Advertisement

ಮೊಬೈಲ್‌ ಬ್ಯಾಂಕಿಂಗ್‌ ಆ್ಯಪ್‌ ಬಿಡುಗಡೆ

02:26 PM Apr 30, 2022 | Team Udayavani |

ಬೀದರ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಮೊಬೈಲ್‌ ಬ್ಯಾಂಕಿಂಗ್‌ ಆ್ಯಪ್‌ಅನ್ನು ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಶುಕ್ರವಾರ ಬಿಡುಗಡೆ ಮಾಡಿದರು.

Advertisement

ಬ್ಯಾಂಕ್‌ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮೊಬೈಲ್‌ ಬ್ಯಾಂಕಿಂಗ್‌ ಹಾಗೂ ಇಂಟರ್ನೆಟ್‌ ಬ್ಯಾಂಕಿಂಗ್‌ ಸೇವೆಗೂ ಚಾಲನೆ ನೀಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿಸಮನಾಗಿ ಗ್ರಾಹಕರಿಗೆ ತಂತ್ರಾಂಶ ಆಧಾರಿತ ಸಕಲ ಸೇವೆಗಳನ್ನು ಕಲ್ಪಿಸುವುದೇ ಬ್ಯಾಂಕ್‌ ಗುರಿಯಾಗಿದೆ. ಇಂಟರ್ನೆಟ್‌ ಬ್ಯಾಂಕಿಂಗ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ನಿಂದ ಗ್ರಾಹಕರಿಗೆ ಇನ್ನಷ್ಟು ಅನುಕೂಲ ಆಗಲಿದೆ. ಬರುವ ದಿನಗಳಲ್ಲಿ ಯುಪಿಐ, ಐಎಂಪಿಎಸ್‌, ಬಿಬಿಪಿಎಸ್‌, ಗೂಗಲ್‌ ಪೇ, ಫೋನ್‌ ಪೇ ಮೊದಲಾದ ಸೇವೆಗಳನ್ನೂ ಒದಗಿಸಲು ಯೋಜಿಸಲಾಗಿದೆ ಎಂದು ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

ಕೋರ್‌ ಬ್ಯಾಂಕಿಂಗ್‌ ಸಿಸ್ಟಮ್‌ ಅಡಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್‌ ಈಗಾಗಲೇ ಆರ್‌ಟಿಜಿಎಸ್‌, ನೆಫ್ಟ್‌, ಮೊಬೈಲ್‌ ಬ್ಯಾಂಕಿಂಗ್‌ ವ್ಯಾನ್‌, ಎಟಿಎಂ, ಕಿಸಾನ್‌ ರುಪೆ ಡೆಬಿಟ್‌ ಕಾರ್ಡ್‌, ಎಸ್‌ಎಂಎಸ್‌ ಸೇರಿ ವಿವಿಧ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ಹೇಳಿದರು.

ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಸೇರಿದಂತೆ ಅತ್ಯಾಧುನಿಕ ಬ್ಯಾಂಕ್‌ ಸೌಲಭ್ಯಗಳ ಕುರಿತು ಬೆಂಗಳೂರಿನ ಜೇನಿತ್‌ ಸಾಫ್ಟ್‌ವೇರ್‌ ಕಂಪನಿಯ ಎಂಡಿ ನಂದಕುಮಾರ ಮಾತನಾಡಿದರು.

Advertisement

ಜಿಲ್ಲೆಯ ಆಯ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ, ಬ್ಯಾಂಕ್‌ನ ಪಿಗ್ಮಿ ಏಜೆಂಟರಿಗೆ ಪಿಗ್ಮಿ ಸಂಗ್ರಹ ಯಂತ್ರ ಹಾಗೂ ಸಹಾಯಕ ಅಭಿವೃದ್ಧಿ ಅಧಿಕಾರಿಗಳಿಗೆ ಮೊಬೈಲ್‌ ವಿತರಿಸಲಾಯಿತು.

ಬ್ಯಾಂಕ್‌ ನಿರ್ದೇಶಕರಾದ ರಾಚಪ್ಪ ಪಾಟೀಲ, ಬಸವರಾಜ ಹೆಬ್ಟಾಳೆ, ವಿಜಯಕುಮಾರ ಎಸ್‌. ಪಾಟೀಲ ಗಾದಗಿ, ಸಂಗಮೇಶ ಪಾಟೀಲ, ಪರಮೇಶ್ವರ ಮಗಟೆ, ಬಸವರಾಜ ಗೋಣೆ, ಹಣಮಂತರಾವ್‌ ಪಾಟೀಲ, ಶಿವಬಸಪ್ಪ ತಗಾರೆ, ಬೆಂಗಳೂರಿನ ಅಲಾಕ್ರೇಟಿ ನೆಟ್‌ವರ್ಕ್‌ ಪ್ರೈವೇಟ್‌ ಲಿಮಿಟೆಡ್‌ ಉಪಾಧ್ಯಕ್ಷ ಸಂದೀಪ್‌, ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಾಮರಾವ್‌, ಬ್ಯಾಂಕ್‌ ಸಿಇಒ ಮಲ್ಲಿಕಾರ್ಜುನ ಮಹಾಜನ್‌, ಪ್ರಧಾನ ವ್ಯವಸ್ಥಾಪಕರಾದ ವಿಠ್ಠಲರೆಡ್ಡಿ ಯಡಮಲ್ಲೆ, ಚನ್ನಬಸಯ್ಯ ಸ್ವಾಮಿ, ಉಪ ಪ್ರಧಾನ ವ್ಯವಸ್ಥಾಪಕರಾದ ಪಂಢರಿ ರೆಡ್ಡಿ, ಅನಿಲ ಪಾಟೀಲ, ಸದಾಶಿವ ಪಾಟೀಲ, ಬಸವರಾಜ ಕಲ್ಯಾಣ, ದೀನದಯಾಳ್‌ ಮನ್ನಳ್ಳಿ, ರಾಜಶೇಖರಯ್ಯ, ಪ್ರಮುಖರಾದ ಶಾಂತಕುಮಾರ ಮುದಾಳೆ, ನಂದಕುಮಾರ ಜೋಶಿ, ಮಾಧವರಾವ್‌ ಪಾಟೀಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next