Advertisement

ಮನಪಾ: ಸಾರ್ವಜನಿಕ ದೂರುಗಳಿಗೆ ಜನಹಿತ ಮೊಬೈಲ್‌ ಆ್ಯಪ್‌

10:58 AM Mar 16, 2017 | Harsha Rao |

ಮಂಗಳೂರು: ರಾಜ್ಯ ಸರಕಾರದ ನಿರ್ದೇಶನದಂತೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ತಮ್ಮ ದೂರುಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸುವ ಸಲುವಾಗಿ ಜನಹಿತ ಮೊಬೈಲ್‌ ಆ್ಯಪ್‌ (Janahitha Mobile App) ಅಭಿವೃದ್ಧಿಪಡಿಸಲಾಗಿದ್ದು, ಆ್ಯಪ್‌ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ.

Advertisement

ಸಾರ್ವಜನಿಕರು ಆನ್‌ಲೈನ್‌ನಲ್ಲಿ ದೂರುಗಳನ್ನು ದಾಖಲಿಸಲು ಮಂಗಳೂರು ಮಹಾನಗರಪಾಲಿಕೆಯ ಅಧಿಕೃತ ವೆಬ್‌ಸೈಟ್‌ www.mangalorecity.mrc.gov.in ನೋಡಬಹುದಾಗಿದೆ.

www.mrc.gov.in/janahita/LoadGrievanceForm ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದಾಗಿದೆ. ದೂರವಾಣಿ ಸಂಖ್ಯೆ: 080-23108108 (ಬೆಳಗ್ಗೆ 6ರಿಂದ ರಾತ್ರಿ 9ರ ವರೆಗೆ) ಕರೆ ಮಾಡಿ ದೂರುಗಳನ್ನು ದಾಖಲಿಸುವುದರೊಂದಿಗೆ ಅವುಗಳ ವಿಲೇವಾರಿ ಸ್ಥಿತಿಗತಿ ಮಾಹಿತಿಗಳನ್ನು ಪಡೆಯಬಹುದಾಗಿದೆ. ವಾಟ್ಸ್‌ ಆ್ಯಪ್‌ ಸಂಖ್ಯೆ: 8277777728ಕ್ಕೆ ಸಂದೇಶ ಕಳುಹಿಸಿ ದೂರು ದಾಖಲಿಸಬಹುದು.

ಪೌರ ಸುಧಾರಣಾ ಕೋಶದ ಟ್ವೀಟರ್‌:@dmakarnataka ಮೂಲಕವು ಸಹ ದೂರನ್ನು ದಾಖಲಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next