Advertisement

ಆ್ಯಪ್‌ ರಕ್ಷಕಿ ಮೊಬೈಲಲ್ಲೇ ಇದ್ದಾನೆ ಸೂಪರ್‌ಮ್ಯಾನ್‌!

03:45 AM Apr 05, 2017 | Team Udayavani |

ಮಹಿಳಾ ಸುರಕ್ಷತೆಯ ಕುರಿತು ಕಾಳಜಿ ಮತ್ತು ಕೂಗು ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಈ ಸಂದರ್ಭದಲ್ಲಿ ತಮ್ಮ ರಕ್ಷಣೆಗಾಗಿ ಆತ್ಮರಕ್ಷಣಾ ಕಲೆಯನ್ನು ಕಲಿಯುವುದರ ಜೊತೆಗೆ ಮಹಿಳೆಯರು ಈ ಆ್ಯಂಡ್ರಾಯ್ಡ ಆ್ಯಪ್‌ಗ್ಳನ್ನು ತಮ್ಮ ಸಾರ್ಟ್‌ಫೋನುಗಳಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡರೆ ಇನ್ನೂ ಒಳ್ಳೆಯದು.

Advertisement

ಹಿಮ್ಮತ್‌
ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ದೆಹಲಿ ಪೊಲೀಸರು ರೂಪಿಸಿರುವ ಆ್ಯಪ್‌ ಇದು. ಉದ್ಯೋಗದಲ್ಲಿರುವ ಮಹಿಳೆಯರು ಕೆಲಸ ಮುಗಿಸಿ ಮರಳುವಾಗ ತಡರಾತ್ರಿಯಾಗುವುದರಿಂದ, ಅಪಾಯಕರ ಸನ್ನಿವೇಶ ಒದಗಿದ ಪಕ್ಷದಲ್ಲಿ ಆ ಕ್ಷಣದ ಆಡಿಯೊ ಮತ್ತು ವಿಡಿಯೊ ತುಣುಕು ದೆಹಲಿ ಪೊಲೀಸ್‌ ಕಂಟ್ರೋಲ್‌ ರೂಮಿಗೆ ರವಾನೆಯಾಗುವುದಲ್ಲದೆ ಆ ಮಹಿಳೆ ಇರುವ ಸ್ಥಳ ಮುಂತಾದ ಮಾಹಿತಿ ಆಕೆಯ ಹತ್ತಿರದವರಿಗೆ ಮತ್ತು ಪೊಲೀಸರಿಗೆ ಹೋಗುತ್ತದೆ. ಇಂತಹ ಅನೇಕ ಆ್ಯಪ್‌ಗ್ಳು ಪ್ಲೇ ಸ್ಟೋರಿನಲ್ಲಿ ಲಭ್ಯ ಇವೆ.

ವಿತ್‌ ಯು ಆ್ಯಪ್‌
ಒಂಟಿ ಮಹಿಳೆಯರನ್ನು ರಾತ್ರಿ ಆಕ್ರಮಣ ನಡೆಸಿದ ಪಕ್ಷದಲ್ಲಿ ಸಹಾಯಕ್ಕಾಗಿ ಮೊಬೈಲು ನಂಬರ್‌ ಡಯಲ್‌ ಮಾಡುವ ವ್ಯವಧಾನ ಯಾರಲ್ಲೂ ಇರುವುದಿಲ್ಲ. ಪಾರಾಗಲು ಅಷ್ಟು ಸಮಯವೂ ಅವರಿಗೆ ಇರುವುದಿಲ್ಲ. ಕಣ್ಮುಚ್ಚಿ ಫೋನಿನ ಪವರ್‌ ಬಟನ್‌ಅನ್ನು ಎರಡು ಸಾರಿ ಒತ್ತಿದರೆ ಅಪಾಯದ ಕರೆಗಂಟೆ ತಲುಪಬೇಕಾದವರಿಗೆ ತಲುಪುತ್ತದೆ. ಅರ್ಟಾà ಅಲ್ಲದೆ ಜಿಪಿಎಸ್‌ ಮೂಲಕ ನೀವಿರುವ ಜಾಗದ ಮಾಹಿತಿ ಪ್ರತಿ ಎರಡು ನಿಮಿಷಗಳಿಗೊಮ್ಮೆ ನಿಮ್ಮ ಆಪ್ತರಿಗೆ ತಲುಪುತ್ತದೆ.

ಸರ್ಕಲ್‌ ಆಫ್ 6
ಇದೊಂದು ತುಂಬಾ ಉಪಯುಕ್ತ ಆ್ಯಪ್‌. ನಿಮಗೆ ಅತ್ಯಂತ ಹತ್ತಿರದ ವ್ಯಕ್ತಿಗಳೊಂದಿಗೆ ನಿಮ್ಮನ್ನು ಸದಾ ಸಂಪರ್ಕದಲ್ಲಿರಿಸುತ್ತದೆ. ನಿಮಗೆ ತುರ್ತಾಗಿ ಸಲಹೆ ಮಾರ್ಗದರ್ಶನ ಬೇಕೆಂದರೂ ಈ ಆ್ಯಪ್‌ ಮೂಲಕ ಪಡೆಯಬಹುದು. ತುರ್ತು ಸಂದರ್ಭದಲ್ಲಿ ನೀವು  ಆಯ್ಕೆ ಮಾಡಿದ 6 ವ್ಯಕ್ತಿಗಳಿಗೆ ಸಂದೇಶ ತಲುಪುತ್ತದೆ.

ಲೈಫ್ 360
ಆ್ಯಪ್‌ ಕುಟುಂಬದವರೊಂದಿಗೆ ಸತತ ಸಂಪರ್ಕವನ್ನಿಟ್ಟುಕೊಳ್ಳಲು ಸಹಕಾರಿ. ಈ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡರೆ ನಿಮ್ಮ ಕುಟುಂಬದವರು ಹಾಗೂ ಗೆಳೆಯರು ನೀವಿರುವ ಜಾಗದ ಕುರಿತು ಮಾಹಿತಿಯನ್ನು ಪಡೆಯುತ್ತಿರಬಹುದು. ಈ ಆ್ಯಪ್‌ ಸಹಾಯದಿಂದ ಕಳೆದುಹೋದ ಸ್ಮಾರ್ಟ್‌ಫೋನನ್ನೂ ಪತ್ತೆ ಹಚ್ಚಬಹುದು.

Advertisement

ನಿರ್ಭಯ- ಬಿ ಫಿಯರ್‌ಲೆಸ್‌ ಆ್ಯಪ್‌
ಅಪಾಯ ಎದುರಾದಾಗ ಈ ಆ್ಯಪ್‌ ಒಂದು ಸ್ಪರ್ಶದ ಮೂಲಕ ಎಸ್ಸೆಮ್ಮೆಸ್‌ ಆಲರ್ಟ್‌ ಮತ್ತು ಕಾಲ್‌ ಕಳಿಸುತ್ತದೆ. ಪವರ್‌ ಬಟನ್‌ಅನ್ನು ಒತ್ತುವುದರ ಮೂಲಕವೂ ಪರಿಚಿತರಿಗೆ ಸಿಗ್ನಲ್‌ ಕಳಿಸಬಹುದು. 

Advertisement

Udayavani is now on Telegram. Click here to join our channel and stay updated with the latest news.

Next