ಚೆನ್ನೈ : ತಮಿಳುನಾಡಿನ ಈರೋಡ್‌ನಲ್ಲಿ ಫೆ.27ರಂದು ನಡೆಯಲಿರುವ ಉಪಚುನಾವಣೆಯಲ್ಲಿ, ನಟ ಕಮಲ್ ಹಾಸನ್ ನೇತೃತ್ವದ ಮಕ್ಕಳ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷವೂ ಕಾಂಗ್ರೆಸ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದೆ.
ಕ್ಷೇತ್ರದ ಮಾಜಿ ಶಾಸಕರಾದ ತಿರುಮಹನ್ ಎವರಾ ಅವರ ಅಕಾಲಿಕ ನಿಧನದ ಹಿನ್ನೆಲೆ ಉಪ ಚುನಾವಣೆ ನಡೆಯುತ್ತಿದೆ. ಡಿಎಂಕೆ ನೇತೃತ್ವದ ಮೈತ್ರಿ ಒಕ್ಕೂಟದ ಸೆಕ್ಯೂಲರ್ ಪ್ರೊಗ್ರೆಸಿವ್ ಅಲೈಯನ್ಸ್(ಎಸ್‌ಪಿಎ)ನ ಅಭ್ಯರ್ಥಿಯಾಗಿ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವರಾದ ಇಳಂಗೋವನ್ ಸ್ಪರ್ಧಿಸಲಿದ್ದಾರೆ.
ಈ ಕುರಿತು ಮಾತನಾಡಿರುವ ಕಮಲ್, ಇಳಂಗೋವನ್ ಅವರಿಗೆ ಗೆಲುವಿಗೆ ಅಗತ್ಯವಿರುವ ಸಂಪೂರ್ಣ ಬೆಂಬಲವನ್ನು ಎಂಎನ್‌ಎಂ ನೀಡಲು ಬದ್ಧವಾಗಿದೆ. ಕೋಮು ಶಕ್ತಿಗಳ ವಿರುದ್ಧದ ಹೋರಾಟ ಇದಾಗಿದ್ದು, ಇದು ರಾಷ್ಟ್ರೀಯ ಮಗತ್ವದ ಕ್ಷಣವೂ ಹೌದು. ಹಾಗಾಗಿ ನಮ್ಮ ಪಕ್ಷದಿಂದ ಎಸ್‌ಪಿಎಗೆ ಸಂಪೂರ್ಣ ಬೆಂಲವಿದೆ ಎಂದಿದ್ದಾರೆ. ಕಮಲ್ ಬೆಂಬಲಕ್ಕೆ ಡಿಎಂಕೆ ಅಧ್ಯಕ್ಷ, ಮುಖ್ಯಮಂತ್ರಿ ಸ್ಟಾಲಿನ್ ಅಭಿನಂದನೆ ತಿಳಿಸಿದ್ದಾರೆ.