ಮಂಗಳೂರು: ಪರೀಕ್ಷೆಯಲ್ಲಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಅಂಕ ಸಿಕ್ಕಿದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುದ್ರೋಳಿಯಲ್ಲಿ ಸಂಭವಿಸಿದೆ.
Advertisement
ಕುದ್ರೋಳಿ ಟಿಪ್ಪು ಸುಲ್ತಾನ್ ನಗರದ ನಿವಾಸಿ ಖತೀಜಾ ರೀನಾ(16) ಮೃತಪಟ್ಟವರು.
ಈಕೆ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಮುಂದಿನ ಪರೀಕ್ಷೆಯಲ್ಲಿ ಬ್ಯಾಚ್‌ನಲ್ಲೇ ಫಸ್ಟ್ ಬರುವುದಾಗಿ ತಾಯಿಯಲ್ಲಿ ಹೇಳಿದ್ದರು.
ಆದರೆ ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಅಂಕ ಬಂದಿರಲಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ. ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಇದನ್ನೂ ಓದಿ: ಪಾಂಗಾಳ: ಚೂರಿಯಿಂದ ಇರಿದು ಯುವಕನ ಬರ್ಬರ ಹತ್ಯೆ
Advertisement