Advertisement

ಚುನಾವಣಾಧಿಕಾರಿಗಳ ಕಣ್ಗಾವಲಿಗೆ ಮೊಬೈಲ್‌ಆ್ಯಪ್‌

12:49 PM Apr 06, 2018 | Team Udayavani |

ಹುಣಸೂರು: ರಾಜ್ಯದಲ್ಲೇ ಪ್ರಥಮ ಬಾರಿಗೆ ಮೊಬೈಲ್‌ಆ್ಯಪ್‌ ಬಳಸಿ ಚುನಾವಣೆ ಕಾರ್ಯಕ್ಕೆ ನೇಮಕವಾಗಿರುವ ಅಧಿಕಾರಿಗಳ ಮೇಲೆ ಕಣ್ಗಾವಲಿಡಲು ಕ್ಷೇತ್ರದ ಚುನಾವಣಾಧಿಕಾರಿ ಮುಂದಾಗಿದ್ದಾರೆ.

Advertisement

ಸೆಕ್ಟರಲ್‌ ಮ್ಯಾಜಿಸ್ಟೇಟರ್‌ ಹಾಗೂ ಪ್ಲೆ„ಯಿಂಗ್‌ ಸ್ಕ್ವಾಡ್‌ನ‌ ಕಾರ್ಯ ವೈಖರಿಯ ಮೇಲೆ ನಿಗಾ ಇಡಲು ಹುಣಸೂರು ವಿಧಾನಸಭೆ ಕ್ಷೇತ್ರದ ಚುನಾವಣಾಧಿಕಾರಿ ಕೆ.ನಿತೀಶ್‌, ಚುನಾವಣಾ ತಹಶೀಲ್ದಾರ್‌ ರಕ್ಷಿತ್‌ ಈ ಹೊಸ ಪ್ರಯೋಗಕಕ್ಕೆ ಮುಂದಾಗಿದ್ದಾರೆ.

ಹಿಂದೆ ವರದಿಯೇ ಆಧಾರ: ಸೆಕ್ಟರಲ್‌ ಮ್ಯಾಜಿಸ್ಟೇಟರ್‌ ಹಾಗೂ ಪೈಯಿಂಗ್‌ ಸ್ಕ್ವಾಡ್‌ನ‌ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಿದ್ದಾರೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಇವರ ಕಾರ್ಯವೈಖರಿ ಹೇಗಿದೆ ಎಂಬುದನ್ನು ತಿಳಿಯಲು ಹಿಂದೆ ಅವರು ನೀಡುತ್ತಿದ್ದ ವರದಿಯೇ ಆಧಾರವಾಗಿತ್ತು.

ಇದೀಗ ಆ್ಯಪ್‌ ಮೂಲಕ ಕಣ್ಗಾವಲು: ಯುವ ಅಧಿಕಾರಿಗಳು ಚುನಾವಣೆ ಕಾರ್ಯವೈಖರಿಯ ಸುಧಾರಣೆಗಾಗಿ ಹೊಸಚಿಂತನೆ ನಡೆಸಿದಾಗ, ಹೊಳೆದದ್ದೇ ಈ ಮೊಬೈಲ್‌ ಆ್ಯಪ್‌, ಗೂಗಲ್‌ ಮೂಲಕ ಲೈಪ್‌ 360 ಆ್ಯಪ್‌ಡೌನ್‌ಲೋಡ್‌ ಮಾಡಿಕೊಂಡಿದ್ದು, ಈಗಾಗಲೇ ಸೆಕ್ಟರಲ್‌ ಮ್ಯಾಜಿಸ್ಟೇಟರ್‌ ಹಾಗೂ ಪ್ಲೆ„ಯಿಂಗ್‌ ಸ್ಕ್ವಾಡ್‌ನ‌ ಅಧಿಕಾರಿಗಳ ಮೊಬೈಲ್‌ನಲ್ಲೂ ಈ ಆ್ಯಪ್‌ ಅಳವಡಿಸಲಾಗಿದೆ.

ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಧಿಕಾರಿಗಳ ಚಲನವಲನವನ್ನು ಕಚೇರಿಯಲ್ಲೇ ಕುಳಿತು ವೀಕ್ಷಿಸಬಹುದು. ದೂರು ಬಂದ ವೇಳೆ ಮೊಬೈಲ್‌ ವಾಹನಗಳಲ್ಲಿರುವ ಅಧಿಕಾರಿಗಳಿಗೆ ಸೂಚನೆ ಹಾಗೂ ಮಾರ್ಗದರ್ಶನ ನೀಡಲು ಸಹಕಾರಿಯಾಗಿದೆ. ಇದು ಅರಣ್ಯ ಇಲಾಖೆ ಈಗಾಗಲೇ ಜಾರಿಗೆ ತಂದಿರುವ ಹೆಜ್ಜೆ, ಗಸ್ತು ಮಾದರಿಯಲ್ಲಿದೆ.

Advertisement

ಈ ಹೊಸ ಪರಿಕಲ್ಪನೆಯು ಹುಣಸೂರು ವಿಧಾನಸಭೆ ಕ್ಷೇತ್ರ-212ರಲ್ಲಿ ಚುನಾವಣೆ ಘೋಷಣೆಯ ಮಾರನೇ ದಿನದಿಂದಲೇ ಜಾರಿಗೊಳಿಸಲಾಗಿದ್ದು, ಕುಳಿತಲ್ಲೇ ಮಾಹಿತಿ ಪಡೆಯುತ್ತಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ಮೊಬೈಲ್‌ ಆ್ಯಪ್‌ ಜಾರಿಗೆ ತರಲು ಸೂಚಿಸಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ನಿತೀಶ್‌ ಉದಯವಾಣಿಗೆ ತಿಳಿಸಿದರು.

ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಿ: ಚುನಾವಣೆ ಹಿನ್ನೆಲೆಯಲ್ಲಿ ಅನಧಿಕೃತ ಸಭೆ, ವಸ್ತುಗಳು, ಹಣ ಹಂಚುವುದು, ಬಾಡೂಟ ಹಾಕಿಸುವುದು, ಅಕ್ರಮ ಕೂಟ, ಟೋಕನ್‌ ನೀಡಿ ಹೋಟೆಲ್‌,ಬಾರ್‌ಗಳಿಗೆ ಕಳುಹಿಸುವುದು ಸೇರಿದಂತೆ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂ ಸಿರುವ ಯಾವುದೇ ಪ್ರಕರಣ ಕಂಡುಬಂದಲ್ಲಿ ಸಾರ್ವಜನಿಕರು ಚುನಾವಣಾ ಕಂಟ್ರೋಲ್‌ ರೂಂ ದೂ.ಸಂ. 08222-252046, ಎ.ಸಿ.ಕಚೇರಿ ದೂ. 08222-252073 ಹಾಗೂ ಚುನಾವಣಾಧಿಕಾರಿ 8628874079 ದೂರು ಸಲ್ಲಿಸಬಹುದೆಂದು ಎಸಿ ಕೋರಿದ್ದಾರೆ.

ಎಲ್ಲಾ ಅಧಿಕಾರಿಗಳು ಅವರವರ ಮೊಬೈಲ್‌ನಲ್ಲಿ ಈ ಆ್ಯಪ್‌ಡೌನ್‌ಲೋಡ್‌ ಮಾಡಿಕೊಂಡಿದ್ದು, ಸೆಕ್ಟರಲ್‌ ಮ್ಯಾಜಿಸ್ಟೇಟರ್‌ ಹಾಗೂ ಪ್ಲೆ„ಯಿಂಗ್‌ ಸ್ಕ್ವಾಡ್‌ನ‌ ಅಧಿಕಾರಿಗಳಿಗೆ ಪ್ರತ್ಯೇಕ ಆ್ಯಪ್‌ ನೀಡಲಾಗಿದೆ. ನಿತ್ಯ ಅವರ ಕಾರ್ಯವೈಖರಿಯನ್ನು ಕಚೇರಿಯಲ್ಲೇ ಕುಳಿತು ಗಮನಿಸಲಾಗುತ್ತಿದೆ. ಇದರಿಂದ ಪರಿಣಾಮಕಾರಿ ಕೆಲಸವಾಗುತ್ತಿದೆ.
-ಪ್ರೊಬೇಷನರಿ ಕೆ.ಎ.ಎಸ್‌. ಅಧಿಕಾರಿ ರಕ್ಷಿತ್‌.

* ಸಂಪತ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next