Advertisement

ಸಿಡಿಲು –ಮಿಂಚಿನ ಮುನ್ಸೂಚನೆ ನೀಡಲಿದೆ ಮೊಬೈಲ್‌ ಆ್ಯಪ್‌

12:07 PM Nov 03, 2015 | sudhir |

ರಾಣಿಬೆನ್ನೂರು: ರೈತರಿಗೆ ಹಾಗೂ ನಗರವಾಸಿಗಳಿಗೆ ಸ್ಥಳೀಯ ಸಿಡಿಲು ಅಥವಾ ಮಿಂಚಿನ ಮುನ್ಸೂಚನೆ ತಿಳಿದುಕೊಳ್ಳಲು ಕೇಂದ್ರ ಸರಕಾರದ ಭೂ ವಿಜ್ಞಾನ ಸಚಿವಾಲಯದ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆಯು ದಾಮಿನಿ ಎನ್ನುವ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿದೆ ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ| ಅಶೋಕ ಪಿ. ತಿಳಿಸಿದ್ದಾರೆ.

Advertisement

ಬುಧವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ದಿಶೆಯಲ್ಲಿ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆಯು ಭಾರತ ಸರಕಾರದ ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಸುಮಾರು 48 ಸಿಡಿಲು ಪತ್ತೆ ಸಂವೇದಕಗಳನ್ನು ಸ್ಥಾಪಿಸಲಾಗಿದ್ದು, ಈ ಎಲ್ಲ ಸಂವೇದಕಗಳು ಭಾರತೀಯ ಉಷ್ಣವಲಯದ
ಹವಾಮಾನ ಸಂಸ್ಥೆಯ ಕೇಂದ್ರ ಸಂಸ್ಕರಣಾ ಘಟಕ್ಕೆ ಸಂಪರ್ಕ ಹೊಂದಿದೆ ಎಂದರು.

ಈ ಸಂವೇದಕಗಳು ಗುಡುಗು ಸಹಿತ ಸಿಡಿಲಿನ ಹೊಡೆತಗಳ ಚಲನೆಯ ಬಗ್ಗೆ ನಿಖರವಾದ ಮಾಹಿತಿ ಒದಗಿಸುತ್ತದೆ. ಈ ಆ್ಯಪ್‌ ಪ್ರಸ್ತುತ ಸಿಡಿಲಿನ ಹೊಡೆತಗಳ ನಿಖರವಾದ ಸ್ಥಳಗಳನ್ನು ಗುರುತಿಸುತ್ತದೆ ಮತ್ತು ನಮ್ಮ ಸುತ್ತಮುತ್ತಲಿನ 20ರಿಂದ 40 ಚದರ ಕಿಮೀ ವರೆಗೆ ಸಂಭವನೀಯ ಗುಡುಗು ಸಹಿತ ಮಿಂಚಿನ ಚಲನೆಯ ಬಗ್ಗೆ ಕನಿಷ್ಠ 30ರಿಂದ 45 ನಿಮಿಷಗಳ ಮೊದಲು ಎಚ್ಚರಿಕೆ ನೀಡುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬಿಹಾರ ಚುನಾವಣೆ 2020: ಬಿಜೆಪಿ ಪ್ರಣಾಳಿಕೆ ಬಿಡುಗಡೆ, 19 ಲಕ್ಷ ಉದ್ಯೋಗ, ಕೋವಿಡ್ ಲಸಿಕೆ ಉಚಿತ

ಸದ್ಯಕ್ಕೆ ಎಚ್ಚರಿಕೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ದೊರೆಯಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಈ ಸೇವೆ ಲಭ್ಯವಿದೆ. ದಾಮಿನಿ ಆ್ಯಪ್‌ನಲ್ಲಿ ಗುಡುಗು ಮತ್ತು ಸಿಡಿಲಿನ ಕೆಲವು ಸಾಮಾನ್ಯ ಮಾಹಿತಿಯನ್ನು ಒಳಗೊಂಡಿದ್ದು, ಈ
ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿಯ ಪಟ್ಟಿ ಮೊಬೈಲ್‌ ಉಪಯೋಗಿಸುವ ಎಲ್ಲ ರೈತರು ಪ್ಲೆ ಸ್ಟೋರ್‌ನಲ್ಲಿ ಈ ಆ್ಯಪ್‌ ಡೌನಲೋಡ್‌ ಮಾಡಿಕೊಂಡು, ರೈತರು ತಮ್ಮ ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಪಿನ್‌ಕೋಡ್‌ ಮತ್ತು ಉದ್ಯೋಗವನ್ನು ನಮೂದು ಮಾಡಿ ನೋಂದಾಯಿಸಬೇಕು ಎಂದಿದ್ದಾರೆ.

Advertisement

ಹವಾಮಾನಶಾಸ್ತ್ರ ತಜ್ಞ ಡಾ| ಶಾಂತವೀರಯ್ಯ, ನೊಂದಾಯಿತ ಬಳಕೆದಾರರು ಆಯಾ ಪ್ರದೇಶದ ಮಿಂಚಿನ ಮುನ್ಸೂಚನೆ ಮತ್ತು ಎಚ್ಚರಿಕೆ ಮಾಹಿತಿ ಪಡೆಯಬಹುದು. ಈ ಆ್ಯಪ್‌ನ ಇನ್ನೊಂದು ವಿಶೇಷತೆಯೆಂದರೆ ನಿಮ್ಮ ಸಂಬಧಿಕರ ಪ್ರದೇಶದ ಮಾಹಿತಿ ನೋಂದಾಯಿಸಿದರೆ ಆಯಾ ಪ್ರದೇಶದ ಸಿಡಿಲಿನ ಮುನ್ಸೂಚನೆಯನ್ನೂ ತಮ್ಮದೇ ಮೊಬೈಲ್‌ನಲ್ಲಿ ಪಡೆಯಬಹುದು.
ಆದ್ದರಿಂದ ದಾಮಿನಿ ಮೊಬೈಲ್‌ ಆ್ಯಪ್‌ ಸೇವೆ ಸದುಪಯೋಗಪಡಿಸಿಕೊಳ್ಳುವುದರಿಂದ ರೈತರು ಮತ್ತು ಜಾನುವಾರಗಳು
ಸುರಕ್ಷಿತ ಸ್ಥಳಗಳಿಗೆ ಹೋಗಿ ಪ್ರಾಣ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ಮಾಡಿ ಪಡೆಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next