆಟ್ಟಿ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next