Advertisement

ಎಂಎಂಎಲ್‌ ಸಂಸ್ಥೆಗೆ ಮರಳು ಬ್ಲಾಕ್‌ ನಿರ್ವಹಣೆ ಹೊಣೆ?

11:15 AM Sep 17, 2017 | Team Udayavani |

ರಾಯಚೂರು: ರಾಜ್ಯಾದ್ಯಂತ ಸರ್ಕಾರಿ ಇಲಾಖೆಗಳ ಕಾಮಗಾರಿಗೆ ಕೊರತೆಯಾಗುತ್ತಿರುವ ಮರಳು ಪೂರೈಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮರಳು ಬ್ಲಾಕ್‌ಗಳ ನಿರ್ವಹಣೆ ಹೊಣೆಯನ್ನು ಮೈಸೂರು ಮಿನರಲ್‌ ಲಿಮಿಟೆಡ್‌ ಸಂಸ್ಥೆಗೆ ವಹಿಸಲು ಚಿಂತನೆ ನಡೆಸಿದೆ.

Advertisement

ಮೊದಲ ಹಂತದಲ್ಲಿ ರಾಯಚೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿ ಬಳಿಕ ರಾಜ್ಯಾದ್ಯಂತ ವಿಸ್ತರಿಸಲು ಉದ್ದೇಶಿಸಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧೀನ ಸಂಸ್ಥೆಯಾಗಿರುವ ಎಂಎಂಎಲ್‌ ಈ ಹಿಂದೆಯೂ ಸಾಕಷ್ಟು ಕಾಮಗಾರಿ ನಿರ್ವಹಿಸಿತ್ತು. ಕಾರಣಾಂತರಗಳಿಂದ ಅದು ಸ್ವಾಯತ್ತತೆ ಕಾಪಾಡಿಕೊಂಡು ಸ್ವತಂತ್ರವಾಗಿತ್ತು. ಆದರೆ, ಈಗ ಹೊಸ ಮರಳು ನೀತಿಯಿಂದ ಉಂಟಾಗಿ ರುವ ಸಮಸ್ಯೆಗಳ ನಿವಾರಣೆಗೆ ಹಳೇ ಸಂಸ್ಥೆ ನೆರವು ಪಡೆಯಲು ಇಲಾಖೆ ಚಿಂತನೆ ನಡೆಸಿದೆ. ಈಗಾಗಲೇ, ಇಲಾಖೆ ಉನ್ನತ ಅಧಿಕಾರಿಗಳು ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಎಂಎಂಎಲ್‌ ಸಂಸ್ಥೆ ಪ್ರತಿನಿಧಿಗಳು ರಾಯಚೂರು ಜಿಲ್ಲೆಗೆ ಬಂದು ಪರಿಶೀಲನೆ ನಡೆಸಿದ್ದಾರೆ.

ಏನಿದು ಸಮಸ್ಯೆ?: 2016ರ ಮರಳು ನೀತಿಯಿಂದ ಸರ್ಕಾರಿ ಕಾಮಗಾರಿಗಳಿಗೂ ಮರಳು ಸಿಗುವುದು ಕಷ್ಟವಾಗಿದೆ. ಸರ್ಕಾರಿ ಯೋಜನೆಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರತ್ಯೇಕ ಮರಳು ಬ್ಲಾಕ್‌ಗಳನ್ನು ಮೀಸಲಿಟ್ಟಿದೆ. ಅವುಗಳನ್ನು ಲೀಜ್‌ ಪದಟಛಿತಿಯಡಿ ಸರ್ಕಾರದ ಯಾವುದೇ ಇಲಾಖೆ ಪಡೆಯಬಹುದು.

