ಮಂಗಳೂರು: ಮೊಬೈಲ್ ಬಳಕೆ ಮಾಡುವಾಗ ತಾಯಿ ಗದರಿದರೆಂದು ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪದವು ಬಿ ಗ್ರಾಮದ ಅಪಾರ್ಟ್ಮೆಂಟ್ ವೊಂದರಲ್ಲಿ ನಡೆದಿದೆ.
ಜಗದೀಶ್ – ವಿನಯ ದಂಪತಿಯ ಮಗ ಜ್ಞಾನೇಶ್ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ.
ಸೋಮವಾರ (ಜ.30 ರಂದು) ಜ್ಞಾನೇಶ್ ಮೊಬೈಲ್ ಬಳಕೆ ಮಾಡುತ್ತಿದ್ದ. ಯಾವಾಗಲೂ ಮೊಬೈಲ್ ಬಳಕೆ ಮಾಡುತ್ತೀಯ ಎಂದು ತಾಯಿ ವಿನಯ ಸ್ವಲ್ಪ ಗದರಿಸುವ ಧ್ವನಿಯಲ್ಲಿ ಮಗ ಜ್ಞಾನೇಶ್ ಗೆ ಬುದ್ಧಿ ಹೇಳಿದ್ದಾರೆ. ಇದೇ ಕಾರಣಕ್ಕೆ ಬೇಸರದಲ್ಲಿ ತಾನು ಸ್ನಾನ ಮಾಡಿ ಬರುವುದಾಗಿ ಹೇಳಿ ರೂಮಿನೊಳಗೆ ಹೋದ ಜ್ಞಾನೇಶ್ ಸಮಯವಾದರೂ ಬಾರದಿದ್ದಾಗ ತಂದೆ ಜಗದೀಶ್ ಬಾತ್ ರೂಮ್ ಬಳಿಯಿರುವ ಕಿಟಕಿಯ ಮೂಲಕ ರೂಮಿನೊಳಗೆ ಹೋಗಿ ನೋಡಿದಾಗ ಜ್ಞಾನೇಶ್ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದನ್ನು ನೋಡಿದ್ದಾರೆ. ಕೂಡಲೇ ನೇಣು ಬಿಗಿದ ವೇಲನ್ನು ಕತ್ತರಿಸಿ ಕೆಳಗೆ ಇಳಿಸಿ ನೋಡಿದಾಗ ಮೃತ ನಾಗಿರುವುದು ಕಂಡುಬಂದಿದೆ.
ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.