ಬೆಂಗಳೂರು: ದೇಶದ ನಂ.1 ಪಿಕಪ್ ಬ್ರ್ಯಾಂಡ್ಎನಿಸಿರುವ ಬೊಲೆರೊ ಪಿಕ್ ಅಪ್ ತಯಾರಕ ಸಂಸ್ಥೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ತನ್ನ ಹೊಚ್ಚ ಹೊಸ “ಬೊಲೆರೊ ಮ್ಯಾಕ್ಸ್ ಪಿಕ್-ಅಪ್’ ಶ್ರೇಣಿಯನ್ನು ಬಿಡುಗಡೆ ಮಾಡಿದೆ.
7.85 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಪ್ರಾರಂಭವಾಗುವ ಹೊಚ್ಚ ಹೊಸ ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಶ್ರೇಣಿಯನ್ನು ಗ್ರಾಹಕರು ಮತ್ತು ಆಪರೇಟರ್ ಗಳಿಗೆ ಅಭೂತಪೂರ್ವ ಮೌಲ್ಯವರ್ಧನೆ ನೀಡಲು ಶಕ್ತಿಯುತ ವೈಶಿಷ್ಟ್ಯಗಳು ಹಾಗೂ ಕಾರ್ಯಕ್ಷಮತೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಹಿಂದೆಂದಿಗಿಂತಲೂ ಹೆಚ್ಚಿನ ಮೌಲ್ಯವನ್ನು ನೀಡಲು ಇದು “ಸ್ಮಾರ್ಟ್ ಎಂಜಿನಿಯರಿಂಗ್’ ಅನ್ನು ಸಹ ಒಳಗೊಂಡಿದೆ. ಕನಿಷ್ಠ 24,999 ರೂ.ಗಳ ಡೌನ್ ಪೇಮೆಂಟ್ ಪಾವತಿಸಿ ಕಾಯ್ದಿರಿಸಬಹುದು. ತಡೆರಹಿತ ಖರೀದಿ ಮತ್ತು ಮಾಲೀಕತ್ವದ ಅನುಭವಕ್ಕಾಗಿ ಆಕರ್ಷಕ ಹಣಕಾಸು ಯೋಜನೆಗಳನ್ನು ಸಹ ಮಹೀಂದ್ರಾ ನೀಡುತ್ತದೆ.
ಗರಿಷ್ಠ ಪೇಲೋಡ್ ಸಾಮರ್ಥ್ಯ: ಎಂ ಆ್ಯಂಡ್‌ಎಂನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಮಾತನಾಡಿ, ಹೊಚ್ಚ ಹೊಸ ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಶ್ರೇಣಿಯು ಅತ್ಯಾಧುನಿಕ ವೈಶಿಷ್ಟ್ಯಗಳು, ಸಾಟಿಯಿಲ್ಲದ ಶಕ್ತಿ, ಗರಿಷ್ಠ
ಪೇಲೋಡ್ ಸಾಮರ್ಥ್ಯಗಳು ಮತ್ತು ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ. ಭಾರತ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಅತ್ಯಂತ ಬದ್ಧವಾಗಿರುವ ಕಂಪನಿ ನಮ್ಮದಾಗಿದೆ ಎಂದರು.
ಎಂ ಆ್ಯಂಡ್ ಎಂನ ಆಟೋಮೋಟಿವ್ ಟೆಕ್ನಾಲಜಿ ಮತ್ತು ಉತ್ಪನ್ನ ಅಭಿವೃದ್ಧಿ ವಿಭಾಗದ ಅಧ್ಯಕ್ಷ ಆರ್.ವೇಲುಸಾಮಿ ಮಾತನಾಡಿ, 2 ಟನ್ ವರೆಗಿನ ಪೇಲೋಡ್‌ಗಳನ್ನು ಪೂರೈಸಲು ಟಾರ್ಕ್ ಮತ್ತು ಶಕ್ತಿಯನ್ನು ಹೆಚ್ಚಿಸಲಾಗಿದೆ. ಕಾರಿನ ಮಾದರಿಯಲ್ಲಿ ಮ್ಯಾಕ್ಸ್ ಸಂಪರ್ಕ ತಂತ್ರಜ್ಞಾನವನ್ನು ಸಹ ಈ ವಾಹನದೊಂದಿಗೆ ಸಂಯೋಜಿಸಿದ್ದೇವೆ. ಮಹೀಂದ್ರಾ ರಿಸರ್ಚ್ ವ್ಯಾಲಿಯ ಎಂಜಿನಿಯರ್‌ಗಳ ತಂಡವು ಮೂರು ವರ್ಷಗಳ ಕಾಲ ಮಾಡಿದ ಕೆಲಸದ ಫಲವಾಗಿ ಹೊಸ ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಶ್ರೇಣಿ ಅಭಿವೃದ್ಧಿಗೊಳಿಸಲಾಗಿದೆ ಎಂದರು.