ಆದರೆ, ಲೀಜ್‌ ಹಣವನ್ನು ಮುಂಗಡ ಪಾವತಿಬೇಕು ಎಂಬ ಷರತ್ತು ಒಡ್ಡಿದ್ದರಿಂದ ಯಾವುದೇ ಇಲಾಖೆ ನಿರ್ವಹಣೆ ಜವಾಬ್ದಾರಿ ಪಡೆಯಲು ಮುಂದಾಗುತ್ತಿಲ್ಲ. 5 ತಿಂಗಳಿಂದ ಈ ವಿಚಾರದಲ್ಲಿ ಇಲಾಖೆಗಳ ಮಧ್ಯೆ ಹಗ್ಗಜಗ್ಗಾಟ ನಡೆದಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಎಂಎಂಎಲ್‌ ಪಾತ್ರವೇನು?: ಎಂಎಂಎಲ್‌ ಸಂಸ್ಥೆ ಗಣಿ ಭೂ ವಿಜ್ಞಾನ ಇಲಾಖೆ ಅಧೀನ ಸಂಸ್ಥೆಯಾಗಿ ಮತ್ತೆ ಕಾರ್ಯ ನಿರ್ವಹಿಸಲಿದೆ. ವಿವಿಧ ಇಲಾಖೆಗಳಿಂದ ಬರುವ ಮರಳಿನ ಬೇಡಿಕೆ ಈಡೇರಿಸುವುದು ಸಂಸ್ಥೆ ಮುಖ್ಯ ಕಾರ್ಯ. ಈ ವಿಚಾರದಲ್ಲಿ ಸರ್ಕಾರದ ಯಾವ ನಿಯಮ ಉಲ್ಲಂಘಿಸುವಂತಿಲ್ಲ. ಸರ್ಕಾರಿ ಬ್ಲಾಕ್‌ಗಳಲ್ಲಿ ಮೀಟರ್‌ 514 ರೂ. ನಿಗದಿ ಮಾಡಿದ್ದು, ಅದರನ್ವಯ ಅಗತ್ಯದಷ್ಟು ಮರಳು ನೀಡಲಾಗುತ್ತದೆ. ನೂನ ತಂತ್ರ ಯಶಸ್ವಿಯಾದರೆ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ.

Advertisement

ರಾಜ್ಯಾದ್ಯಂತ ವಿಸ್ತರಣೆ?: ಜಿಲ್ಲೆಯಲ್ಲಿ ಕೃಷ್ಣೆ, ತುಂಗ ಭದ್ರಾದಂಥ ವಿಶಾಲ ವ್ಯಾಪ್ತಿಯುಳ್ಳ ನದಿಗಳಿದ್ದು, ಮರಳು ಉತVನನಕ್ಕೆ ಹೇರಳ ಅವಕಾಶವಿದೆ. ಜೊತೆಗೆ ಉಭಯ ನದಿಗಳಲ್ಲಿ 43 ಬ್ಲಾಕ್‌ಗಳನ್ನುರಚಿಸಿದ್ದು, ಅವುಗಳಲ್ಲಿ 5 ಬ್ಲಾಕ್‌ಗಳನ್ನು ಸರ್ಕಾರಿ  ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ಅದರಲ್ಲಿ  ಒಂದು ಬ್ಲಾಕ್‌ನ್ನು ವೈಟಿಪಿಎಸ್‌ಗೆ ನೀಡಲಾಗಿದೆ. ಉಳಿದ ನಾಲ್ಕನ್ನು ಎಂಎಂಎಲ್‌ ಸಂಸ್ಥೆಗೆ ನೀಡಿ ಎಲ್ಲ
ಇಲಾಖೆಗಳಿಗೆ ಮರಳು ಪೂರೈಸಲು ಚಿಂತನೆ ನಡೆದಿದೆ ಎನ್ನುತ್ತಾರೆ ಅಧಿಕಾರಿಗಳು.

ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಮರಳು ಬ್ಲಾಕ್‌ಗಳ ನಿರ್ವಹಣೆಗೆ 5 ತಿಂಗಳಿಂದ ಯಾವುದೇಇಲಾಖೆ ಮುಂದೆ ಬಂದಿಲ್ಲ. ಈ ನಿಟ್ಟಿನಲ್ಲಿ ಮೈಸೂರು ಮಿನರಲ್‌ ಲಿಮಿಟೆಡ್‌ ಸಂಸ್ಥೆಗೆ ಜವಾಬ್ದಾರಿ ನೀಡಲು ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ನಿಯಮಬಾಹಿರ ಮರಳು ಹಂಚಿಕೆ ನಡೆಸಲಾಗದು.
– ಪುಷ್ಪಲತಾ, ಗಣಿ ಮತ್ತು ಭೂ
ವಿಜ್ಞಾನ ಇಲಾಖೆ ಜಿಲ್ಲಾಧಿಕಾರಿ

– ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next